ತೆರೆದ ಮನೆ ಕಾರ್ಯಕ್ರಮ.

ಕೊಪ್ಪಳ-24- ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಶಾಲಾ ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಗ್ರಾಮೀಣ ಠಾಣಾ ಪೋಲಿಸ ಇನ್ಸಪೇಕ್ಟರ್ ಚಿತ್ತರಂಜ ಅವರು ಮಕ್ಕಳಿಗೆ ಪೋಲಿಸ್ ವ್ಯವಸ್ಥೆ ಕುರಿತು ಉಪನ್ಯಾಸ ನೀಡುತ್ತಾ ಬ್ರೀಟಿಷ ಕಾಲದಿಂದ ಪ್ರಸ್ತುತ ಪೋಲಿಸ ವ್ಯವಸ್ಥೆ ಹೆಗಿದೆ ಮತ್ತು ಜನಸ್ನೇಹಿ ಪೋಲಿಸರು ಮಕ್ಕಳಲ್ಲಿ ಭಯವನ್ನು ಹೊಗಲಾಡಿಸಲು ಕಾರ್ಯನಿರ್ವಹಿಸುವುದರ ಬಗ್ಗೆ ವಿವಿಧ ಹುದ್ದೆಗಳ ಕರ್ತ್ಯವ್ಯಗಳ ನಿರ್ವಹಣೆ, ವಾಕಿಟಾಕಿ,

ರೈಪಲ್‌ನ್ನು, ನ್ಯೂಟನನ ಒಂದನೇ ನಿಯಮದ ಪ್ರಕಾರ ಹೇಗೆ ಕಾರ್ಯನಿರ್ವಹಿಸುತ್ತದೆ? ಎಂದು ತಿಳಿಸುತ್ತಾ ಮಕ್ಕಳಿಗೆ ಸ್ಪೂರ್ತಿ ನೀಡುತ್ತಾ ಪ್ರಜೆಗಳ ರಕ್ಷಣೆಗೆ ಹೋರಾಡಿ ಗುಂಡೆಟಿಗೆ ಬಲಿಯಾದ ಮಲ್ಲಿಕಾರ್ಜುನ ಬಂಡೆಯಂತಹ ಹುತ್ತಾತ್ಮರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ವ್ಯಕ್ತಿಯಾಗಿ ಬದಲಿಸಬೇಕೆಂದು ಮಕ್ಕಳಿಗೆ ಕರೆ ನೀಡಿದರು.
    ಕಾರ್ಯಸಮಯದಲ್ಲಿ ಸ.ಹಿ..ಪ್ರಾ ಶಾಲೆಯ ಕೊಡದಾಳ, ಹನುಮನಹಟ್ಟಿ, ಸ.ಪ್ರೌ.ಶಾಲೆ ಗಿಣಿಗೇರಾ, ಹ್ಯಾಟಿ, ಶಾಲೆಯ ಮಕ್ಕಳು, ಶಿಕ್ಷಕರು, ಪೋಲಿಸ್ ಸಿಬ್ಬಂದಿ, ಮಹಾಂತೇಶ ಮೋಟಿ, ಅಂದಪ್ಪ ಪ್ರಮೋದ, ಯುನಿಸೆಪ, ಸ.ಸಂಘಟಿಕರಾದ ಮಾರುತಿ ಶಾಮಲಾಪೂರ, ದೇವರಾಜ, ಪಕೀರಪ್ಪ, ಆನಂದ ಹಳ್ಳಿಗುಡಿ, ಭಾಗವಹಿಸಿದ್ದರು.

Related posts

Leave a Comment