ಸ್ವಾಮಿ ವಿವೇಕಾನಂದ ಗ್ರಂಥಾಲಯದ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ರಕ್ತದಾನ ಶಿಬಿರ.

ಗಂಗಾವತಿ ನಗರದಲ್ಲಿ ಕಳೆದ ವರ್ಷದಿಂದ ಸಾಹಿತ್ಯದಿಂದ ಸಾಮಾಜಿಕ ಪರಿವರ್ತನೆ ಮಾಡುವ ಪ್ರಯತ್ನದಲ್ಲಿ ೧೮ನೇ ವಾರ್ಡಿನ ಸಾಹಿತ್ಯಾಸಕ್ತ ಯುವಕರು ಸೇರಿ ಪ್ರಾರಂಭಿಸಿದ ಜ್ಞಾನಭಂಡಾರವೇ ಸ್ವಾಮಿವಿವೇಕಾನಂದ ಗ್ರಂಥಾಲಯ. ಈ ಗ್ರಂಥಾಲಯವು ಹಲವಾರು ವಿಶಿಷ್ಟ, ವಿಭಿನ್ನ ಹಾಗೂ ಅಮೂಲ್ಯವಾದ ಪುಸ್ತಕಗಳನ್ನು ಸಂಗ್ರಹಿಸಿ, ಯಾವುದೇ ಶುಲ್ಕವಿಲ್ಲದೇ ಬಡವಿದ್ಯಾರ್ಥಿಗಳಿಗೆ ತಲುಪಿಸುವ ಮೂಲಕ ಸಾಹಿತ್ಯ ಸೇವೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಾರ್ಥಕ ಮೂರು ವರ್ಷ ಪೂರೈಸಿರುವ ಈ ಶುಭ ಸಂದರ್ಭದಲ್ಲಿ ಗ್ರಂಥಾಲಯದವತಿಯಿಂದ ದಿನಾಂಕ ೨೧-೦೭-೨೦೧೫ ರಂದು ರಕ್ತದಾನ ಶಿಬಿರ, ಬಡ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ, ಪೆನ್ನುಗಳ ವಿತರಣಾ ಕಾರ್ಯಕ್ರಮ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಮನೆ ಪಾಠ ಪ್ರಾರಂಭಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸಿಂಗನಾಳ ವಿರುಪಾಕ್ಷಪ್ಪ, ಶಿವರಾಮಗೌಡ್ರು, ಹಾಗೂ ಗ್ಯಾನ್ ಸಂಸ್ಥೆಯ ಅಧ್ಯಕ್ಷರಾದ ಸೂರ್ಯನಾರಾಯಣ ಮತ್ತು ಶಿವಮೂರ್ತಿ ಹಣವಾಳ, ಚಿದಾನಂದ, ಸಿದ್ದಣ್ಣ, ಮದನ್, ಸಂದೇಶ, ನಾಗರಾಜ್ ಇತರರು ಹಾಜರಿದ್ದರು ಎಂದು ಎನ್. ಚಿದಾನಂದ ತಿಳಿಸಿದ್ದಾರೆ.

Related posts

Leave a Comment