ಹಳೆ ವಿದ್ಯಾರ್ಥಿಗಳಿಂದ ಶಿಕ್ಷಕರ ಸನ್ಮಾನ

 ಇತ್ತೀಚೆಗೆ ಬಿ.ಟಿ. ಪಾಟೀಲ್ ನಗರದಲ್ಲಿ ಜೆವೆಲ್ಲರ್ ವರ್ತಕ ಗುರುರಾಜ ಎಂ. ರಾಯ್ಕರ್ ಅವರ ನೂತನ ನಿವಾಸದ ಗೃಹ ಪ್ರವೇಶದ ಅಂಗವಾಗಿ ಹಳೆ ವಿದ್ಯಾರ್ಥಿಗಳಿಂದ ಶಿಕ್ಷಕರನ್ನು ಸನ್ಮಾನಿಸಲಾಯಿತು. ೩೦ ವರ್ಷಗಳ ಹಿಂದೆ ತಾವು ವಿದ್ಯಾಭ್ಯಾಸ ಮಾಡಿದ ಶಾಲೆಯ ಹಳೆ ವಿದ್ಯಾರ್ಥಿಗಳನ್ನು ಒಂದು ಕಡೆ ಸೇರಿಸಿ ತಮಗೆ ವಿದ್ಯಾದಾನ ಮಾಡಿದ ಶಿಕ್ಷಕರಾದ ಎಂ.ಎಚ್.ಪಿ.ಎಸ್. ಶಾಲೆಯ ಶ್ರೀಮತಿ ಲಕ್ಷ್ಮೀಬಾಯಿ, ಗಾಂಧೀ ಸ್ಮಾರಕ ಶಾಲೆಯ ಶ್ರೀಮತಿ ನಾಗಮ್ಮ ಎಂ. ಎಚ್,  ಹಾಗೂ ಬಹಾರ್‌ಪೇಟೆ ಶಾಲೆಯ ಶ್ರೀಮತಿ ಪಿ. ಅಸ್ಮತ್‌ಬೇಗಂ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ’ಅವ್ವಳ ನಗು’ ಧ್ವನಿ ಸುರುಳಿ ಬಿಡುಗಡೆಗೊಳಿಸಲಾಯಿತು. ಧಾರವಾಡ, ಬಳ್ಳಾರಿ, ಗದಗ, ರಾಯಚೂರು, ಬೆಂಗಳೂರಿನಿಂದ ಬಂದ ಗುರುರಾಜ ರಾಯ್ಕರ್ ಅವರ ವಿದ್ಯಾರ್ಥಿ ಜೀವನದ ಹಳೆ ಸಹಪಾಟಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Please follow and like us:
error