ತಳಕಲ್ಲ ಗ್ರಾಮದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ

   ಕೊಪ್ಪಳ : ನಂ-:  ಜಿಲ್ಲಾ ಪಂಚಾಯತ ಕೊಪ್ಪಳ, ತಾಲೂಕ ಪಂಚಾಯತ ಯಲಬುರ್ಗಾ ಮತ್ತು ಮಹಿಳಾ ಮತ್ತು ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ, ಶಿಕ್ಷಣ ಇಲಾಖೆ ಹಾಗೂ ತಳಕಲ್ಲ ಗ್ರಾಮ ಪಂಚಾಯತಿಯ ಸಹಯೋಗದಲ್ಲಿ ನಡೆದ ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಸಲಾಯಿತು ಈ ಸಭೆಯಲ್ಲಿ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ರಕ್ಷಣೆ ಇತರೆ ಸಮಸ್ಯಗಳ ಕುರಿತು ಗ್ರಾಮ ಪಂಚಾಯತ ಅಧ್ಯಕ್ಷರು ಹಾಗೂ ಉಪಾದ್ಯಕ್ಷರು ಸರ್ವ ಸಧಸ್ಯರುಗಳು ಮೇಲ್ಕಂಡ ವಿವಿದ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ೦ ರಿಂದ ೧೮ ವಯಸ್ಸಿನವರಗೆ ಮಕ್ಕಳ ಅಬ್ಯುದಯದ ಸಲುವಾಗಿ ಗ್ರಾಮ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.
          ಈ ಸಭೆಯಲ್ಲಿ ತಳಕಲ್ಲ ಗ್ರಾಮದ ವಿವಿದ ಶಿಕ್ಷಣ ಸಂಸ್ಥೆಯಿಂದ ಭಾಗವಿಹಿಸಿದ ವಿಧ್ಯಾರ್ಥಿಗಳು ತಮ್ಮ ತಮ್ಮ ಶಾಲೆಗಳಲ್ಲಿ ಅಕ್ಷರ ದಾಸೋಹದ ಹಾಗೂ ಸ್ವಚ್ಚತೆಯ ಕುಡಿಯುವನೀರಿನ ಶಾಲಾ ಮೈದಾನದ ಆವರಣ ಗಳಲ್ಲಿ ಗಿಡನೆಡುವಿಕೆ ಹಾಗೂ ಪರಿಸರ ರಕ್ಷಣೆಯ ವಿಷಯವಾಗಿ ಚರ್ಚಿಸಿದರು.
          ವಿಷಾದದ ಸಂಗತಿಯೇನಂದ ಬಹು ಸಂಖ್ಯೆಯಲ್ಲಿ ವಿಧ್ಯಾರ್ಥಿಗಳು ಎಲ್ಲಾ ವಾರ್ಡುಗಳ ಸಂದಿಗೊಂದಿಗಳಲ್ಲಿ ನಾಯಿ ಕೊಡಗಳಂತೆ  ಹಬ್ಬಿರುವ ಅನಧಿಕೃತ iದ್ಯದಂಗಡಿಗಳ ಬಗ್ಗೆ ವಿರೋಧ ವ್ಯಕ್ತ ಪಡಿಸಿದರು ಮುಂದುವರೆದು ಈ ಅಂಗಡಿಗಳಿಂದ ಜನರು ಮುಖ್ಯ ರಸ್ತೆಗಳಲ್ಲಿ ಕುಡಿದು ಮದ್ಯದ ಬಾಟಲಿಗಳನು ರಸ್ತೆಗಳಲ್ಲಿ ವಗೆದು  ತೂರಾಡುತ್ತಾ ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ತೊಂದರೆ ಕೊಡುತ್ತಾರೆ ಹಾಗೂ ಸಾರ್ವಜನಿಕಸ್ಥಳಗಳಲ್ಲಿ ಇಸ್ಪೆಟ್ ಆಟವನ್ನು ಆಡುತ್ತಾರೆ ದಯವಿಟ್ಟು ತಾವು ಇಸ್ಪೆಟ್ ಅಡ್ಡೆಗಳನ್ನು ಹಾಗೂ ಅಕ್ರಮ ಮಧ್ಯದಂಗಡಿಗಳನ್ನು  ಮುಚ್ಚಿಸಿ ಅಂತವರ ಮೇಲೆ ಕಾನೂನು ರೀತಿ ಕ್ರಮತೆಗೆದುಕೊಳ್ಳಬೇಕೆಂದು ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಖಾರವಾಗಿ ನುಡಿದರು.
      
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಹುಸೇನಭಿ ತಂಬುಲಿ ಗ್ರಾಮ ಪಂಚಾಯತ ಅಧ್ಯಕರು ನೆರವೇರಿಸಿದರು. ಅಧ್ಯಕ್ಷತೆಯನ್ನು ತಿಮ್ಮಣ್ಣ ಹಳ್ಳಿಕೇರಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರು ವಹಿಸಿದ್ದರು. ಪ್ರಸ್ತಾವಿಕವಾಗಿ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ತಾಲೂಕ ಸಂಯೋಜಕರಾದ ಕಲ್ಲಪ್ಪ ತಳವಾರ ಮಾತನಾಡಿದರು. ಮೂಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಪ್ರುವೈಜರ ಜಯಶ್ರೀ ಅವರು ವಹಿಸಿದ್ದರು. ಹಾಗೂ ಗ್ರಾಮ ಲೆಕ್ಕಾದಿಕಾರಿಗಳಾದ ಈಶ್ವರಪ್ಪ ಊರಮುಂದಿನ ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ತಿಮ್ಮಣ್ಣ ಚವಡಿ, ರಸುಲಸಾಭ ತಂಬೂಲಿ ಶಿವಯ್ಯ ಹಿರೇಮಠ. ಗ್ರಾಮ ಪಂಚಾಯತಿ ಕಾರ್ಯದರ್ಶಿ ನಾಗರತ್ನ ಎಲ್ಲಾ ಶಾಲೆಯ ಎಲ್ಲಾ ಶಿಕ್ಷಕರು ಮುಂತಾದವರು ಈ ಸಮಾರಂಬದಲ್ಲಿ ಭಾಗವಹಿಸಿದ್ದರು ಎಂದು ಪತ್ರಿಕಾ ಪ್ರಕಟಣೆಗೆ. ಗವಿಸಿದ್ದೇಶ್ವರಸ್ವಾಮಿ ರಾಚಯ್ಯ ನಿರೂಪಿಸಿದರು. ಮಂಜುಳಾ ಕೋರಗಲ್‌ಮಠ ನಾಡಗೀತೆ ಹಾಡಿದರು, ಅರುಣಾ & ಸಂಗಡಿಗರು ಪ್ರಾರ್ಥಿಸಿದರು, ಬಸಮ್ಮ ಸೊಂಪೂರ ಸ್ವಾಗತಿದಸಿದರು, ಸಮುದಾಯ ಸಂಘಟಿಕರಾದ ಶ್ರೀಕಾಂತ ವಾಯಿ. ಹಣವಾಳ ವದನಾರ್ಪಣೆ ನೆರವೇರಿಸಿದರು. 
    

Related posts

Leave a Comment