೦೩ ದಿನದ ಪೌರತ್ವ ತರಬೇತಿ ಶಿಬಿರ.

೦೮ರಂದು ಹ್ಯಾಟಿ ಗ್ರಾಮದಲ್ಲಿ ನಡೆದ ೦೩ ದಿನದ ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು. ಸಮಾರಂಬದಲ್ಲಿ ಮುಖ್ಯ ಅಥಿತಿ ಸ್ಥಾನ ವಹಿಸಿ ಮಾತನಾಡಿದ ಗವಿಸಿದ್ದಯ್ಯ ಸಸಿಮಠ ಪಿಕಾರ್ಡ ಬ್ಯಾಂಕಿನ ನಿರ್ದೇಶಕರು ಮಾತನಾಡಿ ಪೌರತ್ವ ತರಬೇತಿ ಶಿಬಿರಗಳು ವಿದ್ಯಾರ್ಥಿಗಳಿಗೆ ಉತ್ತಮ ನಾಗರಿಕ ಮೌಲ್ಯಗಳನ್ನು ಬೆಳೆಸುತ್ತಾ,ಉತ್ತಮ ಪೌರನ ಸಾಮಥ್ಯಗಳನ್ನು ಬೆಳೆಸುವಲ್ಲಿ ಸಹಾಯಕಾರಿಯಾಗಿವೆ ಎಂದು ಹೇಳಿದರು. ಹಾಗೆಯೆ ಎಲ್ಲರೂ ಉತ್ತಮ ಸಾಮಾಜಿಕ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೆಕೆಂದು ಕರೆ ನೀಡಿದರು. ಅತಿಥಿಸ್ಥಾನವಹಿಸಿ  ಮಾತನಾಡಿದ ಗ್ರಾಮದ ಹಿರಿಯರಾದ ವೀರುಪಾಕ್ಷರಡ್ಡಿ ಯಡ್ರಮನಹಳ್ಳಿ ಮಾತನಾಡಿ ಈ ಶಿಬಿರದಲ್ಲಿ ನಮ್ಮ ಗ್ರಾಮದಲ್ಲಿ ೮೦೦ ಸಿಸಿಗಳನ್ನು ನೆಟ್ಟು ನಮ್ಮ ಗ್ರಾಮವನ್ನು ಹಸೀರುಕರಣ ಗೋಳಿಸುವಲ್ಲಿ ಈ ಶಿಬಿರವು ಪ್ರಮುಖ ಪಾತ್ರ ವಹಿದ್ದಿರಿ ಎಂದು ಹೇಳಿದರು. ಇನೋರ್ವ ಅತಿಥಿಗಳಾದ ಚಿನ್ನರಡ್ಡಿ ರೊಡ್ಡರ ಮಾತನಾಡಿ ವಿದ್ಯಾರ್ಥಿಗಳಿಗೆ ಮಾನಸಿಕ ಸ್ಥೈರ್ಯ ಅಗತ್ಯತೆ ಎಂದು ಹೇಳಿದರು.ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಪ್ರಾಚಾರ್ಯರಾದ ಪ್ರಕಾಶ ಕೆ ಬಡಿಗೇರ ಮಾತನಾಡಿ ಶಿಬಿರಾರ್ಥಿಗಳಿಗೆ ಗ್ರಾಮೀಣ ಜನ ಜೀವನ ಹಾಗೂ ಅವರ ಜೀವನ ಶೈಲಿ ತಿಳುವಲ್ಲಿ ಸಹಾಯಕಾರಿಯಾಗಿದೆ ಎಂದು ಹೇಳಿದರು. ಕಾಲೇಜಿನ ವತಿಯಿಂದ ಗ್ರಾಮದ ವ್ಯಕ್ತಿಗಳನ್ನು ಸತ್ತಕರಿಸಲಾಯಿತು ಶಿಬಿರಾರ್ಥಿಗಳಾದ ಸಂತೋಷ.ವಿದ್ಯಾಶ್ರೀ.ಸಂತೋಷ.ಅಶೋಕ.ವೀರೆಶ.ದ್ಯಾಮಣ್ಣ ತುಪ್ಪದ. ಶಿಬಿರದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ವೇದಿಕೆಯ ಮೇಲೆ ಗ್ರಾ.ಪ.ಸದಸ್ಯರಾದ ಶಿವಯ್ಯ.ಚಂದ್ರು.ನಿಂಗಪ್ಪ.ನಿಂಗನಗೌಡ.ಶಿವಪ್ಪ.ದೇವಪ್ಪ. ಬೀಮರಡ್ಡಿ. ಇತರರು ಹಾಗೂ ಸಂಸ್ಥೆಯ ಉಪನ್ಯಾಸಕರಾದಆನಂದರಾವ್‌ದೇಸಾಯಿ.ಎ.ಎನ್.ತಳಕಲ್.ಎಸ್.ಎಸ್.ವೀರನಗೌಡ್ರ.ಎಸ್.ಎಸ್.ಅರಳಲೇಮಠ.ಡಿ.ಎಂ.ಬಡಿಗೇರ.ಸುಭಾಷ ಚಂದ್ರ.ಮಲ್ಲಣ್ಣ ಕಾತರಕಿ.ಡಿ.ಹೊಸಮನಿ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.  ಜಿ.ಎಸ್.ಸೊಪ್ಪಿಮಠ. ಸ್ವಾಗತಿಸಿದರು. ತೋಟಪ್ಪ ಕಾಮನೂರು. ವಂದಿಸಿದರು.ಮಮತಾ ಬೆಳವಗಿ ನಿರೂಪಿಸಿದರು.

Please follow and like us:
error