ಯುವ ಕಾಂಗ್ರೆಸ್‌ನಿಂದ “ಸಹಾಯ ಹಸ್ತ ಚಳುವಳಿ”


ಕೊಪ್ಪಳ :- ದಿ.೨೭ ರಿಂದ ೩೦ ರ ವರೆಗೆ  ಆಡಳಿತ ವ್ಯವಸ್ಥೆಯನ್ನು ನಿಷ್ಕ್ರ್ರೀಯಗೊಳಿಸಿ ಭಿನ್ನಮತದಲ್ಲಿ ಕಾಲ ಕಳೆಯುತ್ತಾ ಮಲಗಿರುವಂತೆ ನಾಟಕ ಆಡುತ್ತಿರುವ ಬಿ.ಜೆ.ಪಿ ಪಕ್ಷಕ್ಕೆ ಸಾರ್ವಜನಿಕರ ಸಮಸ್ಯೆಗಳನ್ನು ಕೆಳುವಷ್ಟು ಜನಪರ ಕಾಳಜಿ ಇಲ್ಲದಾಗಿದೆ ಸದಾ ಲೂಟಿಯಲ್ಲಿ ತೋಡಗಿರುವ ಬಿ.ಜೆ.ಪಿ ಗೆ ಈ ನಾಡಿನ ಸಾಮನ್ಯ ಜನರ ರೈತರ ಹಾಗೂ ಅಲ್ಪ ಸಂಖ್ಯಾತರ ಯಾವ ಕೂಗಿಗು ಎಚ್ಚರಗೊಳ್ಳದೆ ’ಜಾಣಕಿವುಡು’ ತನವನ್ನು ಪ್ರದರ್ಶಿಸುತ್ತಿದೆ ಇದನ್ನು ಖಂಡಿಸಿ ಜನತೆಯ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಕೊಪ್ಪಳ ಲೋಕಸಭಾ ಯುವ ಕಾಂಗ್ರೆಸ್ ವತಿಯಿಂದ ಕೊಪ್ಪಳ ವಿಧಾನ ಸಭಾ ಸೇರಿದಂತೆ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ತಹಶಿಲ್ಧಾರ ಕಛೇರಿಯ ಮುಂದೆ ಬೆಳಿಗ್ಗೆ ೧೦ ರಿಂದ ಸಾಯಂಕಾಲ ೦೫:೩೦ ರವರೆಗೆ ಸಹಾಯ ಹಸ್ತ ಚಳುವಳಿಯನ್ನು ಹಮ್ಮಿಕೊಂಡಿದ್ದು. ಕೊಪ್ಪಳದಲ್ಲಿ ಚಾಲನೆಯಾಗುವ ಈ ಚಳುವಳಿಯಲ್ಲಿ ಕೆ.ಬಸವರಾಜ ಹಿಟ್ನಾಳ ಅಧ್ಯಕ್ಷರು ಜಿಲ್ಲಾ ಕಾಂಗ್ರೆಸ್ ಸಮಿತಿ, ಶ್ರೀ ಬಸನಗೌಡ ಬಾದರ್ಲಿ, ಅಧ್ಯಕ್ಷರು ಕೊಪ್ಪಳ ಲೋಕಸಭಾ ಯುವ ಕಾಂಗ್ರೆಸ್ ಸಮಿತಿ, ಕೆ.ರಾಘವೆಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತ ಅಧ್ಯಕ್ಷರು ಎಸ್.ಬಿ.ನಾಗರಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಎಮ್.ಪಾಷಾ ಕಾಟನ್ ಯುವ ಕಾಂಗ್ರೆಸ್ ಅಧ್ಯಕ್ಷರು, ಸೇರಿದಂತೆ ಪಕ್ಷದ ಎಲ್ಲಾ ಘಟಕದ ಪದಾಧಿಕಾರಿಗಳು ಯುವ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು. ಈ ಚಳುವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ ದಾಸರಡ್ಡಿ ಅಳವಂಡಿ  ತಿಳಿಸಿದ್ದಾರೆ.

Please follow and like us:
error