fbpx

ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕು ಕಿತ್ತುಕೊಳ್ಳತ್ತಿರುವ ಸರ್ಕಾರ -ಎಸ್ ಎಫ್ ಐ ಪ್ರತಿಭಟನೆ

ಆದೇಶ ಕೈಬಿಡಲು ಒತ್ತಾಯಿಸಿ ಎಸ್ ಎಫ್ ಐ ಪ್ರತಿಭಟನೆ
ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಬೇಕಿದ್ದ ರಾಜ್ಯ ಸರಕಾರ ಪೂರ್ಣಶುಲ್ಕ ಕಟ್ಟುವಂತೆ ಸುತ್ತೋಲೆ ಹೊರಡಿಸಿದೆ. ಶುಲ್ಕ ಮರುಪಾವತಿ ಸೌಲಭ್ಯ ಪಡೆಯಬೇಕಾದರೆ ವಿದ್ಯಾರ್ಥಿಗಳಗೆ ಅಂಕಗಳನ್ನು ಮಾನದಂಡ ಮಾಡಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ಸರಕಾರದ ಈ ಅಪಾಯಕಾರಿ ನಿಲುವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಕೊಪ್ಪಳ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಮೆಟ್ರಿಕ್ ನಂತರದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಭೋಧನಾಶುಲ್ಕ, ಪ್ರಯೋಗಾಲಯ ಶುಲ್ಕ, ಪರೀಕ್ಷಾ ಶುಲ್ಕ, ಕ್ರೀಡಾಶುಲ್ಕ, ಗ್ರಂಥಾಲಯ ಶುಲ್ಕಗಳು ವಿನಾಯಿತಿಗೆ ಅರ್ಹವಾಗಿರುವ ಶುಲ್ಕಗಳಾಗಿವೆ. ಈ ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗಳು ನೀಡುವ ಶುಲ್ಕಗಳಿಗೆ ವಿನಾಯಿತಿ ನೀಡಲು ಸರಕಾರ ಅಳವಡಿಸಿರುವ ನಿಯಮ ಸಂವಿಧಾನ ಬಾಹೀರವಾಗಿದೆ. ಇದು ಹಿಂದುಳಿದ ದಲಿತ ವಿದ್ಯಾರ್ಥಿಗಳನ್ನು ಕಾಲೇಜು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಹೊರಟಿದೆ. ವಿದ್ಯಾರ್ಥಿಯು ಕಾಲೇಜು ಪ್ರವೇಶ ಸಂದರ್ಭದಲ್ಲಿಯೇ ಎಲ್ಲ ಶುಲ್ಕಗಳನ್ನು  ನೀಡಬೇಕು. ನಂತರ ವಿನಾಯಿತಿ ಪಡೆಯುವುದಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಹಾಕಲು ತಿಳಿಸಲಾಗಿದೆ. ಈ ಸೌಲಭ್ಯ ಪಡೆಯಬೇಕಾದರೆ ವಿದ್ಯಾರ್ಥಿಯು ವಾರ್ಷಿಕ ಪರೀಕ್ಷೆಯಲ್ಲಿ ಪ್ರವರ್ಗ ೧ ಶೇ.೪೦, ಪ್ರವರ್ಗ ೨ಎ, ೩ಎ, ೩ಬಿ – ಶೇ.೫೦% ಅಂಕಗಳನ್ನು ಪಡೆದಿರಬೇಕು, ನವೀಕರಣ ವಿದ್ಯಾರ್ಥಿಗಳು ಶೇ.೬೦% ರಿಂದ ಶೇ.೭೦% ಅಂಕಗಳನ್ನು ಪಡೆದಿರಬೇಕು ಎಂಬ ನಿಯಮಗಳನ್ನು ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಶುಲ್ಕ ವಿನಾಯಿತಿ ಕೋರಿ ವಿದ್ಯಾರ್ಥಿಗಳು ಅರ್ಜಿ ಹಾಕಿರುತ್ತಾರೆ. ಅಂಕಗಳ ಆಧಾರದ ಮೇಲೆ ಜಾರಿ ಮಾಡಿದರೆ ಇದರಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ. ಬಡ ವಿದ್ಯಾರ್ಥಿಳಿಗೆ ಸೌಲಭ್ಯ ನೀಡುವಾಗ ಅಂಕದ ಮಾನದಂಡ ಸರಿಯಾದ ಕ್ರಮವಲ್ಲ.
ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಕಾಲೇಜುಗಳ ಅಭಿವೃದ್ಧಿ ಅಥವಾ ಸರಕಾರದ ನಿಲುವನ್ನು ಪ್ರಶ್ನಿಸಿದರೆ, ಒಂದು ವೇಳೆ ಮುಷ್ಕರ ನಡೆಸಿದರೆ, ಅಂತಹ ವಿದ್ಯಾರ್ಥಿಗಳ ಅರ್ಜಿಯನ್ನು ತಿರಸ್ಕರಿಸಲು ಹಾಗೂ ಮಂಜೂರಾಗಿದ್ದರೆ ರದ್ದುಪಡಿಸಿ ಎಂದು ಹೇಳಿರುವುದು ಸಂವಿಧಾಕ್ಕೆಸಗಿದ ಅವಮಾನವಾಗಿದೆ. ಅನ್ಯಾಯವನ್ನು ಪ್ರಶ್ನಿಸುವುದು, ಹಕ್ಕುಗಳನ್ನು ಕೇಳುವುದು ಭಾರತದ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಹಕ್ಕುಚ್ಯುತಿಯಾದಾಗ ಪ್ರತಿಭಟಿಸುವ ಹಕ್ಕನ್ನು ಸಂವಿದಾನ ನೀಡಿದೆ. ಆದರೆ ಸರಕಾರ ಸಂವಿಧಾನದ ಆಶಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.  
ಕಾಲೇಜಿನಲ್ಲಿರುವ ವಿದ್ಯಾರ್ಥಿಗಳು ಪ್ರತಿಭಟಿಸಬಾರದು. ಹಾಸ್ಟೇಲ್ ವಿದ್ಯಾರ್ಥಿಗಳು ಪ್ರತಿಭಟಿಸಬಾರದು. ಪ್ರತಿಭಟಿಸಿದರೆ ಅವರನ್ನು ಸೌಲಭ್ಯವಂಚಿತರನ್ನಾಗಿ ಅಥವಾ ಹಾಸ್ಟೇಲಿನಿಂದ ತೆಗೆದು ಹಾಕುವುದಾಗಿ ಹೇಳಿರುವುದು ಸರಕಾರದ ಅನಾಗರೀಕತೆಯನ್ನು ಪ್ರದರ್ಶಿಸುತ್ತದೆ. ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುತ್ತಿರುವ ಕಾಂಗ್ರೇಸ್ ಬಿಜೆಪಿ ಪಕ್ಷಗಳು ಸರಕಾರ ರಚನೆಯಾದಾಗಿನಿಂದ ವಿದ್ಯಾರ್ಥಿಗಳ ಹಕ್ಕುಗಳಿಗೆ ಚ್ಯುತಿ ತರುವ ಕೆಲಸ ಮಾಡುತ್ತಿವೆ. ಕಾಲೇಜು, ಹಾಸ್ಟೇಲುಗಳಲ್ಲಿ ಸಂಘಟನೆ ಕಟ್ಟಿಕೊಳ್ಳುವುದು, ನಮ್ಮ ಹಕ್ಕುಗಳನ್ನು ಕೇಳುವುದು ನಮ್ಮ ಸಂವಿಧಾನ ನಮಗೆ ನೀಡಿರುವ ಸೌಲಭ್ಯ. ಅವುಗಳನ್ನು ಗೌರವಿಸಿ ಎತ್ತಿಹಿಡಿಯಬೇಕಾಗಿರುವುದು ಸರಕಾರದ ಕರ್ತವ್ಯ. ಆದರೆ ಅದರ ಬದಲಾಗಿ ಎಸ್ಮಾ ಕಾಯಿದೆ ಜಾರಿ ಮಾಡುವ ಮೂಲಕ ವಿದ್ಯಾರ್ಥಿಗಳ ಹಾಗೂ ನೌಕರರ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿರುವುದು ಅರಾಜಕತೆ ಸೃಷ್ಠಿಗೆ ಕಾರಣವಾಗಲಿದೆ.
ಕೂಡಲೇ ರಾಜ್ಯ ಸರಕಾರ ಇಂತಹ ಅಪಾಯಕಾರಿ ಯೋಜನೆಗಳನ್ನು ಕೈಬಿಡಲು ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಾಪಾಡಲು ಮುಂದಾಗಬೇಕು. ವಿದ್ಯಾರ್ಥಿಗಳ ಎಲ್ಲಾ ಹಂತದ ಶುಲ್ಕಳಿಗೆ ವಿನಾಯ್ತಿ ನೀಡಿ ಮೂಲಸೌಲಭ್ಯಗಳನ್ನು ನೀಡುವಂತೆ ಎಸ್ ಎಫ್ ಐ ಕೊಪ್ಪಳ ಜಿಲ್ಲಾ ಸಮಿತಿಯು ಒತ್ತಾಯಿಸುತ್ತದೆ.
ಜಿಲ್ಲಾ ಉಪಾಧ್ಯಕ್ಷರುಗಳಾದ ದುರಗೇಶ್ ಡಗ್ಗಿ, ಹನುಮಂತ ಭಜಂತ್ರಿ, ತಾಲೂಕ ಮುಖಂಡರುಗಳಾದ  ಉಮೇಶ ರಾಠೋಡ್, ಮಾಬುಸಾಬ್, ಮೇಘಾ, ಗೌರಮ್ಮ ಸೇರಿದಂತೆ ಇನ್ನಿತರರು ಹೊರಾಟದಲ್ಲಿ ಪಾಲ್ಗೋಡ್ಡಿದ್ದಾರೆ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಪ್ರಾರಂಭವಾದ ಹೊರಾಟ ಭೀಮರಾಯ ವೃತ್ತದಲ್ಲಿ ರಾಜ್ಯ ಸರಕಾರದ ಪ್ರತಿಕೃತ ದಹನ ಮಾಡಿ ನಂತರ ತಹಶಿಲ್ದಾರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಪತ್ರಸಲ್ಲಿಸಲಾಯಿತು. 
Please follow and like us:
error

Leave a Reply

error: Content is protected !!