ಸಿಂದಗಿ : ದ್ರೋಹಿಗಳನ್ನು ಗಡಿಪಾರು ಮಾಡಿ

ಬಿಜಾಪೂರ ಜಿಲ್ಲೆ ಸಿಂದಗಿಯ ತಹಶೀಲ್ ಕಛೇರಿ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿ ಸೌಹಾರ್ಧತೆಗೆ ಧಕ್ಕೆ ತರಲು ಯತ್ನಿಸಿದ ೬ ಜನರಿಗೆ ಗಡಿಪಾರು ಮಾಡಬೇಕು ಹಾಗು ಸದರಿ ಪ್ರಕರಣ ಸಿ.ಬಿ.ಐ.ಗೆ ವಹಿಸಬೇಕು ಎಂದು ಆಗ್ರಹಿಸಿ ಜನಪರ ಸಂಘಟನೆಯಯವರು ದಿ: ೯/೧/೨೦೧೨ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳ ನಗರದ ಸಾಹಿತ್ಯ ಭವನ ಹತ್ತಿರದಿಂದ ಮೆರವಣಗೆ ಮೂಲಕ ತಹಶೀಲ್ ಕಛೇರಿಗೆ ತೆರಳಿ ಧರಣಿ ಕುಳಿತು ನಂತರ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ ಕೋಮುಗಲಭೆಗಳು ಹರಡಲು ಹುನ್ನಾರ ನಡೆಸಿ ಸಿಕ್ಕಿ ಬಿದ್ದಿರಿವ ೭ ಜನರು ಶ್ರೀರಾಂ ಸೇನೆ ಸದಸ್ಯರಾಗಿರಲಿ ಅಥವ ಆರ್,ಎಸ್,ಎಸ್, ಸಂಘ ಪರಿವಾರದವರಾಗಲಿ, ಇವರ ಉದ್ದೇಶ ಮಾತ್ರ ಒಂದೆ. ಹಿಂದುಳಿದವರನ್ನು ಬಳಸಿಕೊಂಡು ಅಲ್ಪ ಸಂಖ್ಯಾತರನ್ನು ಮುಗಿಸುವದಾಗಿದೆ.
ಜಾತ್ಯಾತೀತ ದೇಶವನ್ನಾಗಿಸಲು ಆಶಿಸಿದ್ದ ಮಹಾತ್ಮ ಗಾಂಧೀ ಅವರನ್ನು ನಾಥುರಾಂ ಗೋಡ್ಸೆ ಕೊಂದದ್ದು, ಅಂದಿನಿಂದ ಅವರ ಕಾರ್ಯಚರಣೆ ಆರಂಭವಾಗಿದೆ. ಹುಬ್ಬಳ್ಳಿಯ ಕೋರ್ಟನಲ್ಲಿ ಸಂಭವಸಿದ್ದ ಬಾಂಬ್ ಬ್ಲಾಸ್ಟ ನಲ್ಲಿ ಶ್ರೀರಾಮ ಸೇನೆಯ ಕೈವಾಡ ಇದ್ದು ಅನೇಕರು ಜೈಲಿಗೂ ಹೋಗಿದ್ದಾರೆ. ಮಹಾರಾಷ್ಟ್ರದ ಮಾಲೆಗಾಂವನಲ್ಲಿ ಬಾಂಬ್ ಬ್ಲಾಸ್ಟ ಪ್ರಕರಣದಲ್ಲಿದ್ದಾರೆ. ಇದೇ ರೀತಿ ಹೈದ್ರಾಬಾದಿನ ಮೆಕ್ಕಾ ಮಸ್ಜಿದ್ ನಲ್ಲಿ ಸ್ಪೋಟಗೊಂಡ ಬಾಂಬ್, ಸಂಜೋಥಾ ಎಕ್ಸ್‌ಪ್ರೆಸ್, ನಾಂದೆಡ್ ಬಾಂಬ್ ಬ್ಲಾಸ್ಟ ಮುಂತಾದ ಪ್ರಕರಣಗಳಲ್ಲಿ ಸಂಘ ಪರಿವಾರದ ಗುಂಪಿನ ಸದಸ್ಯರಿದ್ದಾರೆಂಬದು ಎಲ್ಲಾರಿಗೆ ಗೊತ್ತಿರುವ ವಿಷಯ. ಕರ್ನಾಟಕದಲ್ಲಿ ಇನ್ನುವರೆಗು ಇಂತಹ ಪ್ರಕರಣಗಳನ್ನು ನಡೆಸಿ ಕೋಮು ಸೌಹಾರ್ಧತೆಗೆ ಧಕ್ಕೆ ತರಲು ಯತ್ನಿಸುತ್ತಿರುವ ಸಂಘ ಪರಿವಾರದ ಎಲ್ಲಾ ಘಟನೆಗಳನ್ನು ಸಿ.ಬಿ.ಐ. ತನಿಖೆ ನಡಿಸಬೇಕು. ಸಿಂದಗಿ ಪ್ರಕರಣದಲ್ಲಿರುವ ೭ ಜನರಿಗೆ ಗಡಿಪಾರ ಮಾಡಬೇಕು.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪಾಕಿಸ್ತಾನದ ಧ್ವಜ ಇರುವ ಟೀಶರ್ಟಗಳನ್ನು ಮಾರಿದ್ದಾಗಿ ಬಟ್ಟೆ ಅಂಗಡಿಯವರ ಮೇಲೆ ಹಲ್ಲೆ ಮಾಡಿ ಅನಾಗತ್ಯ ಪ್ರಕರಣ ದಾಖಿಲಿಸಿದ್ದಾರೆ. ಎಲ್ಲಾ ದೇಶಗಳ ಕ್ರಿಕೇಟ ಆಟಗಾರರ ಟೀಶರ್ಟನಂತೆ ಪಾಕಿಸ್ತಾನದ ಕ್ರಿಕೆಟ್ ಆಟಗಾರರ ಟೀಶರ್ಟಗಳನ್ನು ಸಹ ಮಾರುತ್ತಿದ್ದು, ಕಾನೂನು ಕೈಗೆ ತೆಗೆದುಕೊಂಡು ಹಲ್ಲೆ ಮಾಡಿರುವುದ ಅಪರಾಧವಾಗುತ್ತದೆ. ಹಲ್ಲೆ ಮಾಡಿದವರ ವಿರುದ್ಧ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜನಪರ ಸಂಘಟನೆಗಳ ಒಕ್ಕೂಟ ಒತ್ತಾಯಿಸುತ್ತಲ್ಲದೆ, ಬಿಜಾಪೂರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ: ಡಿ.ಸಿ. ರಾಜಪ್ಪ ಮತ್ತು ತಂಡದ ಎಲ್ಲಾ ಸದಸ್ಯರಿಗೆ ಕೃತಜ್ಙತೆ ಸಲ್ಲಿಸುತ್ತದೆ.
ಮೆರವಣಿಗೆಯಲ್ಲಿ ಬಸವರಾಜ ಶೀಲವಂತರ್ ,ಜಿಲ್ಲಾ ಅಧ್ಯಕ್ಷರು,ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟ. ,ಗಾಳೆಪ್ಪ ಮುಂಗೋಲಿ  ಜಿಲ್ಲಾ ಸಂಚಾಲಕರು,ಅಖಿಲ ಭಾರತ ಯುವಜನ ಒಕ್ಕೂಟ.ಶಿವಾನಂದ ಹೋದ್ಲೂರ,ಅಧ್ಯಕ್ಷರು,ವೀರ ಕನ್ನಡಿಗ ಯುವಕ ಸಂಘ, ಹನುಮಂತಪ್ಪ ಮ್ಯಾಗಳಮನಿ,ಜಿಲ್ಲಾ ಸಂಚಾಲಕರು,ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ, ( ಕರ್ನಾಟಕ).ಮೈಲಪ್ಪ ಬಿಸರಳ್ಳಿ,ಜಿಲ್ಲಾ ಸಂಘಟನಾ ಸಂಚಾಲಕರು,ದಲಿತ ವಿಮೋಚನೆಯ ಮಾನವ ಹಕ್ಕುಗಳ ವೇದಿಕೆ, (ಕರ್ನಾಟಕ),ಎಂ.ಡಿ.ಜೀಲಾನ ಕಿಲ್ಲೇದಾರ್,ಅಧ್ಯಕ್ಷರು,ರಾಜ ಬಾಗ್ ಸವಾರ, ದರ್ಗಾ ಕಮಿಟಿ, ಕೊಪ್ಪಳ.ಎಸ್.ಎಂ.ಹುಸೇನಿ (ಛೋಟು)ಅಧ್ಯಕ್ಷರು,ಹಳೆ ಈದ್ಗಾ ಮ್ಯಾನೇಜ್‌ಮೆಂಟ್ ಕಮಿಟಿ, ಕೊಪ್ಪಳ.ಭಾಗವಹಿಸಿದ್ದರು
Please follow and like us:
error