ವಿಶ್ವ ಕೈ ತೊಳೆಯುವ ದಿನ.

ಕೊಪ್ಪಳ-19- ಭಾರತ ಸರಕಾರ ನೆಹರು ಯುವ ಕೇಂದ್ರ ಕೊಪ್ಪಳ, ಯುವ ಸಾಂಸ್ಕ್ರತಿಕ ಸೇವಾ ಸಂಘ (ರಿ) ಕೊಪ್ಪಳ ವಂದೇಮಾತರಂ ಯುವ ಸಾಂಸ್ಕ್ರತಿಕ ಸೇವಾ ಸಂಘ (ರಿ) ಕೊಪ್ಪಳ ಮತ್ತು ಪ್ರೇರಣಾ ಯುವತಿ ಸಂಘ (ರಿ) ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ನಗರದ ಅಚೀವ್ ತರಬೇತಿ ಸಂಸ್ಥೆಯಲ್ಲಿ ವಿಶ್ವ ಕೈ ತೊಳೆಯುವ ದಿನವನ್ನು ಆಚರಿಸಲಾಯಿತ್ತು  ವಿಶೇಷ ಉಪನ್ಯಾಸಕರಾಗಿ ಯುವ ತರಬೇತಿದಾರರಾದ ರಾಘವೇಂದ್ರ ಕುಲಕರ್ಣಿ ಆಗಮಿಸಿ ಉಪನ್ಯಾಸನಿಡಿದರು ಕಾರ್ಯಕ್ರಮದ ಅಧ್ಯಕ್ಷತೇಯನ್ನು ಅಚೀವ್ ತರಬೇತಿ ಸಂಸ್ಥೆಯ ವ್ಯವಸ್ಥಾಪಕರಾದ ಮಮತಾ ಕಾಂಬ್ಳೇಕರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಳವಂಡಿ ಗ್ರಾಮದ ವಿರೇಶ ಹಾಳಗುಂಡಿ ವಂದೇಮಾತರಂ ಯುವ ಸೇವಾ ಸಂಘದ ಅಧ್ಯಕ್ಷರಾದ ರಾಕೇಶ ಕಾಂಬ್ಳೇಕರ್,ಸಂಸ್ಥೆಯ ತರಬೇತಿದಾರರಾದ ಪ್ರವೀಣ ಕುಮಾರ, ನೆಹರು ಯುವ ಕೇಂದ್ರದ ರಾಷ್ಟೀಯ ಯುವ ಪಡೆಯಾದ ಭಾಗ್ಯಶ್ರೀ ಕಟ್ಟಿಮನಿ, ವೇದಿಕೆ ಮೇಲೆ ಉಪಸ್ಥಿತರಿದರು. ಕಾರ್ಯಕ್ರಮದ ನಿರೂಪಣೆಯನ್ನು ಗವಿಸಿದ್ದಮ್ಮ ಹಿರೇಮಠ, ಸ್ವಾಗತವನ್ನು ದೀಪಾ ಮೇಟಿ, ವಂದನಾರ್ಪಾಣೆಯನ್ನು ವಿಜಯಲಕ್ಷ್ಮೀ ಮಾಡಿದರು.
Please follow and like us:
error