ಕವಿ ಮೊದಲು ತನ್ನ ಕಾವ್ಯವನ್ನು ಪ್ರೀತಿಸಬೇಕು- ಕವಿಸಮೂಹ

ಕೊಪ್ಪಳ : ಕವಿ ತಾನು ಸೃಷ್ಟಿಸಿದ ಕಾವ್ಯವನ್ನು ಪ್ರೀತಿಸಬೇಕು. ಕಾವ್ಯ ಮೊದಲು ಕವಿಗೆ ಇಷ್ಟವಾಗಬೇಕು. ಹೃದಯದಿಂದ ಬಂದಂತಹ ಕಾವ್ಯವನ್ನು ಕವಿ ಸಮರ್ಥವಾಗಿ ವಾಚನ ಮಾಡಿದಾಗ ಅದು ಕೇಳುಗರಿಗೆ ತಲುಪುತ್ತದೆ. ಈ ದಿಸೆಯಲ್ಲಿ ಉರ್ದು ಕವಿಗಳು ತಮ್ಮ ಕವನಗಳನ್ನು, ಶಾಹಿರಿಗಳನ್ನು ವಾಚನ ಮಾಡುವುದನ್ನು ನೋಡಿ ಕಲಿಯಬೇಕು ಎಂದು ಕವಿಸಮೂಹ ಅಭಿಪ್ರಾಯ ವ್ಯಕ್ತಿಪಡಿಸಿತು. ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ  ಹಮ್ಮಿಕೊಂಡಿದ್ದ ೮೮ನೇ ಕವಿಸಮಯದಲ್ಲಿ ಕವನ ವಾಚನದ ಬಗ್ಗೆ ಮತ್ತು  ಇತ್ತೀಚಿಗೆ ನಡೆದ ಮುಷಾಯಿರಾ ( ಉರ್ದು ಕವಿಗೋಷ್ಠಿ) ಕಾರ್‍ಯಕ್ರಮದ ಬಗ್ಗೆ ಚರ್ಚೆ ನಡೆಸಲಾಯಿತು. 

ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ  ಮಹೇಶ ಬಳ್ಳಾರಿ- ಚುಟುಕುಗಳು, ವಿಠ್ಠಪ್ಪ ಗೋರಂಟ್ಲಿ- ಸಂಕ್ರಾಂತಿ, ಮುಳ್ಳಿನ ಮೇಲೆ ಅರಳಿದ ಹೂ, ಮಹಾಂತೇಶ ಮಲ್ಲನಗೌಡ- ಕಾಡಿನ ಹೂ, ಡಾ.ರೇಣುಕಾ ಕರಿಗಾರ- ಅವನನ್ನು ಕಾಣುತ್ತೇನೆ , ನಿರೀಕ್ಷೆ, ಬಸವರಾಜ್ ಚೌಡಕಿ-ದ್ರೌಪದಿ, ತುಂಗಭದ್ರೆಯ ತೀರದಲ್ಲಿ, ಬಸವರಾಜ ಸಂಕನಗೌಡರ- ಕೋರಿಕೆ, ಕುರುವತ್ತಿಗೌಡ್ರ- ದೇವರು ಬರೆದ ಕವಿತೆ, ಪ್ರಕಾಶ ವಿಶ್ವಕರ್ಮ- ಗಾಂಧಿ ತಾತಾ, ಓದು, ಜಿ.ಎಸ್. ಗೋನಾಳ- ಸಂಕ್ರಾಂತಿ, ಎನ್.ಜಡೆಯಪ್ಪ- ಹೊಸ ವರ್ಷ, ಸಿರಾಜ್ ಬಿಸರಳ್ಳಿ – ಇಷ್ಟೇ ಬದುಕು,  ಅಲ್ಲಮಪ್ರಭು ಬೆಟ್ಟದೂರು-  ಈ ಕಪ್ಪು ಮನುಷ್ಯ, ಶಿವಪ್ರಸಾದ ಹಾದಿಮನಿ-  ಮಡೆಸ್ನಾನದಲ್ಲಿ ಮಡಿದವರು, ಶಾಂತು ಬಡಿಗೇರ- ಮನೆಯ ಜ್ಯೋತಿ, ನಟರಾಜ ಸವಡಿ- ನೆರೆ ಹಾವಳಿ ಕವನಗಳನ್ನು ವಾಚನ ಮಾಡಿದರು. 

ಕಾರ್‍ಯಕ್ರಮದಲ್ಲಿ ಹನುಮಂತಪ್ಪ ಅಂಗಡಿ,ಶಿವಾನಂದ ಹೊದ್ಲೂರ, ಪಡೆಯಪ್ಪ, ಜಕಣಾಚಾರಿ ವಿಶ್ವಕರ್ಮ ಇತರರು ಭಾಗವಹಿಸಿದ್ದರು. 
ಸ್ವಾಗತವನ್ನು ಮಹೇಶ ಬಳ್ಳಾರಿ, ವಂದನಾರ್ಪಣೆಯನ್ನು  ಎನ್ ಜಡೆಯಪ್ಪ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. 
Please follow and like us:
error