ಸಾಚಾರ್ ವರದಿ ಮುಸ್ಲಿಮರ ಬದುಕಿನ ಹಕ್ಕು: ಅಲ್ಲಾಗಿರಿರಾಜ್

 ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ವರದಿ ಭಾರತೀಯ ಮುಸ್ಲಿಮರ ಬದಲಾವಣೆಯ ಬದುಕಿಗಾಗಿರುವ ಹಕ್ಕಾಗಿದೆ ಎಂದು ಸಾಹಿತಿ ಅಲ್ಲಾಗಿರಿರಾಜ್ ಹೇಳಿದರು. 
ಅವರು ಕನಕಗಿರಿಯ ಮುಸ್ಲಿಂ ಸಮಾಜದವರು ಮತ್ತು ಪ್ರಗತಿಪರ ವಿಚಾರವಂತರು, ಸಾಚಾರ್ ವರದಿ ಜಾರಿಗಾಗಿ ಹಮ್ಮಿಕೊಂಡಿದ್ದ ಪತ್ರ ಚಳುವಳಿಯನ್ನು ಉದ್ದೇಶಿಸಿ ಮಾತನಾಡುತ್ತ ಕೇಂದ್ರದ ಯು.ಪಿ.ಎ. ಸರ್ಕಾರ ಕಳೆದ ೭ ವರ್ಷಗಳ ಹಿಂದೆ ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ಮುಸ್ಲಿಮರ ಸ್ಥಿತಿಗತಿ ಕುರಿತು ಸಿದ್ಧಪಡಿಸಿರುವ ಸಾಚಾರ್ ವರದಿ ಕೂಡಲೇ ಜಾರಿಗೊಳಿಸಬೇಕು. ಇದರಿಂದ ಮುಸ್ಲಿಮರಿಗೆ ರಾಜಕೀಯ ಮತ್ತು ಸಾಮಾಜಿಕ ಹಾಗೂ ಉದ್ಯೋಗಳಲ್ಲಿ ಮೀಸಲಾತಿ ದೊರೆಯುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರ ಕೂಡಲೇ ಸಾಚಾರ್ ವರದಿ ಜಾರಿಗೆ ತರಬೇಕು. ಒಂದು ವೇಳೆ ವಿಳಂಬವಾದರೆ, ಮುಂದಿನ ಸಂಸತ್ ಚುನಾವಣೆಲ್ಲಿ ಯು.ಪಿ.ಎ ಅಂಗ ಪಕ್ಷಗಳಿಗೆ ಮುಸ್ಲಿಮರ ಮತಗಳು ವಂಚಿತವಾಗುವುದು ಖಚಿತವೆಂದು ಸಾಹಿತಿ ಅಲ್ಲಾಗಿರಿರಾಜ್ ಎಚ್ಚರಿಕೆ ನೀಡಿದರು. 
ಇದೆ ಸಂದರ್ಭದಲ್ಲಿ ಖಾಜಿ ಇಕ್ಬಾಲ್‌ಖಾನ್ ಮಾತನಾಡುತ್ತ ಮುಸ್ಲಿಮರಿಗೆ ಸಾಚಾರ್ ವರದಿ ಅಗತ್ಯ ವಾಗಿದ್ದು, ಕೇಂದ್ರ ಸರ್ಕಾರ ಯಥಾವತ್ತಾಗಿ ಕೂಡಲೇ ಜಾರಿಗೆ ತರಬೇಕೆಂದು ಪತ್ರ ಚಳುವಳಿಯಲ್ಲಿ ಒತ್ತಾಯಿಸಿದರು. ಕನಕಗಿರಿಯ ಹಸನ್ ಮಜೀದ್ ಹತ್ತಿರ ಜರುಗಿದ ಪತ್ರ ಚಳುವಳಿಯಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆ ಮತ್ತು ಮುಸ್ಲಿಂ ಸಮಾಜದ ಮುಖಂಡರು ಹಾಗೂ ವಿಚಾರವಾದಿಗಳು, ಅಜ್ಮೀರ್‌ಸಾಬ್ ಕ್ವಾಟಿ, ಮಹ್ಮದ್‌ರಫಿ, ಬಾಬುಖಾನ್, ಸದರ್‌ಮಾಬುಸಾಬ್, ಮೈಬೂಬ್‌ಹುಸ್ಸೇನ್ ಮತ್ತಿತರು ಪಾಲ್ಗೊಂಡು ಸಾವಿರ ಪತ್ರಗಳನ್ನು ರಾಜ್ಯ ಸರ್ಕಾರಕ್ಕೆ ಹಾಕುವುದರ ಮೂಲಕ ಸಾಚಾರ್ ವರದಿಯನ್ನು ಜಾರಿಗೊಳಿಸಲು ಒತ್ತಾಯಿಸಿದರು. 

Related posts

Leave a Comment