fbpx

ಸಚಿವರಿಂದ ಶ್ರೀನಿವಾಸ ಪಂಡಿತಗೆ ಸನ್ಮಾನ

ಕೊಪ್ಪಳ,ಜು.೧೧: ನಗರದ ವಾರಕಾರ ಓಣಿಯ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ನಗರ ಘಟಕದ ವತಿಯಿಂದ ಇತ್ತೀಚೆಗೆ ನೇಪಾಳರಾಷ್ಟ್ರದ ಕಠ್ಮಂಡುವಿನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ

ಕಂಚಿನ ಪದಕ ಪಡೆದ ಶ್ರೀನಿವಾಸ ಪಂಡಿತ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ನಗರ ಘಟಕ ಅಧ್ಯಕ್ಷ ಮಂಜುನಾಥ ಬನ್ನಿಕೊಪ್ಪ ಅವರು ಸನ್ಮಾನಿಸಿ ಗೌರವಿಸಿದರು. 

    ಈ ಸಂದರ್ಭದಲ್ಲಿ ಸಿರಸಪ್ಪಯ್ಯ ಮಠದ ಮತ್ತು ಮುದ್ದಾಬಳ್ಳಿಯ ಶ್ರೀಗಳು, ಜಿ.ಪಂ.ಅಧ್ಯಕ್ಷ ಟಿ.ಜನಾರ್ಧನ ಹುಲಗಿ, ಜಿ.ಪಂ.ಸದಸ್ಯರಾದ ನಾಗನಗೌಡ ಮಾಲಿಪಾಟೀಲ್, ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಬಾಳಪ್ಪ ಬಾರಕೇರ, ಮುತ್ತುರಾಜ ಕುಷ್ಟಗಿ, ಜಿ.ಪಂ.ಮಾಜಿ ಸದಸ್ಯ ಪ್ರಸನ್ನ ಗಡಾದ್, ನಗರಸಭೆ ಮಾಜಿ ಸದಸ್ಯ ಎಂ.ಪಾಷಾ ಕಾಟನ್, ಸೇರಿದಂತೆ ನಗರದ ವಿಶ್ವಕರ್ಮ ಘಟಕದ ಸರ್ವ ಸದಸ್ಯರು, ಸಮಾಜದ ಮುಖಂಡರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!