ಮೃತಪಟ್ಟ ಪೌರಕಾರ್ಮಿಕರಿಗೆ ೨೫ ಲಕ್ಷ ಪರಿಹಾರ ನೀಡಲು ಆಗ್ರಹ

ಹೊಸಪೇಟೆ: ಹುಬ್ಬಳ್ಳಿಯಲ್ಲಿ ಮ್ಯಾನ್ ಹೋಲ್‌ನಲ್ಲಿ ಮೃತ ಪಟ್ಟ ಪೌರಕಾರ್ಮಿಕರಿಗೆ ೨೫ ಲಕ್ಷ ಪರಿಹಾರ ನೀಡಬೇಕು ಹಾಗೂ ಈಗಲ್ ಕನಸ್ಟ್ರಕ್ಞನ್ ಖಾಸಗಿ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದೊಮೆ ದಾಖಲೆ ಮಾಡಬೇಕೆಂದು ಸಮಾನತೆ ಯೂನಿಯನ್-ಕರ್ನಾಟಕ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಆಗ್ರಹಿಸಿವೆ.
 ಈ ಹಿಂದೆ ಮ್ಯಾನ್ ಹೋಲ್ ನಲ್ಲಿ ಪೌರಕಾರ್ಮಿಕರು ಮೃತ ಪಟ್ಟಿದ್ದರು. ಈ ಕಂಪನಿಯೇ ಆವಾಗಲೂ ಕಾರ್ಯನಿರ್ವಹಿಸುತ್ತಿದ್ದು, ಮೃತಪಟ್ಟವರಿಗೆ ೨೫ ಲಕ್ಷ ರೂ.ಗಳು ಪರಿಹಾರ, ಸರ್ಕಾರಿ ಹುದ್ದೆಗಳನ್ನು ಕುಟುಂಬಕ್ಕೆ ನೀಡಬೇಕು. ತಕ್ಷuವೇ ಆ ಕಂಪನಿಯನ್ನು ಕರ್ನಾಟಕದಲ್ಲಿ ಬ್ಲಾಕ್‌ಲಿಸ್ಟ್‌ಗೆ ಸೇರಿಸಬೇಕು. ಸರ್ಕಾರವು ಮಲಹೊರುವ ಪದ್ಧತಿ ಇಲ್ಲವೇ ಎಂದು ಹೇಳಿರುತ್ತಾರೆ ಆದರೇ ಹುಬ್ಬಳ್ಳಿಯಲ್ಲಿ ಇದು ೩ ನೇ ಘಟನೆ ಆಗಿದೆ. ಆದ ಕಾರಣ ಸರ್ಕಾರವು ಕರ್ನಾಟಕದಲ್ಲಿ ಮಲಹೊರುವವರ ಮರು ಸಮೀಕ್ಷೆಯನ್ನು ನಡೆಸಬೇಕು. ಇಂತಹ ಘಟನೆ ನಡೆದಿದಾಗ ಅಲ್ಲಿನ ಜಿಲ್ಲಾಧಿಕಾರಿ ಹಾಗೂ ಮಹಾ ನಗರ ಪಾಲಿಕೆ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು  ಸಮಾನತೆ ಯೂನಿಯನ್-ಕರ್ನಾಟಕ ರಾಜ್ಯ ಸಂಚಾಲಕ ರಾಮಚಂದ್ರ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಅಧ್ಯಕ್ಷ ಕೆ.ಸುನೀಲ್, ಸಂಚಾಲಕ ಎಮ್.ಹನುಮಂತರಾಯ, ಸಮಾನತೆ ಯೂನಿಯನ್ ಬಳ್ಳಾರಿ ಅಧ್ಯಕ್ಷರಾದ ರತ್ನಮ್ಮ, ಹೊಸಪೇಟೆ ಘಟಕದ ಆಂಟೋನಿ, ಕೂಡ್ಲಿಗಿಯ ಹನುಮೇಶ್, ಹಡಗಲಿಯ ಭರಮಪ್ಪ, ತೆಕ್ಕಳಕೋಟೆಯ ದೇವಣ್ಣ, ಕಮಲಾಪುರದ ಕುಳ್ಳಾಯಪ್ಪ, ಕಂಪ್ಲಿ ಹೆಚ್.ರವಿ, ಸಿರುಗುಪ್ಪದ ನಾಗಮ್ಮ ಒತ್ತಾಯಿಸಿದ್ದಾರೆ. 

Leave a Reply