ಸಿನಿಮಾ ಕ್ಷೇತ್ರದ ಬೆಳವಣಿಗೆಗೆ ಚಿತ್ರಮಂದಿರಗಳ ಕೊಡುಗೆ ಅಪಾರ.

ಕೊಪ್ಪಳ, ಅ. ೧೭. ಸಿನೆಮಾ ಕ್ಷೇತ್ರದ ಬೆಳವಣಿಗೆಗೆ ಚಿತ್ರಮಂದಿರಗಳು ಅನಿವಾರ್ಯ ಮತ್ತು ಅಪಾರವೆಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಹೇಳಿದರು. ಅವರು ನಗರದ ಶ್ರೀಲಕ್ಷ್ಮೀ ಚಿತ್ರಮಂದಿರದ ಆವರಣದಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲಗಳ ಆಶ್ರಯದಲಿ ಶ್ರೀಲಕ್ಷ್ಮೀ ಚಿತ್ರಮಂದಿರದ ಬೆಳ್ಳಿಹಬ್ಬದ ನಿಮಿತ್ಯ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ವೇಳೆ ಉತ್ತರ ಕರ್ನಾಟಕದಲ್ಲಿರುವ ಚಿತ್ರಮಂದಿರಗಳು ಈ ಭಾಗದಲ್ಲಿನ ಚಿತ್ರೋದ್ಯಮದ ಬೆಳವಣಿಗೆಗೆ ಸಹಕಾಋ ನೀಡುವದು ಸೇರಿದಂತೆ ಒಂದಷ್ಟು ರಿಯಾಯತಿ ನೀಡಬೇಕು, ಉತ್ತರ ಕರ್ನಾಟಕದಲ್ಲಿ ಚಿತ್ರೋದ್ಯಮ ಬೆಳೆಯುತ್ತಿದೆ, ಪ್ರತ್ಯೇಕ ಛೇಂಬರ್ ಆದಾಗಿನಿಂದ ಚಿತ್ರರಂಗ ಉತ್ತರ ಕರ್ನಾಟಕವನ್ನು ಗಮನಿಸುತ್ತಿದೆ, ಛೇಂಬರ್ ಅಡಿಯಲ್ಲಿ ನಿರ್ಮಾಣವಾಗುವ ಚಿತ್ರಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಜೊತೆಗೆ ಛೇಂಬರ್ ಸದಸ್ಯತ್ವ ಪಡೆಯಬೇಕು ಎಂದರು. ಕಲಾವಿದ ಬಸವರಾಜ ಕೊಪ್ಪಳ ಮತ್ತು ಹೋರಾಟಗಾರ ಶಿವಾನಂದ ಹೊದ್ಲೂರ ಮಾತನಾಡಿದರು.
ಶ್ರೀಲಕ್ಷ್ಮೀ ಚಿತ್ರಮಂದಿರದ ಬೆಳ್ಳಿಹಬ್ಬ ಪೂರೈಸಿದ ನಿಮಿತ್ಯ ಚಿತ್ರಮಂದಿರದ ಮಾಲೀಕ ವಿರೇಶ ಮಹಾಂತಯ್ಯನಮಠರವರಿಗೆ ಸನ್ಮಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿರೇಶ, ಚಿತ್ರಮಂದಿರಗಳನ್ನು ನಡೆಸಿಕೊಂಡು ಹೋಗುವದು ಪ್ರಸ್ತುತ ತುಂಬಾ ಕಷ್ಟವಾಗಿದೆಯಾದರೂ, ತಂದೆಯವರ ಆಶಯದಂತೆ ಮುನ್ನಡೆಸುತ್ತೇವೆ, ಸನ್ಮಾನ ಜವಾಬ್ದಾರಿಯನ್ನು ಹೆಚ್ಚಿಸಿದ್ದು, ಹೊಸ ವರ್ಷದ ವೇಳೆಗೆ ಶ್ರೀಲಕ್ಷ್ಮೀ ಶಿವ ಚಿತ್ರಮಂದಿರಗಳನ್ನು ಮೇಲ್ದರ್ಜೆಗೆ ಏರಿಸುವದು, ಖುಷನ್, ಎಸಿ ಹಾಗೂ ಪೂರ್ಣ ಸ್ವಚ್ಛತೆ ಮಾಡಲಾಗುವದು, ಪ್ರೇಕ್ಷಕರು ಸಹ ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕಲಾವಿದ ರಂಗನಾಥ ಕೋಳೂರು, ವಿಶ್ವನಾಥ ಮಹಾಂತಯ್ಯನಮಠ, ಶಿವಾನಂದಯ್ಯ ಉತ್ತಂಗಿಮಠ, ನಾಗರಾಜ ಚಲವಾದಿ ಇತರರಿದ್ದರು.

Please follow and like us:
error