ಮದ್ಯಪಾನ ಮುಕ್ತ ಕರ್ನಾಟಕ ಆಂದೋಲನ ಬೃಹತ್ ರ್‍ಯಾಲಿ.

ಕೊಪ್ಪಳ ಅ.೧೭ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೋಂದಿಗೆ ನಡೆದ ಬೃಹತ್ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದ ವಿದ್ವಾಂಸರಾದ ಮುಫ್ತಿವ ಇಮಾಮ್ ಜನಾಬ ನಜೀರ ಅಹ್ಮದ್ ಮಸ್ಜೀದ-ಎ-ಯುಸುಫಿಯಾ ರವರು ಮದ್ಯಪಾನವನ್ನು ನೀಷೆಧಿಸಲು ಸಮಾಜದಲ್ಲಿರುವ ಎಲ್ಲಾಸಮುದಾಯಗಳು ತಮ್ಮಬೇಂಬಲವನ್ನು ನಿಡಿ ಸಮಾಜದಿಂದ ಈ ಪಿಡುಗನ್ನು ನೀರ್ಮೂಲನೆ ಮಾಡಲು ಪಣತೊಡಬೇಕೇಂದು ಕರೆಕೊಟ್ಟರು. ಜೈನ್‌ಸಮಾಜದ ಮುಕಂಡರಾದ ತೇಜರಾಜ ಮಾತಾನಾಡಿ ಮಧ್ಯಪಾನವನ್ನು ಎಲ್ಲಾ ಸಮುದಾಯಾಗಳಲ್ಲಿ ಕೆಟ್ಟದೆಂದು ಭಾವಿಸಲಾಗಿದ್ದು ಅದನ್ನು ನೀಷೆಧಿಸಲು ಸರ್ಕಾರಕ್ಕೆ ಜೈನ್‌ಸಮುದಾಯ ಆಗ್ರಹಿಸುತ್ತದೆ ಎಂದು ಹೆಳಿದರು ವಕೀಲರ ಸಂಘದ ಜಿಲ್ಲಾ ಅಧ್ಯಕ್ಷರಾದ ರಾಘುವೇಂದ್ರ ಪಾನಗಂಟಿರವರು ದೇಶದಲ್ಲಿ ಯಾವರಿತಿ ಸ್ವಚ್ಚಭಾರತವನ್ನು ಮಾಡಲು ಸಾಧ್ಯವಿಲ್ಲವೇಂದು ಭಾವಿಸಲಾಗಿತ್ತು ಅದರೆ ದೇಶದಲ್ಲಿ ಅಂದೊಲನಗಳ ಮೂಲಕ ಸ್ವಚ್ಚಭಾರತ ಅಭಿಯಾನ ನಡೆಸಿ ಯಶಸ್ವಿಗೂಳಿಸಲಾಗುತ್ತಿದೆಯೊ ಅದೆರಿತಿ ಮಧ್ಯಪಾನವನ್ನು ಅಂದೋಲನ ಮತ್ತು ಅಭಿಯಾನಗಳ ಮೂಲಕ ನೀಷೇಧಿಸಬಹುದೆಂದು ಅಭಿಪ್ರಾಯಪಟ್ಟರು. ಜೆ.ಡಿ.ಎಸ್ ಮುಖಂಡರಾದ ವೀರೇಶ ಮಹಾಂತಯ್ಯನಮಠ ರವರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾ ಘಟಕದ ಅಂದೊಲನಕ್ಕೆ ಶುಭಹಾರೈಸಿದರು. ರಾಜ್ಯ ಸರ್ಕಾರಕ್ಕೆ ಮಧ್ಯಾಪಾನ ನೀಷೆಧಿಸಲು ಅಗ್ರಹಿಸುತ್ತ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಧ್ಯಕ್ಷರಾದ ಜನಾಬ ಅಕ್ಬರ್ ಅಲಿ ಉಡುಪಿಯವರು ಮಧ್ಯಪಾನದಿಂದಾಗುವ ಅನಹುತಗಳನ್ನು ವಿವರಿಸುತ್ತ ಯುವಜನತೆ ಅಮಲು ಪದಾರ್ಥಗಳಿಂದ ಅರೊಗ್ಯ ಹಾಳುಮಾಡಿಕೊಳ್ಳುತ್ತಿದ್ದು. ಹಾಗೂ ರಸ್ತೆ ಅಪಘಾತಗಳು, ಕೌಟುಂಬಿಕ ಕಲಹಗಳಾಗುತ್ತಿದ್ದು ಕಾರಣ ಸಮಾಜದಲ್ಲಿ ಮಧ್ಯಪಾನ ಎಂಬ ಪಿಶಾಚಿಯನ್ನು ತೋಲಗಿಸಲು ಎಲ್ಲಾ ಸಂಘ ಸಂಸ್ಥೆಗಳಿಗೆ ಹಾಗೂ ಯುಜನತೆಗೆ ಕರೆಕೊಟ್ಟು, ಮಧ್ಯಪಾನ ನೀಷೆಧಿಸಲು ರಾಜ್ಯಸರ್ಕಾರವು ಇಚ್ಚಾಶಕ್ತಿಯನ್ನು ತೊರಬೇಕು ಮತ್ತು ಸೂಕ್ತವಾಗಿ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯವನ್ನು ಮಧ್ಯಪಾನ ಮುಕ್ತ ರಾಜ್ಯವನ್ನಾಗಿಸಲು ಉಗ್ರಹೋರಾಟ ಮಾಡಲಾಗುವುದೆಂದು ಹೆಳಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ತಾಹೇರ್ ಹುಸೇನ್, ರಾಜ್ಯ ಉಪಾಧ್ಯಕ್ಷ ಶ್ರೀಕಾಂತ ಸಾಲಿಯಾನ್, ರಾಜ್ಯ ಕಾರ್ಯದರ್ಶಿ ತಾಜುದ್ಧೀನ್ ಹುಮನಾಬಾದ್, ಜೈನ್ ಸಮಾಜದ ಹಾಗು ವಕಿಲರ ಸಂಘದ

ಮತ್ತು ಲಯನ್ಸ್‌ಕ್ಲಬ್‌ನ ಅಧ್ಯಕ್ಷರು, ಹೈ.ಕ ಯುವಘಟಕ ಅಧ್ಯಕ್ಷರು ಖಾಸಗಿ ಶಿಕ್ಷಣಸಂಸ್ಥೆಗಳ ಓಕ್ಕೂಟ, ಕೊಪ್ಪಳ ಯುಥ್ ಆರ್ಗನೈಜೆಶನ್, ಜಮಾತೆ ಇಸ್ಲಾಮಿ ಹಿಂದ್ ಕೊಪ್ಪಳ, ಎಸ್.ಐ.ಓ ಕೊಪ್ಪಳ, ಐ.ಆರ್.ಸಿ ಕೊಪ್ಪಳ, ಇಂಜಿನಿಯರ್‍ಸ್ ಅಶೋಶಿಯಷನ್ಸ್ ಕೊಪ್ಪಳ, ಆಟೊಸಂಘ ಕೊಪ್ಪಳ, ಇಮ್ದಾದ್ ಫೌಂಡೇಶನ್ ಬಹದ್ದೂರಬಂಡಿ, ಖಾಜಾಬಂದೆ ನವಾಜ್ ಟ್ರಸ್ಟ್, ವೇಲ್ಡಿಂಗ್ ಸಂಘ ಕೊಪ್ಪಳ. ಹಾಗೂ ಕೊಪ್ಪಳದ ಪಂಚ್‌ಕಮಿಟಿ, ನೌಜವಾನ್ ಕಮಿಟಿ, ಮಸ್ಜಿದಿನ ವ್ಯವಸ್ಥಾಪಕ ಕಮಿಟಿಯ. ಮತ್ತು ವಿವಿಧ ಸಂಘ ಸಂಸ್ಧೆಗಳ ಅಧ್ಯಕ್ಷರು ಪದಾದಿಕಾರಿಗಳು ಹಾಗೂ ಸದಸ್ಯರು ರಂದು  ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಘಟಕ ಕೊಪ್ಪಳ ಜಿಲ್ಲಾಧ್ಯಕ್ಷರಾದ ಆದೀಲ್ ಪಟೇಲ್, ಜಿಲ್ಲಾಸಂಚಾಲಕರಾದ ಮಹ್ಮದ್ ಆಲಿಮುದ್ದಿನ್, ಹಾಗೂ ಸಹಕಾರ್‍ಯದರ್ಶಿಯಾದ ಎಜಾಜ್ ಅಹ್ಮದ್ ಜಿಲ್ಲಾಖಜಾಂಚಿ ನಜಿರ್ ಅಹ್ಮದ್,ಮುದಗಲ್, ತಾಲೂಕ ಕಾರ್ಮಿಕರ ಘಟಕದ ಅಧ್ಯಕ್ಷರಾದ ಮಹೆಬೂಬ ಮಣ್ಣುರ್, ಕೊಪ್ಪಳ ಜಿಲ್ಲಾ ಯುವ ಮೋರ್ಚಾ ಘಟಕದ ಅಧ್ಯಕ್ಷರು ಯುಸುಫ್ ಮಾಳೆಕೊಪ್ಪ ಹಾಗೂ ಕೊಪ್ಪಳ ತಾಲೂಕ ಯುವ ಮೋರ್ಚಾ ಘಟಕದ ಅಧ್ಯಕ್ಷರು ಸಲಿಮ್ ಖಾದ್ರಿ ಹಾಗೂ ಪಕ್ಷದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ನಂತರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Please follow and like us:
error