ಸ್ಕೆಟಿಂಗ್ ತರಬೇತಿ ಶಿಬಿರ : ಡಿ.ಸಿ. ಉದ್ಘಾಟನೆ

 : ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಿಸಲಾದ ಒಂದೂವರೆ ತಿಂಗಳ ಅವಧಿಯ ಬೇಸಿಗೆ ಸ್ಕೆಟಿಂಗ್ ತರಬೇತಿ ಶಿಬಿರವನ್ನು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಉದ್ಘಾಟಿಸಿದರು
  ಜಿಲ್ಲಾ ಕ್ರೀಡಾಂಗಣ ಸಮಿತಿ ವತಿಯಿಂದ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಏ.೨೨ ರಿಂದ ಮೇ.೩೧ ರವರೆಗೆ ಸ್ಕೇಟಿಂಗ್ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಕರೆ ನೀಡಿದರು. 
  ಆಸಕ್ತಿಯುಳ್ಳ ಕ್ರೀಡಾಪಟುಗಳು ತರಬೇತಿ ಶಿಬಿರದ ಪ್ರಯೋಜನ ಪಡೆಯಬೇಕು, ಹೆಚ್ಚಿನ ಮಾಹಿತಿಗಾಗಿ   ಒಳಾಂಗಣ ಕ್ರೀಡಾಂಗಣದ ಮೇಲ್ವಿಚಾರಕ ಸುಶೀಲ್‌ಕುಮಾರ ಮೊ.೭೪೧೧೭೩೧೪೩೨ ಹಾಗೂ ೦೮೫೩೯-೨೦೧೪೦೦ ಗೆ ಸಂಪರ್ಕಿಸಬಹುದಾಗಿದೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಎನ್.ಘಾಡಿ ಅವರು ತಿಳಿಸಿದರು.

Related posts

Leave a Comment