ಖಾಜಿ ಕಾಯ್ದೆ-೧೮೮೮ ನಿರಸನ : ಸೂಚನೆ

 ಗುಲಬರ್ಗಾ ಪ್ರದೇಶ ವ್ಯಾಪ್ತಿಯ ೦೬ ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದ ಖಾಜಿ ಅಧಿನಿಯಮ ಕಾಯ್ದೆ-೧೮೮೦ (ಸಂಖ್ಯೆ ೧೨) ಇದನ್ನು ನಿರಸನಗೊಳಿಸಿದ್ದು ಈ ಭಾಗದ ಮುಸ್ಲಿಂ ಬಾಂಧವರು ತಮ್ಮ ಮಕ್ಕಳ ಮದುವೆ ಸಮಾರಂಭ ಕಾರ್ಯಗಳನ್ನು ಆಯಾ ಓಣಿ ವ್ಯಾಪ್ತಿಯಲ್ಲಿನ ವಕ್ಫ್ ಆಸ್ತಿಯಲ್ಲಿ ನೋಂದಣಿಯಾದ ಮಸಜೀದ್ ಕಮಿಟಿಯವರನ್ನು ಸಂಪರ್ಕಿಸಿ ನಿಖಾವನ್ನು ನೆರವೇರಿಸಿಕೊಳ್ಳಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನೂರ ಅಹ್ಮದ್ ಹಣಜಗೇರಿ ತಿಳಿಸಿದ್ದಾರೆ.
  ಗುಲಬರ್ಗಾ ಪ್ರದೇಶ ಪ್ರಾದೇಶಿಕ ಕಾನೂನು ಖಾಜಿ ಕಾಯ್ದೆ-೧೯೮೦ ನಿರಸನಗೊಳಿಸಿರುವ ಬಗ್ಗೆ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿಗಳು ಸುತ್ತೋಲೆ ಹೊರಡಿಸಿದ್ದು, ಬೀದರ್, ಗುಲ್ಬರ್ಗಾ, ರಾಯಚೂರು, ಯಾದಗಿರಿ, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಭಾಗದ ಜನರು   ರಾಜ್ಯದ ಇತರೇ ೨೪ ಜಿಲ್ಲೆಗಳಲ್ಲಿ ಅನುಸರಿಸುತ್ತಿರುವ ಪದ್ದತಿಯನ್ನೇ ಅನುಸರಿಸಬೇಕಾಗುತ್ತದೆ.  ಕೊಪ್ಪಳ ಜಿಲ್ಲೆಯ ಮುಸ್ಲಿಂ ಬಾಂಧವರು ತಮ್ಮ ಮಕ್ಕಳ ಮದುವೆ ಸಮಾರಂಭ ಕಾರ್ಯಗಳನ್ನು ಸಂಬಂಧಪಟ್ಟ ಆಯಾ ಓಣಿಯ ವಕ್ಫ ಆಸ್ತಿಯಲ್ಲಿ ನೋಂದಣಿಯಾದ ಮಸಜೀದ ಕಮೀಟಿಯವರನ್ನು ಸಂಪರ್ಕಿಸಿ ನಿಃಖಾವನ್ನು ನೇರವೇರಿಸಿಕೊಳ್ಳಬೇಕೆಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನೂರ ಅಹ್ಮದ್ ಹಣಜಗೇರಿ ತಿಳಿಸಿದ್ದಾರೆ. 

Leave a Reply