ತಾವರಗೇರಾ ಗ್ರಾಮದಲ್ಲಿ ಕಣ್ಣಿನ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಯಶಸ್ವಿ.

ಕುಷ್ಟಗಿ-12- ತಾಲೂಕಿನ ತಾವರಗೇರಾ ಗ್ರಾಮದಲ್ಲಿ ಇತ್ತೀಚೆಗೆ ಜರುಗಿದ ಶಾಮೀದಅಲಿ ಉರುಸಿನ ಪ್ರಯುಕ್ತ ಸ್ಥಳೀಯ ದರ್ಗಾದಲ್ಲಿ ನೆಡೆದ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ೫೦ ಜನ ಫಲಾನುಭವಿಗಳನ್ನು ಶನಿವಾರ ಇಲ್ಲಿನ ವಿನಾಯಕ ಆಪ್ಟಿಕಲ್ಸ್ ಮತ್ತು ಕಣ್ಣಿನ ಪರೀಕ್ಷಾ ಕೇಂದ್ರದಲ್ಲಿ ಹುಬ್ಬಳ್ಳಿಯ ಡಾ.ಎಂ.ಎಂ ಜೋಷಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞರು ತಪಾಸಣೆ ಮಾಡಿದರು.
      ಕೊಪ್ಪಳ ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ, ವಿನಾಯಕ ನೇತ್ರಾ ಸೇವಾ ಸಂಸ್ಥೆ ಹಾಗೂ ಹುಬ್ಬಳ್ಳಿಯ ಡಾ.ಎಂ.ಎಂ ಜೋಷಿ ನೇತ್ರಾ ವಿಜ್ಞಾನ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸ.೩ ರಂದು ಕಣ್ಣಿನ ಉಚಿತ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು. ಅಂದು ಒಟ್ಟು ೧೫೦ ಜನರ ಕಣ್ಣುಗಳನ್ನು ಪರೀಕ್ಷಿಸಲಾಗಿತ್ತು. ಅವರಲ್ಲಿ ೫೦ ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಿ ಹುಬ್ಬಳ್ಳಿಯ ಡಾ.ಎಂ.ಎಂ ಜೋಷಿ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು.
 ಈ ಸಂದರ್ಭದಲ್ಲಿ ಹುಬ್ಬಳ್ಳಿಯ ನೇತ್ರ ತಜ್ಞರಾದ ಡಾ.ಅಮರ ಕುಲಕರ್ಣಿ, ಡಾ. ಸುಪ್ರಿಯಾ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಸಂಜಿವ ಕುಲಕರ್ಣಿ ಮತ್ತು ಮೌನೇಶ ಬಡಿಗೇರ, ವಿನಾಯಕ ನೇತ್ರ ಸೇವಾ ಸಂಸ್ಥೆಯ ಅಧ್ಯಕ್ಷ ಬಸವರಾಜ ಪಲ್ಲೇದ, ಕಾರ್ಯದರ್ಶಿ ಪ್ರಭು ಜಾಗಿರದಾರ, ನೇತ್ರ ಸಹಾಯಕಿ ಮಮತಾಜ ಬೇಗಂ, ಶನಿವಾರ ಇಲ್ಲಿಯ ವಿನಾಯಕ ಆಪ್ಟಿಕಲ್ಸ್ ಮತ್ತು ಕಣ್ಣಿನ ಪರೀಕ್ಷಾ ಕೇಂದ್ರದಲ್ಲಿ, ಶಸ್ತ್ರ ಚಿಕಿತ್ಸೆಗೆ ಒಳಗಾದ ಸ್ಥಳೀಯ ಫಲನಾಭವಿಗಳ ಕಣ್ಣುಗಳನ್ನು ಮತ್ತೊಮ್ಮೆ ಪರೀಕ್ಷಿಸಿ ಸೂಕ್ತ ಔಷಧಗಳನ್ನು ನೀಡಿ ಅನುಸರಿಸಬೇಕಾದ ನಿಯಮಗಳನ್ನು ತಿಳಿಸಿದರು.

Please follow and like us:
error