ಪರಿಸರ ಸ್ನೇಹಿ ’ಸಾವಯವ ಕೃಷಿ’ ನಮ್ಮ ಆದ್ಯತೆಯಾಗಲಿ

ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎ.ಎಸ್ ಘಟಕದಿಂದ ವಾರ್ಷಿಕ ವಿಶೇಷ ಶಿಬಿರವನ್ನು ಬಸಾಪಟ್ಟಣದಲ್ಲಿ ದಿನಾಂಕ ೧೫.೧೦.೧೪ ರಿಂದ ಒಂದು ವಾರಗಳ ಕಾಲ ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಲ್ಲಿ ನಿನ್ನೆ ಸಂಜೆ ದಿನಾಂಕ ೧೮.೧೦.೧೪ ರಂದು ರೋಟರಿ ಸಂಸ್ಥೆ ಗಂಗಾವತಿ ಯವರ ಸಹಕಾರದಲ್ಲಿ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. ನಗರದ ಹಲಾರು ವೈದ್ಯರು ಭಾಗವಹಿಸಿದ್ದರು. ಆರೋಗ್ಯ ಮತ್ತು ಅದರ ಮಹತ್ವ ಕುರಿತು ತಾಲೂಕಾ ವೈದ್ಯಾಧಿಕಾರಿ ಡಾ|| ರಾಮಕೃಷ್ಣ ಮಾತಾಡಿದರು. ಹಾಗೂ ಉಚಿತ ಔಷಧ ವಿತರಣೆಯೂ ಕೂಡಾ ನಡೆಯಿತು. ಬಸಾಪಟ್ಟಣದ ನುರಾರು ಜನರು ಅದರಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಕೊಂಡರು. 
ನಂತರ ಚಿಂತನಾ ಕಾರ್ಯಕ್ರಮ ನಡೆಯಿತು. ಸಾವಯವ ಕೃಷಿ ಕುರಿತು ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕರಾದ ಬ.ಜಿ.ಮಸ್ತಾನರೆಡ್ಡಿ ಯವರು ಮಾತನಾಡಿ ದಿನನಿತ್ಯದ ಜೀವನದಲ್ಲಿ ಕೃಷಿಯನ್ನು ಅವಲಂಬಿಸಿರುವ ನಾವುಗಳು ಆ ವಿಷಯವನ್ನು ಕುರಿತು ಮಾತಾಡುವುದೆಂದರೆ ಗಂಟೆಗಟ್ಟಲೆ ಮಾತಾಡುತ್ತೇವೆ. ಉದ್ಯೋಗವಾಗಿ ಅದನ್ನು ಆಯ್ಕೆ ಮಾಡಿಕೊಳ್ಳತ್ತಿಲ್ಲ ಯಾಕೆ?. ಕೃಷಿಯಲ್ಲಿ ಎಲ್ಲದಕ್ಕು ಪರಿಹಾರವಿದೆ. ಸಾವಯವ ಕೃಷಿ ಇಂದಿನ ಆದ್ಯತೆಯಾಗಬೇಕು. ಜೀವ ವಿರೋಧಿ ಕೃಷಿಯ ಕಡೆ ಗಮನ ಜಾಸ್ತಿ ಹೋಗಿ ಬಹುರಾಷ್ಟ್ರೀಯ ಕಂಪನಿಗಳ ಜಾಲದಲ್ಲಿ ಸಿಲುಕಿದ್ದೇವೆ. ಅದರಿಂದ ಹೊರಬರಲು ನೈಸರ್ಗಿಕವಾದ ಮತ್ತು ಪರಿಸರ ಸ್ನೇಹಿಯಾದ ಸಾವಯವವನ್ನು ಹೆಚ್ಚು ಅವಲಂಬಿಸಿಕೊಳ್ಳಬೇಕಿದೆ ಎಂದು ಹೇಳುತ್ತಾ ಕೃಷಿಯಲ್ಲಿನ ರೋಗಗಳು ಸಾವಯವ ಮತ್ತು ಅದರ ಉಪಯೋಗಗಳನ್ನು ಕುರಿತು ಮಾತಾಡಿದರು ಹಾಗು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜನಸಂಗ್ರಾಮ ಪರಿಷತ್‌ನ ಧನರಾಜ ರವರು ಕೃಷಿ ಬಿಕ್ಕಟ್ಟುಗಳನ್ನು ಕುರಿತು ಮಾತಾಡಿದರು. ವೇದಿಕೆಯ ಮೇಲೆ ಉಪನ್ಯಾಸಕರಾದ ಕುಮಾರಸ್ವಾಮಿ, ಕಾ.ಅ.ಸ ಸದಸ್ಯರಾದ ಮಹ್ಮದ್ ರಫಿ ಮತ್ತು ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ಸೋಮಶೇಖರಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನ್ಯಾಸಕರಾದ ಈಶ್ವರಶೆಟ್ಟಿ ವಹಿಸಿಕೊಂಡಿದ್ದರು. ಶೀಬಿರಾರ್ಥಿ ವೀರೇಶ ನಿರೂಪಣೆ ಮಾಡಿದರು.
Please follow and like us:
error