ಲೋಕಾಯುಕ್ತ ನ್ಯಾಯಮೂರ್ತಿ ಬಾಸ್ಕರರಾವ್ ಅವರ ರಾಜಿನಾಮೆಗೆ ಆಗ್ರಹಿಸಿ ಕನಕದಾಸ ವೃತ್ತದಲ್ಲಿ ರಸ್ತೆತಡೆ.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕವು ಈ ರಸ್ತೆ ತೆಡೆ ಪ್ರತಿಭಟನೆ ಮೂಲಕ ಆಗ್ರಹಿಸುವದೆನೆಂದರೆ  ಕರ್ನಾಟಕ ಲೋಕಾಯುಕ್ತ ಕಛೇರಿಯಲ್ಲಿ ಬ್ರಷ್ಟಾಚಾರ ತಾಂಡವವಾಡುತ್ತಿದ್ದು. ಲೋಕಾಯುಕ್ತರ ಪುತ್ರನ ಅವ್ಯವಹಾರ ಜಗಜ್ಜಾಹಿರಾಗಿದ್ದು. ಅದರ ನೇರ ಹೊಣೆಯನ್ನು ಹೊತ್ತು ಲೋಕಾಯುಕ್ತ ನ್ಯಾಯಮೂರ್ತಿ ಬಾಸ್ಕರರಾವ್ ಈ ಕೂಡಲೇ ರಾಜಿನಾಮೆಯನ್ನು ನೀಡಬೇಕು. ಬೇಲಿಯೇ ಎದ್ದು ಹೋಲ ಮೇದಂತೆ ಎನ್ನುವ ಗಾದೆಯ ಹಾಗೆ ಬ್ರಷ್ಟಾಚಾರವನ್ನು ತೊಡೆದು ಹಾಕುಬೇಕಾದ ಇಲಾಖೆಯ ಮುಖ್ಯಸ್ಥರ ಕುಟುಂಬದವರೆ ಬ್ರಷ್ಟಾಚಾರ ಮಾಡುತ್ತಿರುವುದು ಖಂಡನೀಯ. ಹಾಗೂ ರಾಜ್ಯ ಸರಕಾರ ಈ ವಿಷಯದಲ್ಲಿ ಅವರ ಮತ್ತು ಅವರ ಕುಟುಂಬದವರಗೆ ರಕ್ಷಣೆ ನೀಡುತ್ತಿರುವುದು ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಿದೆ.  ರಾಜ್ಯಪಾರು ಸಂವಿಧಾನ ಬದ್ದವಾದ ಸ್ವಾಯತ್ತ ಸಂಸ್ಥೆಯಾದ ಲೋಕಾಯುಕ್ತದಲ್ಲಿ ಇಂತಹ ಹಗರಣಗಳು ನಡೆದುದರಿಂದ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮತ್ತು ರಾಜ್ಯ ಸರಕಾರ ಈ ಅವ್ಯವಹಾರದ ಕುರಿತು ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಇಲ್ಲದಿದ್ದರೆ ಕರವೇ ಉಗ್ರವಾಗಿ ಪ್ರತಿಭಟಿಸಬೇಕಾಗುತ್ತದೆಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ. ಪ್ರತಿಭಟಣೆಯ ನೇತೃತ್ವವನ್ನು ಜಿಲ್ಲಾ ಸಂಚಾಲಕ ಬಿ. ಗಿರೀಶಾನಂದ ಜ್ಞಾನಸುಂದರ, ಜಿಲ್ಲಾ ಉಪಾಧ್ಯಕ್ಷ ಪ್ರವೀಣ ಬ್ಯಾಹಟ್ಟಿ, ಕೊಪ್ಪಳ ತಾಲೂಕ ಅಧ್ಯಕ್ಷ ಹನಮಂತ ಬೆಸ್ತರ, ಈರಪ್ಪ ಡೊಳ್ಳಿನ, ನಿಂಗಪ್ಪ ಮೂಗೀನ, ಕಾಸೀಮಸಾಬ ಕಾಯಿಗಡ್ಡಿ, ಗವಿಸಿದ್ದಪ್ಪ ಅಂಡಿ, ಶಿವಕುಮಾರ ಕುಕನೂರ, ಆಟೋ ಘಟಕ ಅಧ್ಯಕ್ಷರು, ನೂರಪಾಷಾ ಕವಲೂರ, ರಾಮು ಪೂಜಾರ, ಮಹೇಶ ಬನ್ನಿಕೊಪ್ಪ, ಜಾನ್, ಶಿವಕುಮಾರ ಕಟಗರ, ಮಹಮ್ಮದ ಜುಬೇರ, ಮಂಜುನಾಥ ಯಲಬುರ್ಗಿ ಪ್ರಶಾಂತ ಕೊತಬಾಳ, ಶಶಿ ಬೀಡಿನಾಳ, ಗವಿಸಿದ್ದಪ್ಪ ಕುರಿ, ಬಸವರಾಜ ಅಬ್ಬಿಗೇರಿ,  ಮುಂತಾದವರು ಉಪಸ್ಥಿತರಿದ್ದರು.
Please follow and like us:

Leave a Reply