ನಾವು ಗೂಂಡಾಗಳಲ್ಲ ಕಲ್ಲು ಬೀಸಲ್ಲ!

ಕೊಪ್ಪಳ : ರಾಜ್ಯ ಬಿಜೆಪಿ ಸರಕಾರದ ವೈಪಲ್ಯಗಳನ್ನು ಖಂಡಿಸಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯು ಜಿಲ್ಲಾಡಳಿತ ಭವನಕ್ಕೆ ತೆರಳುವ ಮೂಲಕ ಈವರೆಗಿದ್ದ ನಿಯಮಗಳನ್ನು ಮುರಿದಿದೆ. ಯಾವುದೇ ಸಂಘ ಸಂಸ್ಥೆಗಳ ಪ್ರತಿಭಟನೆಗಳು ಜಿಲ್ಲಾಡಳಿತ ಭವನದ ಗೇಟ್ ಗೆ ಮುಕ್ತಾಯಗೊಳ್ಳುತ್ತಿದ್ದವು. ಆದರೆ ಇಂದು ಕಾಂಗ್ರೆಸ್ ಪ್ರತಿಭಟನಕಾರರು ನಿಯಮ ಮುರಿದು ಜಿಲ್ಲಾಡಳಿತ ಭವನ ಮುಖ್ಯ ದ್ವಾರದವರೆಗೂ ತೆರಳಿ ಜಿಲ್ಲಾಧಿಕಾರಿಗೆ ಮನವಿಸಲ್ಲಿಸುವ ಮೂಲಕ ನಿಯಮ ಮುರಿದರೆ ಬೆರಳೆಣಿಕೆಯಷ್ಟಿದ್ದ ಪೋಲಿಸರು ಅಸಹಾಯಕರಾದರೆ ಸ್ವಃ ಜಿಲ್ಲಾಧಿಕಾರಿ ಸತ್ಯ ಮೂರ್ತಿ ಈ ಘಟನೆಗೆ ಸಾಕ್ಷಿಯಾದರು.
ಅಷ್ಟೇ ಅಲ್ಲ ಕಾರ್ಯಕ್ಮದವೊಂದರ ಉದ್ಘಾಟನೆಗೆ ತೆರಳಿದ್ದ ಡಿಸಿ ಸತ್ಯಮೂರ್ತಿ ಈ ಪ್ರತಿಭಟನೆ ಪ್ರವೇಶ ದ್ವಾರ ತಲುಪುವ ಮು್ನ ಾಗಮಿಸಿ ಪ್ರತಿಭಟನಾಕಾರರ್ನು ಸ್ವಾಗತಿಸಿದರು. ಇದಕ್ಕೂ ಮುನ್ನ ಜಿಲ್ಲಾಡಳಿತ ಭಬನದ ಗೇಟ್ ನಲ್ಲಿ ಪ್ರತಿಭಟನಾ ಕಾರರನ್ನು ತಡೆದ ಪೋಲಿಸರನ್ನು ತಳ್ಳಿಕೊಂಡು ಒಳಹೋದ ಕಾಂಗ್ರೆಸ್ ಮುಖಂಡರು ಅಲ್ಲದೇ ಮಾಜಿ ಸಚಿವ ಬಸವರಾಜ ರಾಯರಡ್ಡಿ ನಾವ್ಯಾರೂ ಗೂಂಡಾಗಳಲ್ಲ ಕಲ್ಲು ಹೊಡೆಯಯೋರಲ್ಲ ಎಂದು ಜಿಲ್ಲಾಧಿಕಾರಿಯನ್ನು ಉದ್ದೇಶಿಸಿ ನುಡಿದಾಗ ಜಿಲ್ಲಾಧಿಕಾರಿ ನಿರುತ್ತರಾದ ಘಟನೆ ಜರುಗಿತು.
ಬೆಳಿಗ್ಗೆ 11 ಗಂಟೆಯಿಂದ ಶಾದಿಮಹಲ್ ನಿಂದ ಹೊರಟು ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು, ಮಾಜಿ ಶಾಸಕರು, ಸಚಿವರು, ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Related posts

Leave a Comment