ಸಮಾಜ ಸೇವೆಯೇ ಉತ್ತಮ – ಸೌಭಾಗ್ಯಲಕ್ಷ್ಮಿ.

ಹೊಸಪೇಟೆ- ಮಾನವ ಸಂಘ ಜೀವಿ ಸಮಾಜದಲ್ಲಿಯೇ ತನ್ನ ಏಳ್ಗೆಯನ್ನು ಕಾಣಬೇಕು ಈ ನಿಟ್ಟಿನಲ್ಲಿ ಅದರ ಋಣ ತೀರಿಸಿಕೊಳ್ಳಲು ಸಮಾಜ ಸೇವೆಯೇ ಉತ್ತಮ ಮಾರ್ಗ ಎಂದು ಸರಕಾರಿ ನೂರು ಹಾಸಿಗೆ ಆಸ್ಪತ್ರೆಯ ವೈದ್ಯೆ ಸೌಭಾಗ್ಯಲಕ್ಷ್ಮಿ ತಿಳಿಸಿದರು.
    ಅವರು ನಗರದ ರೋಟರಿ ಸಭಾಂಗಣದಲ್ಲಿಂದು ಇನ್ನರ್‌ವೀಲ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆಯಂಗವಾಗಿ  ಶಿಕ್ಷಕರಿಗಾಗಿ ಆಯೋಜಿಸಿದ್ದ ಉಚಿತ  ಕಿವಿ, ಮೂಗು, ಗಂಟಲು ಮತ್ತು ಕಣ್ಣಿನ ತಪಾಸಣ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡುತ್ತಾ  ತಾಯಿ ಜನ್ಮ ನೀಡಿದರೆ ಗುರುಗಳು ಜ್ಞಾನದಿಂದ ಬದುಕು ಕಟ್ಟಿ ಕೊಡುತ್ತಾರೆ ಅವರುಗಳು ಸದಾ ಪೂಜನೀಯರು, ಸರಕಾರದಿಂದ ಎಲ್ಲಾ ಸೇವೆಗಳು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ  ಸಂಘ ಸಂಸ್ಥೇಗಳು ಮುಂದೆ ಬಂದು ಸಮಾಜಸೇವೆ ಮಾಡಬೇಕು ಎಂದು ಕರೆ ನೀಡಿದರು.
    ಈ ಸಂದರ್ಭದಲ್ಲಿ ಇನ್ನರ್‌ವೀಲ್ ಅಧ್ಯಕ್ಷೆ ನಂದಿನಿ ಚಿಕ್ಕ್‌ಮಠ್, ಕಾರ್ಯದರ್ಶಿ ರೇಖಾ ಪ್ರಕಾಶ್, ರೋಟರಿ ಅಧ್ಯಕ್ಷ ಸೈಯದ್ ಮಹ್ಮದ್, ಕಾರ್ಯದರ್ಶಿ ಡಾ.ಮುನಿವಾಸು ದೇವ ರೆಡ್ಡಿ, ಶಿಕ್ಷಣ ಅಭಿಯಾನದ ಅಧ್ಯಕ್ಷ ಹೆಚ್.ಶ್ರೀನಿವಾಸ ರಾವ್  ರಾಘವೇಂದ್ರ, ಇನ್ನರ್‌ವೀಲ್‌ನ  ಸದಸ್ಯರಾದ ಶೋಭಾ ಶಿಂಧೆ,  ಅನ್ನಪೂರ್ಣ ಸದಾಶಿವ, ವಿಜಯಾ ಅಗ್ನಿಹೋತ್ರಿ,  ಅರುಣಾ ಮೋಹನ್, ಉಪಸ್ಥಿತರಿದ್ದರು. ರಾಜೇಶ್ವರಿ ನಿರ್ವಹಿಸಿದರು.
     ಸರಕಾರಿ ನೂರು ಹಾಸಿಗೆ ಆಸ್ಪತ್ರೆಯ ಕಿವಿ.ಮೂಗು.ಗಂಟಲು ತಜ್ಞ ಡಾ.ಹರಿಪ್ರಸಾದ್ ಹಾಗೂ ನೇತ್ರ ತಜ್ಞೆ ಸೌಭಾಗ್ಯಲಕ್ಷ್ಮೀ ಶಿಕ್ಷಕರ ಆರೋಗ್ಯ ತಪಾಸಣೆ ನಡೆಸಿದರು.
    ನಗರದ ಹಲವಾರು ಶಾಲೆಗಳ ಶಿಕ್ಷಕರು ಶಿಬಿರದ ಸದುಪಯೋಗ ಪಡೆದರು.
ಇನ್ನರ್‌ವೀಲ್ ಸಂಸ್ಥೇಯಿಂದ ಶಿಕ್ಷಕರಿಗಾಗಿ ಆಯೋಜಿಸಿದ್ದ  ಕಿವಿ,ಮೂಗು,ಗಂಟಲು ಹಾಗೂ ಕಣ್ಣಿನ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸರಕಾರಿ ನೂರು ಹಾಸಿಗೆ ಆಸ್ಪತ್ರೆಯ ಡಾ| ಸೌಭಾಗ್ಯ ಲಕ್ಷ್ಮೀ ಹಾಗೂ ಡಾ.ಹರಿಪ್ರಸಾದ್ ಉದ್ಘಾಟಿಸಿ ಈ ಸಂದರ್ಭದಲ್ಲಿ ಅಧ್ಯಕ್ಷೆ ನಂದಿನಿ ಚಿಕ್ಕಮಠ್, ಕಾರ್ಯದರ್ಶಿ ರೇಖಾ ಪ್ರಕಾಶ್, ರೋಟರಿ ಅಧ್ಯಕ್ಷ ಕೆ.ಸೈಯದ್ ಮಹ್ಮದ್, ಕಾರ್ಯದರ್ಶಿ ಡಾ.ಮುನಿವಾಸು ದೇವ ರೆಡ್ಡಿ, ಶ್ರೀನಿವಾಸ ರಾವ್, ರಾಘವೇಂದ್ರ, ಶೋಭಾ ಶಿಂದೆ, ಅನ್ನಪೂರ್ಣ ಸದಾಶಿವ ಹಾಗೂ ರಾಜೇಶ್ವರಿ.ಎ. ಇವರುಗಳು ಉಪಸ್ಥಿತರಿದ್ದರು.

Leave a Reply