ಉಚಿತ ಆರೋಗ್ಯ ತಪಾಸಣಾ ಶಿಬಿರ.

ಕೊಪ್ಪಳದ ಹುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ ಕೊಪ್ಪಳ ಹಾಗೂ ಸಾಗರ ಹಾಸ್ಪಿಟಲ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ:೨೧-೦೨-೨೦೧೬, ರವಿವಾರ ಬೆಳಿಗ್ಗೆ ೧೦:೦೦ಗಂಟೆಯಿಂದ ಸಾಯಂಕಾಲ ೫:೦೦ಗಂಟೆಯವರೆಗೆ ಕಲಮ್ ಪಬ್ಲಿಕ್ ಸ್ಕೂಲ್ ಅಮೀನಪುರ, ಕೊಪ್ಪಳದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಲಿದೆ. ಈ ಶಿಬಿರದಲ್ಲಿ ಬೆಂಗಳೂರಿನ ತಜ್ಙವೈದ್ಯರುಗಳಿಂದ ಹೃದಯ ರೋಗ, ಮೂತ್ರ ಪಿಂಡ ರೋಗ, ಹಾಗೂ ನರ ರೋಗಕ್ಕೆ ಸಂಬಂಧಿಸಿದ ಕಾಯಿಲೆಗಳ ಉಚಿತ ಆರೋಗ್ಯ ತಪಾಸಣೆ ಮತ್ತು ಬಿ.ಪಿ, ಇ.ಸಿ.ಜಿ, ಎಕೋ, ಮತ್ತು ಸ್ಕ್ಯಾನಿಂಗ್ ಕೂಡ ಮಾಡಲಾಗುವುದು.
Please follow and like us:
error