ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಪುಸ್ತಕ – ಕಲಾ ಪ್ರದರ್ಶನಕ್ಕೆ ಆಹ್ವಾನ

ಕೊಪ್ಪಳ, ಮೇ. ೧೯. ದಲಿತ ಸಾಹಿತ್ಯ ಪರಿಷತ್ ನಿಂದ ಜೂನ್ ೧೮ ಮತ್ತು ೧೯ ರಂದು ಕೊಪ್ಪಳದಲ್ಲಿ ನಡೆಯುವ ೩ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಮತ್ತು ದಲಿತ ಕಲಾ ಪ್ರದರ್ಶನಕ್ಕೆ ಮಳಿಗೆಗಾಗಿ ಆಹ್ವಾನಿಸಲಾಗಿದೆ.
ನಗರದಲ್ಲಿ ಎರಡು ದಿನ ನಡೆಯುವ ಸಮ್ಮೇಳನದಲ್ಲಿ ರಾಜ್ಯ ಮತ್ತು ದೇಶದ ಕೆಲವು ಭಾಗಗಳಿಂದ ಸಾಹಿತಿಗಳು ಪಾಲ್ಗೊಳ್ಳುವರು, ಸಮ್ಮೇಳನದಲ್ಲಿ ಪ್ರತಿ ದಿನ ೧೫೦೦ ಸಾಹಿತಿಗಳು, ಸಾಹಿತ್ಯಾಸಕ್ತರು, ದಲಿತ ಬರಹಗಾರರು, ದಲಿತ ಚಳುವಳಿ ಮುಖಂಡರು, ದಲಿತ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಳ್ಳುವರು. ಈ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಅನುಕೂಲವಾಗುವ ಮಾರಾಟ ಮಳಿಗೆ ಮತ್ತು ದಲಿತ ಕಲೆಗಳ ಪ್ರದರ್ಶನಕ್ಕೆ ಮಳಿಗೆಗಳನ್ನು ಪಡೆಯಲು ಆಸಕ್ತಿಹೊಂದಿದವರು, ಜೂನ್ ೫ ರೊಳಗೆ ಡಾ. ಅರ್ಜುನ ಗೊಳಸಂಗಿ ಸಂಯೋಜಕರು, ೩ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಕೊಪ್ಪಳ ಮೊ : ೯೪೪೮೭೮೯೩೨೨.
ಇವರನ್ನು ಸಂಪರ್ಕಿಸಿ ಮಳಿಗೆ ಪಡೆಯಬೇಕೆಂದು ದಸಾಪ ಜಿಲ್ಲಾಧ್ಯಕ್ಷ ಮಂಜುನಾಥ ಗೊಂಡಬಾಳ ಪ್ರಕಟಣೆಯಲ್ಲಿ ಕೋರಿದ್ದಾರೆ.
Please follow and like us:
error