You are here
Home > Koppal News > ಉದ್ಯೋಗ ಖಾತ್ರಿ ಯೋಜನೆ ಕುರಿತು ಐಇಸಿ ಮಾಸಾಚರಣೆ

ಉದ್ಯೋಗ ಖಾತ್ರಿ ಯೋಜನೆ ಕುರಿತು ಐಇಸಿ ಮಾಸಾಚರಣೆ

  ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅರಿವು ಕುರಿತು ಐಇಸಿ ಮಾಸಾಚರಣೆ ಡಿಸೆಂಬರ್-೨೦೧೩ ರ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮವು ತಾಲೂಕಿನ ಭಾಗ್ಯನಗರ ಗ್ರಾ.ಪಂ. ಆವರಣದಲ್ಲಿ ಜರುಗಿತು.
  ಜಿ.ಪಂ.ಉಪಕಾರ್ಯದರ್ಶಿ ರವಿ ಬಸರಿಹಳ್ಳಿ ಅವರು ಮಾತನಾಡಿ, ಆಟೋ

ರಿಕ್ಷಾ ಪ್ರತಿ ಗ್ರಾ.ಪಂ.ಯ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಹಸಿರು ಧ್ವಜಾರೋಹಣವನ್ನು ತೋರಿಸುವುದರ ಮೂಲಕ ಚಾಲನೆ ನೀಡಿದರು.

  ಕಾರ್ಯಕ್ರಮದಲ್ಲಿ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಗ್ರಾ.ಪಂ.ಅಧ್ಯಕ್ಷ ಹೊನ್ನೂರಸಾಬ ಭರಾಪುರ, ಗ್ರಾ.ಪಂ.ಉಪಾಧ್ಯಕ್ಷೆ ಹುಲಿಗೆಮ್ಮ ಹನುಮಂತಪ್ಪ ನಾಯಕ, ಸರ್ವ ಸದಸ್ಯರು, ಪಂಚಾಯತಿ ಅಭಿವೃದ್ದಿ ಅಧಿಕಾರಿ ಜಂಬಣ್ಣ ನಂದ್ಯಾಪುರ, ಎನ್‌ಆರ್‌ಇಜಿಎ ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ಎನ್‌ಆರ್‌ಇಜಿಎ ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ ಮುಂತಾದವರು ಉಪಸ್ಥಿತರಿದ್ದರು. ನಂತರ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಯೋಜನೆಯ ಕುರಿತು ಸಾರ್ವಜನಿಕರಿಗೆ ಕರ ಪತ್ರಗಳನ್ನು ವಿತರಿಸಿದರು.

Leave a Reply

Top