ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಅತ್ಯಂತ ಸಹಕಾರಿ- ರಾಘವೇಂದ್ರ ಹಿಟ್ನಾಳ,

ಮಹಿಳೆಯರ ಸಬಲೀಕರಣಕ್ಕೆ  ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಅತ್ಯಂತ ಸಹಕಾರಿ – ರಾಘವೇಂದ್ರ ಹಿಟ್ನಾಳ, 
ಕೊಪ್ಪಳ ಅಗಷ್ಟ ೧೮, : ನಗರದ ಸಾಹಿತ್ಯ ಭವನದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾವಭಿವೃದ್ದಿ  ಮಹಿಳಾ ಸ್ವ ಸಹಾಯ ಗುಂಪುಗಳ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಬಡ ಹಾಗೂ ದೀನ ದಲಿತರ ಹೆಣ್ಣು ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಹಗಲಿರುಳು ಶ್ರಮಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾವಭಿವೃದ್ದಿ  ಯೋಜನೆಯು ಜಿಲ್ಲೆಯಲ್ಲಿ ಅತ್ಯಂತ ಫಲಕಾರಿಯಾಗಿದೆ.  ಹೆಣ್ಣುಮಕ್ಕಳಿಗೆ ತಮ್ಮ ಕುಟುಂಬದ ನಿರ್ವಹಣೆಗೆ ಮತ್ತು ಅಭಿವೃದ್ದಿಗೆ ಸ್ವ ಸಹಾಯ ಗುಂಪಿನಿಂದ ಪಡೆಯುತ್ತಿರುವ ಸಾಲವು ಇವರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಗೃಹ ಉದ್ಯೋಗ, ಮತ್ತು ಅವರ ಮಕ್ಕಳ ವಿದ್ಯಾಬ್ಯಾಸಕ್ಕೆ, ಮನೆ ಕಟ್ಟಲು, ಹೆಚ್ಚು ಸಹಕಾರಿಯಾಗುತ್ತದೆ. ಆದ್ದರಿಂದ ಯುಪಿಎ ಕೇಂದ್ರ ಸರಕಾರವು ಮುಂಬರುವ ದಿನಗಳಲ್ಲಿ ಮಹಿಳಾ ಬ್ಯಾಂಕನ್ನು ಪ್ರಾರಂಭಿಸಲು ಬೃಹತ್ ಯೋಜನೆಗಳನ್ನು ಹಾಕಿಕೊಂ

ಡು ಶೀಘ್ರವೆ ರಾಷ್ಟ್ರದಲ್ಲಿ ಮಹಿಳಾ ಬ್ಯಾಂಕಗಳು ಆರಂಭಗೊಳ್ಳಲಿವೆ ಎಂದು  ಹೇಳಿದರು.

ಈ ಸಂದರ್ಭದಲ್ಲಿ ಪ.ಪೂ. ಚೈತನ್ಯಾನಂದ ಸ್ವಾಮಿಜಿ, ಜಿಲ್ಲಾ ಪಂಚಾಯತ ಅಧ್ಯಕ್ಷ ಟಿ. ಜನಾರ್ದನ, ಪ್ರಸನ್ನ ಗಡಾದ, ಅಮ್ಜದ್ ಪಟೇಲ್, ಕೆ, ಬೂದಪ್ಪಗೌಡ, ರಾಮಣ್ಣ ಹದ್ದೀನ, ಶಿವರಾಯ ಪ್ರಭು, ರಾಮಣ್ಣ ಹಳ್ಳಿಗುಡಿ, ವಾಹಿದ್ ಸೋಂಪೂರ, ಅಜೀವ್ ಗ್ಯಾಸವಾಲಿ, ಧರಣಪ್ಪ ಮೂಲ್ಯ, ಯಮನೂರಪ್ಪ ನಾಯಕ್, ಇಬ್ರಾಹಿಂ ಅಡ್ಡೆವಾಲಿ, ಜುಬೇರ್ ಹುಸೇನಿ, ಮಹಿಬೂಬ್ ಮಚ್ಚಿ, ಸ್ವ ಸಹಾಯ ಗುಂಪಿನ ಅಧ್ಯಕ್ಷರು, ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು. 

Leave a Reply