ವರ್ಗಾವಣೆ ನೀತಿ ಸಡಿಲಿಕೆ ಹಾಗೂ ಸಕಾಲಕ್ಕೆ ವೇತನ ಪಾವತಿಗೆ ಒತ್ತಾಯಿಸಿ ಶಿಕ್ಷಣ ಸಚಿವರಿಗೆ ಮನವಿ

ಕೊಪ್ಪಳ: ವರ್ಗಾವಣೆಯ ನೀತಿನ ಸಡಿಲಿಕೆ ಹಾಗೂ ಸಕಾಲಕ್ಕೆ ವೇತನ ಪಾವತಿಗೆ ಒತ್ತಾಯಿಸಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರರವರಿಗೆ ಗುರುವಾರ ಬೆಂಗಳೂರಿನ ಅವರ ನಿವಾಸದಲ್ಲಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
  ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಶಿಕ್ಷಕರ ವರ್ಗಾವಣೆಯಲ್ಲಿ ಅನುಸರಿಸುವ ಶೇಕಡಾವಾರನ್ನು ಹೆಚ್ಚಿಸಬೇಕು,ತಾಲೂಕನ್ನು ಒಂದು ಘಟಕವನ್ನಾಗಿ ಪರಿಗಣಿಸಿರುವುದನ್ನು ರದ್ದು ಪಡಿಸಬೇಕು.ಜಿಲ್ಲೆಯನ್ನು ಘಟಕವಾಗಿ ಪರಿಗಣಿಸಬೇಕು,ಪತಿ-ಪತ್ನಿ ಪ್ರಕರಣದ ಶೇಕಡಾ ಪ್ರಮಾಣವನ್ನು ಹೆಚ್ಚಿಸಬೇಕು,ಅಂಗವಿಕಲ ಶಿಕ್ಷಕರಿಗೆ ಮೂರು ವರ್ಷ ಒಂದು ಕಡೆಯಲ್ಲಿ ಕಾರ್ಯನಿರ್ವಹಿಸಬೇಕೆಂಬ ನಿಯಮದಿಂದ ಅಂಗವಿಕಲ ಶಿಕ್ಷಕರಿಗೆ ವಿನಾಯತಿ ನೀಡಬೇಕು ಎಂಬುದರ ಕುರಿತು ಹಲವು ಭಾರಿ ಮನವಿ ಸಲ್ಲಸಿದರೂ ಕೂಡಾ ಯಾವುದೇ ರೀತಿಯ ಬದಲಾವಣೆಯಾಗಿಲ್ಲ,ವರ್ಗಾವಣೆಯ ಸಮಯದಲ್ಲಿ ಪದೇ ಪದೇ ಅಂಗವಿಕಲತೆಯ ಪ್ರಮಾಣ ಪತ್ರವನ್ನು ತರಲು ಸೂಚಿಸುವುದನ್ನು ರದ್ದುಪಡಿಸಬೇಕು,ಅಂಗವಿಕಲ ಶಿಕ್ಷಕರಿಗೆ ವಿನಾಕಾರಣ ನೀಡಿ ಸೌಲಭ್ಯವನ್ನು ನೀಡದಿರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರುಗಳಿಗೆ ಮೂರು ತಿಂಗಳಿಗೊಮ್ಮೆ ವೇತನ ಪಾವತಿಯಾಗುತ್ತಿದ್ದು ಇದರಿಂದ ಶಿಕ್ಷಕರು ಜೀವನ ನಿರ್ವಹಣೆಯು ಕಷ್ಟಕರವಾಗಿದೆ ಎಂದು ವಿವರಿಸಿದರು.
  ಈ ಸಮಯದಲ್ಲಿ ಸಂಘದ ರಾಜ್ಯ ಸಂಚಾಲಕರಾದ ಭರಮಪ್ಪ ಕಟ್ಟಿಮನಿ ಹಾಜರಿದ್ದರು.
ಇದ್ದಕ್ಕೆ ಸ್ಪಂದಿಸಿದ ಶಿಕ್ಷಣ ಸಚಿವರು ಶಿಕ್ಷಕರ ವರ್ಗಾವಣೆಯಲ್ಲಿ ಅನುಸರಿಸುವ ಶೇಕಡಾ ಪ್ರಮಾಣವನ್ನು ಶೇಕಡಾ ೮ ರಷ್ಟು ಹೆಚ್ಚಿಸಲಾಗುವುದು,ಪದೇ ಪದೇ ಅಂಗವಿಕಲತೆಯ ಪ್ರಮಾಣ ಪತ್ರ ಕೇಳುವುದನ್ನು ಈ ಕೂಡಲೆ ರದ್ದುಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ಮಾಡುತ್ತೆನೆ,೩ ವರ್ಷಗಳ ಸೇವೆಯಲ್ಲಿ ಅಂಗವಿಕಲರಿಗೆ ವಿನಾಯತಿಯ ವಿಚಾರವನ್ನು ಅಧಿಕಾರಿಗಳ ಚರ್ಚಿಸಿ ನಂತರ ಜಾರಿಗೆ ತರಲಾಗುವುದು,ಕೊಪ್ಪಳ ಜಿಲ್ಲೆಯ ಶಿಕ್ಷಕರಿಗೆ ಮೂರು ತಿಂಗಳಿಗೊಮ್ಮೆ ವೇತನ ಪಾವತಿಯಾಗುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿರುವುದಿಲ್ಲ,ಈಗ ಬಂದಿದ್ದು ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ  ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Leave a Reply