fbpx

ಸಾರಿಗೆ ಇಲಾಖೆಯಿಂದ ಕೊಪ್ಪಳದಲ್ಲಿ ವಾಯು ಮಾಲಿನ್ಯ ಮಾಸಾಚರಣೆ.

ಕೊಪ್ಪಳ ನ. ೦೨ (ಕ ವಾ) ಸಾರಿಗೆ ಇಲಾಖೆ ವತಿಯಿಂದ ಕೊಪ್ಪಳದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯ ಆವರಣದಲ್ಲಿ ವಾಯು ಮಾಲಿನ್ಯ ಮಾಸಾಚರಣೆ ಕಾರ್ಯಕ್ರಮ ಸೋಮವಾರದಂದು ನಡೆಸಲಾಯಿತು.
     ಜಿಲ್ಲಾ ಪರಿಸರ ಅಧಿಕಾರಿ ಕೆ. ಬಿ. ಕೊಟ್ರೇಶ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ನಂತರ ವಾಯು ಮಾಲಿನ್ಯದ ಕುರಿತು ಸಾರಿಗೆ ಇಲಾಖೆ ಪ್ರಕಟಿಸಿರುವ ಕರ ಪತ್ರಗಳನ್ನು ಬಿಡು
     ಪ್ರಾದೇಶಿಕ ಸಾರಿಗೆ ಅಧಿಕಾರಿ ವಿ.ಡಿ. ತಹಶೀಲ್ದಾರ್ ಅವರು ಮಾತನಾಡಿ,  ಸಾರಿಗೆ ಇಲಾಖೆ ವತಿಯಿಂದ ವಾಯು ಮಾಲಿನ್ಯದ ಕುರಿತು ವಾಹನಗಳ ತಪಾಸಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಾಯು ಮಾಲಿನ್ಯ ಪಸರಿಸುವ ವಾಹನಗಳಿಗೆ ೧೦೦೦ ರೂ. ಗಳ ದಂಡ ವಿಧಿಸಲಾಗುವುದು.  ವಾಹನ ಮಾಲೀಕರು ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಚಲಾಯಿಸುವಂತೆ ವಾಹನ ಮಾಲೀಕರಲ್ಲಿ ಮನವಿ ಮಾಡಿಕೊಂಡರು.
     ಮೋಟಾರು ವಾಹನ ನಿರೀಕ್ಷಕ ಅಮರೇಶ ಚಲ್ವಾ ಅವರು ಮಾತನಾಢಿ, ಸಾರ್ವಜನಿಕರು ಸ್ವಂತ ವಾಹನಗಳನ್ನು ಉಪಯೋಗಿಸುವುದಕ್ಕಿಂತ ಸಾರ್ವಜನಿಕ ವಾಹನಗಳನ್ನು ಉಪಯೋಗಿಸುವುದರಿಂದ ವಾಯು ಮಾಲಿನ್ಯ ನಿಯಂತ್ರಿಸಬಹುದಾಗಿದೆ ಎಂದರು, ಅಧೀಕ್ಷಕ ಬಿ. ಗೋವಿಂದರಾಜ ಸ್ವಾಗತಿಸಿದರು, ಪರಮೇಶ್ವರ ಹಿಮೋವಾನಿ ವಂದಿಸಿದರು.

ಗಡೆಗೊಳಿಸಿ, ವಾಯು ಮಾಲಿನ್ಯದಿಂದ ಉಂಟಾಗುವ ದುಷ್ಪರಿಣಾಮಗಳು, ಹಾಗೂ ಇದರ ನಿಯಂತ್ರಣದ ಕುರಿತು ಮಾಹಿತಿ ನೀಡಿದರು.  ಸಾರ್ವಜನಿಕ ಉದ್ದಿಮೆಗಳಿಂದ ಉಂಟಾಗುವ ಮಾಲಿನ್ಯಕ್ಕಿಂತ ವಾಹನಗಳು ಬಿಡುಗಡೆ ಮಾಡುವ ಹೊಗೆಯಿಂದ ಉಂಟಾಗುವ ಮಾಲಿನ್ಯ ಸಾರ್ವಜನಿಕರಿಗೆ ಹೆಚ್ಚಿನ ಹಾನಿಕಾರಿಯಾಗಿದೆ ಎಂದರು.

Please follow and like us:
error

Leave a Reply

error: Content is protected !!