ಎನ್.ಎಸ್.ಎಸ್. ವತಿಯಿಂದ ಶ್ರೀ ಶ್ರೀನಿವಾಸ ಗುಪ್ತಾ ರಿಗೆ ಸನ್ಮಾನ

ಕೊಪ್ಪಳ :- ಭಾಗ್ಯನಗರ ಪ.ಪೂ.ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ವಾಣಿಜ್ಯೋಧ್ಯಮಿಗಳಾದ ಶ್ರೀನಿವಾಸ ಗುಪ್ತಾ ರವರನ್ನು ಸನ್ಮಾನಿಸಲಾಯಿತು. ಇತ್ತೀಚಿಗೆ  ದೆಹಲಿಯಲ್ಲಿ  ರಾಷ್ಟ್ರಪತಿಗಳಿಂದ ನಿರ್ಯಾತ ಶ್ರೀ  ಎಂಬ ಪ್ರಶಸ್ತಿಯನ್ನು ಪಡೆದಿದ್ದರು. ನಾಲ್ಕನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳು ಸೇವಾ ಮನೋಭಾವನೆಯನ್ನು ಹೊಂದಿರಬೇಕೆಂದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. 
ದಿ ೧೦  ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕ ಪಂ. ಸದಸ್ಯರಾದ  ದಾನಪ್ಪ ಕವಲೂರು ಅಧ್ಯಕ್ಷತೆಯನ್ನು ವಹಿಸಿದ್ದರು ಎನ್.ಎಸ್.ಎಸ್.ಕಾರ್ಯಕ್ರಮ ಅಧಿಕಾರಿಗಳಾದ ರಾಜಶೇಖರ ಪಾಟೀಲರವರು ಕಾಯಕದಲ್ಲಿ ನಿಷ್ಠೆ ಎಂಬ ವಿಷಯದ ಬಗ್ಗೆ ಕುರಿತು ಕಾಯಕ ವೆಂದರೆ ಬದುಕು ಬದುಕು ಎಂದರೆ ಕಾಯಕ ದೈಹಿಕ ಶ್ರಮವಿಲ್ಲದೆ ತಿನ್ನುವ ಆಹಾರ ವಿಷಕ್ಕೆ ಸಮ ಎಂದು ನುಡಿದರು. ಸಂಜೆ ಸಂಗೀತ ಕಾರ್ಯಕ್ರಮವನ್ನು ಕುಮಾರಿ ಶಕುಂತಲಾ ನಡೆಸಿಕೊಟ್ಟರು. ಸ್ವಾಗತ ಮತ್ತು ಪುಷ್ಪಾರ್ಪಣೆಯನ್ನು ರವಿಕುಮಾರ ಅಣಗಿ ನಡೆಸಿಕಟ್ಟರು. ವಂದನಾರ್ಪಣೆಯನ್ನು ಗವಿಸಿದ್ದಪ್ಪ ಹ್ಯಾಟಿ ನಿರ್ವಹಿಸಿದರು. ಗ್ರಾ.ಪಂ ಸದಸ್ಯರಾದ ದೇವೆಂದ್ರಾ ಸಾ ಎಸ್ ಮಗಜಿ, ಶ್ರೀಮತಿ ಪಾಲಾಕ್ಷವ್ವ ಎಸ್ ಬುರ್ಲಿ, ಯಮನಪ್ಪ ತಂಬ್ರಳ್ಳಿ ಉಪಸ್ಥಿತರಿದ್ದರು. 

Leave a Reply