ಅಧ್ಯಕ್ಷರಾಗಿ ಡಾ. ಬಾನಂದೂರು ಕೆಂಪಯ್ಯ ನೇಮಕ, ಜಾನಪದ ಲೋಕ ಹರ್ಷ

ಕರ್ನಾಟಕ ಜಾನಪದ ಅಕಾಡೆಮಿ
ಬಳ್ಳಾರಿ, ಜೂ. ೧೯: ಖ್ಯಾತ ಜಾನಪದ ಗಾಯಕ ಡಾ. ಬಾನಂದೂರು ಕೆಂಪಯ್ಯ ಅವರನ್ನು ರಾಜ್ಯ ಸರಕಾರ ಮೂರು ವರ್ಷದ ಅವಧಿಗೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದನ್ನು ಜಾನಪದ ಕ್ಷೇತ್ರದ ಗಣ್ಯರು, ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸ್ವಾಗತಿಸಿ ಹರ್ಷ ವ್ಯಕ್ತಪಡಿಸಿದ್ದಾರೆ. 
ಕರ್ನಾಟಕ ಜಾನಪದ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿರುವ ಡಾ. ಬಾನಂದೂರು ಕೆಂಪಯ್ಯ ಅವರಿಗೆ  ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾನ ಲಭಿಸಿರುವುದು ಹೆಮ್ಮೆಯ ವಿಷಯ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರುಸ್ಕೃತ, ಖ್ಯಾತ ಜಾನಪದ ಕಲಾವಿದ ಬೆಳಗಲ್ ವೀರಣ್ಣ, ಖ್ಯಾತ ಜಾನಪದ ಕಲಾವಿದೆ ನಾಡೋಜ ದರೋಜಿ ಈರಮ್ಮ, ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಗುರುಮೂರ್ತಿ ಪೆಂಡಕೂರ್, ಬಳ್ಳಾರಿ ತಾಲೂಕು ಘಟಕದ ಅಧ್ಯಕ್ಷ, ಪತ್ರಕರ್ತ ಸಿ ಮಂಜುನಾಥ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಡಾ. ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ ಸುರೇಶ್ ಕುಮಾರ್, ಸಹ ಕಾರ್ಯದರ್ಶಿ ಸಿ. ಶಿವಾನಂದ್, ಜಾನಪದ ಕಲಾವಿದರಾದ  ಬಿ. ಸುಜಾತಮ್ಮ, ನಾಡೋಜ ಹರಿಜನ ಪದ್ಮಮ್ಮ, ಹಂದ್ಯಾಳ್ ಶ್ರೀ ಮಹಾದೇವ ತಾತಾ ಕಲಾ ಸಂಘದ ಅಧ್ಯಕ್ಷ ಹಂದ್ಯಾಳ್ ಜಿ ಪರುಷೋತ್ತಮ್, ಮರ್ಚೇಡ್ ಟ್ರಸ್ಟ್ ನ ಎಂ ಜಿ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ ಕೊಟ್ರಪ್ಪ, ಅಶ್ವರಾಮಣ್ಣ ಹಗಲುವೇಷ ಕಲಾ ಸಂಘದ ಅಧ್ಯಕ್ಷ ಅಶ್ವ ರಾಮಣ್ಣ, ಜಾನಪದ ಪರಿಷತ್ ತಾಲೂಕು ಘಟಕದ ಮುಖಂಡರಾದ ಬೆಳಗಲ್ ಮಲ್ಲಿಕಾರ್ಜುನ, ಶಬರಿ ಕೃಷ್ಣ, ಹುಲುಗಪ್ಪ, ಹನುಮಯ್ಯ ಮತ್ತಿತರರು ಡಾ. ಬಾನಂದೂರು ಅವರ ನೇಮಕವನ್ನು ಸ್ವಾಗತಿಸಿದ್ದಾರೆ. ಹಾಗೂ ಮುಖ್ಯಮಂತ್ರಿ ಸದಾನಂದ ಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಗೋವಿಂದ ಕಾರಜೋಳ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
Please follow and like us:
error