fbpx

ಪ್ರಶಸ್ತಿ ಮನುಷ್ಯನ ಜವಾಬ್ದಾರಿ ಹೆಚ್ಚಿಸುತ್ತದೆ ವೆಂಕಟಸಿಂಗ್

  ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತನಿಗೆ ಬದ್ದತೆ, ಪ್ರಮಾಣಿಕತೆ ಹಾಗೂ ಕ್ರೀಯಾಶೀಲತೆಯಿಂದ ಕೆಲಸ ಮಾಡಿದರೆ ಆ ಪತ್ರಕರ್ತನಿಗೆ ಪ್ರಶಸ್ತಿಗಳು ಹುಡಿಕಿಕೊಂಡು ಬರುತ್ತವೆ. ಪ್ರಶಸ್ತಿಗಳು ಬಂದಷ್ಟು ಪತ್ರಕರ್ತನ ಜವಾಬ್ದಾರಿ ಹೆಚ್ಚಾಗುತ್ತದೆ ಎಂದು ಮಾಧ್ಯಮ ಅಕಾಡಮಿಯ ಪ್ರಶಸ್ತಿ ಪುರಸ್ಕೃತ ಹಾಗೂ ರಾಯಚೂರಿನ ಸುದ್ದಿಮೂಲಕ ಪತ್ರಿಕೆಯ ಪ್ರಧಾನ ಮುಖ್ಯ ವರದಿಗಾರ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಿ.ವೆಂಕಟಸಿಂಗ್ ಹೇಳಿದರು.
ಅವರು ಸೋಮವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದವರು ಏರ್ಪಡಿಸಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ ಇಂದು ಗ್ರಾಮೀಣ ಪತ್ರಿಕೋಧ್ಯಮದ ಮೇಲೆ

ಸಮಾಜಿಕ ಕಳಕಳೀಯ ಮಹತ್ವದ ಹೊಣೆಗಾರಿಕೆ ಇದೆ. ಈ ಹೊಣೆಗಾರಿಕೆಯನ್ನು ಗ್ರಾಮೀಣ ಭಾಗದಲ್ಲಿರುವ ಪತ್ರಕರ್ತರು ಸಮರ್ಥವಾಗಿ ಕಾರ್ಯನಿರ್ವಹಿಸುವುದರಿಂದ ಗ್ರಾಮೀಣ ಭಾಗದ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದರು.

ಮುಂದುವರಿದು ಮಾತನಾಡಿದ ಅವರು ಸರ್ಕಾರ ಜಾರಿಗೆ ತಂದಿರುವ ಹೊಸ ಜಾಹಿರಾತು ನೀತಿಯಿಂದ  ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಒಳ್ಳೆಯದಾಗಿದೆ. ಇದನ್ನು  ನಾವುಗಳು ವಿರೋಧಿಸುವುದಿಲ್ಲ ಆದರೆ ಹೊಸ ಜಾಹಿರಾತು ನೀತಿಯಿಂದ ಪ್ರಾದೇಶಿಕ ಪತ್ರಿಕೆಗಳಿಗೆ ಭಾರಿ ಹೊಡೆತ ಬೀಳುತ್ತದೆ ಇದನ್ನು ವಿರೋಧಿಸುವುದರೊಂದಿಗೆ ಕ್ಲಾಸಿಫೈಡ್ ಜಾಹಿರಾತುಗಳನ್ನು ಸರ್ಕಾರ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳಿಗೆ ನೀಡ ಬೇಕೆಂದು ನಮ್ಮ ಒತ್ತಾಯವಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿರುವ ಪತ್ರಕರ್ತರಿಗೆ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ಬಸ್‌ಪಾಸ್ ನೀಡಬೇಕು. ಜೋತೆಗೆ ಅವರ ಆರೋಗ್ಯದ ದೃಷ್ಟಿಯಿಂದ ವಿಮೆ ನೀಡ ಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಸರ್ಕಾರ ಇಡೇರಿಸಬೇಕೆಂದು ನಮ್ಮ ಸಂಘದ ಒತ್ತಾಯವಾಗಿತ್ತು. ಆದರೆ ಕೆಲವನ್ನು ಸರ್ಕಾರ ಜಾರಿಗೆ ತರಲು ಮುಂದಾಗಿರುವುದು ಸ್ವಾಗತಾರ್ಹ ಎಂದರು. ಪತ್ರಕರ್ತರಿಗೆ  ಸಮಾಜದಲ್ಲಿ  ಉನ್ನತವಾದ ಸ್ಥಾನವಿದೆ. ಇದನ್ನು ಉಳಿಸಿಕೊಳ್ಳುವದನ್ನು ಪತ್ರಕರ್ತರು ಮಾರೆಯಬಾರದು. ಪತ್ರಕರ್ತರು ಭ್ರಷ್ಟರಾಗ ಬಾರದು ಎಂದರು.
ಅಭಿನಂದನಾ ಕಾರ್ಯಕ್ರಮವನ್ನು ಜೋತಿ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ಬಿ.ವಿ ಮಾತನಾಡಿ ಗ್ರಾಮೀಣ ಭಾಗದ ಪತ್ರಕರ್ತರು ಯಾವುದರಲ್ಲಿ ಕಡಿಮೇ ಇಲ್ಲಾ ಎನ್ನುವುದಕ್ಕೆ ನಿದರ್ಶನ ಬಿ.ವೆಂಕಟಸಿಂಗ್ ಅವರು ಗ್ರಾಮೀಣ ಭಾಗದ ಪ್ರತಿಭೆ  ಇವರನ್ನು ಗುರುತಿಸಿ ಸರ್ಕಾರ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಿರುವದು ವೆಣಕಟಸಿಂಗ್ ಅವರ ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದರು. ಗ್ರಾಮೀಣ ಭಾಗದ ಪತ್ರಕರ್ತರು ಮತದಾರರ ಜಾಗೃತಿ ಮೂಡಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಮಾತನಾಡಿ, ಕೆಲ ಪತ್ರಿಕೆಗಳಿಂದ ಗ್ರಾಮೀಣ ಪತ್ರಕರ್ತರ ಶೋಷಣೆಯಾಗುತ್ತಿದೆ. ಇದರಿಂದ ಪತ್ರಕರ್ತರು ತಮ್ಮ ನೋವನ್ನು ಹೇಳಿಕೊಳ್ಳದ ಸ್ಥಿತಿಯಲ್ಲಿದ್ದಾರೆ ಎಂದರು. ಪತ್ರಕರ್ತರ ಮೇಲೆ ನಡೆಯುವ ಹಲ್ಲೆಯನ್ನು ತಡೆಯಲು ಜಿಲ್ಲಾ ಮಟ್ಟದಲ್ಲಿ ಸಮೀತಿ ರಚಿಸಬೇಕು ಆದರೆ ಇದು ಯಾವ ಜಿಲ್ಲೆಯಲ್ಲಿ ರಚನೆಯಾಗುತ್ತಿಲ್ಲ ಇದರಿಂದ ಪತ್ರಕರ್ತರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿವೆ ಇದನ್ನು ತಪ್ಪಿಸಲು ಪತ್ರಕರ್ತರ ರಕ್ಷಣೆಗೆ ಇರುವ ಸಮೀತಿಯನ್ನು  ಪುನಹ ರಚಿಸಬೇಕು.  ಹೊಸ ಜಾಹಿರಾತು ನೀತಿಯಿಂದ ಜಿಲ್ಲಾ ಪತ್ರಿಕೆಗಳಿಗೆ ಅನುಕೂಲವಾಗಿದೆ ಆದರೆ ಸರ್ಕಾರ ಹೊಸ ಜಾಹಿರಾತು ನೀತಿಯನ್ನು ವಾರ್ತಾ ಇಲಾಖೆಯಿಂದ ಅನುಷ್ಠಾನ ಗೊಳಿಸಲು ಮುಂದಾಗಿರುವುದು ಸ್ವಾಗತ ಆದರೆ ವಾರ್ತಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಿದರೆ ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಸ್. ಗೋನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯ ಸಮಿತಿಯ ಮಾರ್ಗದರ್ಶನದಂತೆ ಪತ್ರಕರ್ತರ ಸಂಘಟಣೆ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರು.  ಪ್ರಧಾನ ಕಾರ್ಯದರ್ಶಿ ಎಂ ಸಾಧಿಕ ಅಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಸಂಘ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು. ಜಿಲ್ಲಾ ಕಾರ್ಯದರ್ಶಿ ಎನ್.ಎಂ. ದೊಡ್ಡಮನಿ ಕಾರ್ಯಕ್ರಮ ನಿರೂಪಿಸಿದರೆ, ಜಿಲ್ಲಾ ಖಜಾಂಚಿ ಹನುಮ ಹಳ್ಳಿಕೇರಿ ಪ್ರಾರ್ಥಿಸಿದರು. ಕೊನೆಯಲ್ಲಿ  ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಹರೀಶ ಎಚ್.ಎಸ್ ರವರು ವಂದಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೆಪಿಆರ್ ಪರ್ಟಿಲೈಜರ‍್ಸ್ ಕಾರ್ಖಾನೆಯ ಕಾರ್ಯನಿವಾಹಕ ಹಾಗೂ ಆಂದ್ರ ಪ್ರದೇಶ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಕಾರ್ಯದರ್ಶಿ ಸೇರಿದಂತೆ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ ಕುಲಕರ್ಣಿ ಅಲ್ಲಾವುದ್ದಿನ ಯಮ್ಮಿ, ಗಂಗಾವತಿ ಅಧ್ಯಕ್ಷ ವಿಶ್ವನಾಥ ಬೆಳಗಳ ಮಠ, ಯಲಬುರ್ಗಾ ಅಧ್ಯಕ್ಷ ಕಳಕಪ್ಪ ಚಿಕ್ಕಗಡ, ಕುಷ್ಟಗಿ ಅಧ್ಯಕ್ಷ ಬಸವರಾಜ ಪಲ್ಲೇದ್, ಗಂಗಾವತಿ ತಾಲೂಕಾ ಪ್ರಧಾನ ಕಾರ್ಯದರ್ಶಿ ಎ ಜೆ ರಂಗನಾಥ, ಹಿರಿಯ ಪತ್ರಕರ್ತ ಎಂ. ಜೆ ಶ್ರೀನಿವಾಸ ಸೇರಿದಂತೆ ಸಂಘದ ಪಾದಾಧಿಕಾರಿಗಳು ಮತ್ತು ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
Please follow and like us:
error

Leave a Reply

error: Content is protected !!