fbpx

ಜಿ.ಪಂ. ಅಧ್ಯಕ್ಷರಾಗಿ ಟಿ. ಜನಾರ್ಧನ ಹುಲಿಗಿ ಆಯ್ಕೆ

  ಕೊಪ್ಪಳ ಜಿಲ್ಲಾ ಪಂಚಾಯತಿಯ ನೂತನ ಅಧ್ಯಕ್ಷರಾಗಿ  ಬಂಡಿಹರ್ಲಾಪುರ ಕ್ಷೇತ್ರದ ಜಿ.ಪಂ. ಸದಸ್ಯ ಟಿ. ಜನಾರ್ಧನ ಹುಲಿಗಿ ಅವರು ಆಯ್ಕೆಯಾಗಿದ್ದಾರೆ.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ  ಅಧ್ಯಕ್ಷ ಸ್ಥಾನಕ್ಕಾಗಿ ಬುಧವಾರ ನಡೆದ ಚುನಾವಣೆಯಲ್ಲಿ, ನೂತನ ಅಧ್ಯಕ್ಷರಾಗಿ ಬಂಡಿಹರ್ಲಾಪುರ ಕ್ಷೇತ್ರದ ಟಿ. ಜನಾರ್ಧನ ಹುಲಿಗಿ ಅವರು ಆಯ್ಕೆಯಾಗಿರುವು

ದಾಗಿ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತರೂ ಆಗಿರುವ ಬಳ್ಳಾರಿ ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಘೋಷಿಸಿದರು.

  ಜಿ.ಪಂ. ಅಧ್ಯಕ್ಷರಾಗಿದ್ದ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕೊಪ್ಪಳ ಶಾಸಕರಾದ ಕಾರಣ, ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ, ಬುಧವಾರ ಜಿ.ಪಂ. ಸಭಾಂಗಣದಲ್ಲಿ ಜರುಗಿತು.   ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು.  ಬಿಜೆಪಿ ಪಕ್ಷದಿಂದ ಅಮರೇಶ್ ಕುಳಗಿ ಒಂದು ನಾಮಪತ್ರ ಹಾಗೂ ಕಾಂಗ್ರೆಸ್‌ನಿಂದ ಟಿ. ಜನಾರ್ಧನ ಹುಲಿಗಿ ಅವರು ಎರಡು ನಾಮಪತ್ರ ಸಲ್ಲಿಸಿದರು.  ಅಮರೇಶ್ ಕುಳಗಿ ಅವರಿಗೆ ಪಿಲ್ಲಿ ವೆಂಕಟರಾವ್, ಟಿ. ಜನಾರ್ಧನ ಹುಲಿಗಿ ಅವರಿಗೆ ಸೀತಾ ಗೂಳಪ್ಪ ಹಲಗೇರಿ ಮತ್ತು ವೀರೇಶ್ ಸಾಲೋಣಿ ಅವರು ಸೂಚಕರಾಗಿದ್ದರು.  
  ಮಧ್ಯಾಹ್ನ ೩ ಗಂಟೆಗೆ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡು, ನಾಮಪತ್ರ ಪರಿಶೀಲನೆ ನಡೆಸಿದ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಘೋಷಿಸಿದರು.  ನಾಮಪತ್ರ ಹಿಂಪಡೆಯಲು ೫ ನಿಮಿಷ ಕಾಲಾವಕಾಶ ಒದಗಿಸಲಾಯಿತು.  ಯಾರೂ ನಾಮಪತ್ರ ಹಿಂಪಡೆಯದಿದ್ದರಿಂದ, ಚುನಾವಣೆ ನಡೆಸಲಾಯಿತು.  ಒಟ್ಟು ೨೭ ಸದಸ್ಯ ಬಲ ಹೊಂದಿರುವ ಕೊಪ್ಪಳ ಜಿಲ್ಲಾ ಪಂಚಾಯತಿಯಲ್ಲಿ ಕೆ. ರಾಘವೇಂದ್ರ ಹಿಟ್ನಾಳ್ ಅವರ ರಾಜೀನಾಮೆಯಿಂದ ೨೬ ಸದಸ್ಯರು ಮಾತ್ರ ಚುನಾವಣೆಗೆ ಹಾಜರಾಗಿದ್ದರು. ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಟಿ. ಜನಾರ್ಧನ ಹುಲಿಗಿ ಅವರ ಪರವಾಗಿ ಒಟ್ಟು ೧೯ ಜನ ಸದಸ್ಯರು ತಮ್ಮ ಬೆಂಬಲ ವ್ಯಕ್ತಪಡಿಸಿದರು.  ಅಮರೇಶ್ ಕುಳಗಿ ಪರವಾಗಿ ೦೭ ಜನ ಸದಸ್ಯರು ಮಾತ್ರ ಬೆಂಬಲಿಸಿದರು.  ಇದರಿಂದಾಗಿ ಟಿ. ಜನಾರ್ಧನ ಹುಲಿಗಿ ಅವರು ಬಹುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾದರು.  ಟಿ. ಜನಾರ್ಧನ ಹುಲಿಗಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಸದಸ್ಯರ ವಿವರ ಇಂತಿದೆ.  ಹನುಮಕ್ಕ ಚೌಡ್ಕಿ, ಪರಸಪ್ಪ ಕತ್ತಿ, ಅನ್ನಪೂರ್ಣ ಕಂದಕೂರಪ್ಪ, ವಿನಯಕುಮಾರ್ ಮೇಲಿನಮನಿ, ನಾಗನಗೌಡ ಪಾಟೀಲ, ವನಿತಾ ಗಡಾದ, ಕಸ್ತೂರಮ್ಮ ಬಸನಗೌಡ ಪಾಟೀಲ, ಗೀತಾ ಹಲಗೇರಿ, ವಿಜಯಲಕ್ಷ್ಮಿ ರಾಮಕೃಷ್ಣ, ಚನ್ನಮ್ಮ ವಿರುಪಾಕ್ಷಗೌಡ ಹೇರೂರ, ಗಂಗಣ್ಣ ಸಮಗಂಡಿ, ವೀರೇಶ್ ಸಾಲೋಣಿ, ಜ್ಯೋತಿ ಬಿಲ್ಗಾರ್, ಅರವಿಂದಗೌಡ ಪಾಟೀಲ, ರಾಮಣ್ಣ ಸಾಲಭಾವಿ, ಅಶೋಕ್ ತೋಟದ, ಹೇಮಲತಾ ಪೋಲಿಸ್ ಪಾಟೀಲ್ ಮತ್ತು ಈರಪ್ಪ ಕುಡಗುಂಟಿ.  ಅಮರೇಶ್ ಕುಳಗಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಜಿ.ಪಂ. ಸದಸ್ಯರ ವಿವರ ಇಂತಿದೆ. ವಿದ್ಯಾಶ್ರೀ ಗಜೇಂದ್ರಗಡ, ಲಕ್ಷ್ಮೀದೇವಿ ಹಳ್ಳೂರ, ಭಾಗೀರಥಿ ಶಂಕರಗೌಡ ಪಾಟೀಲ, ಪಿಲ್ಲಿ ವೆಂಕಟರಾವ್, ಹೇಮಾವತಿ ಲಂಕೇಶ ಮತ್ತು ಉಮಾ ಶಿವಪ್ಪ ಮುತ್ತಾಳ.
  ಸದ್ಯ ಒಟ್ಟು ೨೬ ಸದಸ್ಯ ಬಲ ಹೊಂದಿರುವ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಟಿ. ಜನಾರ್ಧನ ಹುಲಿಗಿ ಅವರು ೧೯-೭ ಅಂತರದಲ್ಲಿ ಬಹುಮತ ಪಡೆದು, ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡರು.
  ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಎಲ್ಲ ಸದಸ್ಯರುಗಳು, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ ಸೇರಿದಂತೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದ್ದ ಜಿಲ್ಲಾ ಬಿಸಿಎಂ ಅಧಿಕಾರಿ ಕಲ್ಲೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ದೊರೈಸ್ವಾಮಿ, ಪಶುಸಂಗೋಪನಾ ಇಲಾಖೆ ಡಿಡಿ ಡಾ. ನಿಂಬರಗಿ, ಜಲಾನಯನ ಅಧಿಕಾರಿ ಡಾ. ಮಲ್ಲಿಕಾರ್ಜುನ, ರೇಷ್ಮೆ ಇಲಾಖೆ ಡಿಡಿ ದಾದನೂರ, ಉಪಅರಣ್ಯ ಸಂರಕ್ಷಣಾಧಿಕಾರಿ ರಾಜಶೇಖರ್ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!