ಬಾಲಮಂದಿರ ಮಕ್ಕಳಿಗೆ ನೋಟ್ ಬುಕ್ ಪೆನ್ ವಿತರಣೆ.

ಕೊಪ್ಪಳ : ಸಮೀಪದ ಭಾಗ್ಯನಗರದ ಬಾಲಕೀಯರ ಬಾಲಮಂದಿರದ ಮಕ್ಕಳಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವರಾಮ್ ಮ್ಯಾಗಳಮನಿ ರವಿವಾರದಂದು ನೋಟ್ ಬುಕ್ ಹಾಗೂ ಪೆನ್ ವಿತರಣೆ ಮಾಡಿದರು.ಗ್ರಾ.ಪಂ ಮಾಜಿ ಸದಸ್ಯ ಶಿವರಾಮ್ ಮ್ಯಾಗಳಮನಿ ಮಾತನಾಡಿ ಮಕ್ಕಳು ಕಷ್ಟ ಪಟ್ಟು ವಿದ್ಯಾಭ್ಯಾಸ ಮಾಡಿ ಉತ್ತಮ ಜೀವನ ರೂಪಿಸಿಕೊಂಡು ಕಲಿಸಿದ ಗುರುಗಳಿಗೆ ಹಿರಿಯರಿಗೆ ಕೀರ್ತಿ ತರುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಸದಸ್ಯ ಚಂದ್ರು ಉಂಕಿ, ಮಂಜುನಾಥ ಮ್ಯಾಗಳಮನಿ,ಶ್ರೀಮತಿ ಕಾಳಮ್ಮ ಮ್ಯಾಗಳಮನಿ ಬಾಲಮಂದಿರದ ಸಿಬ್ದಂದಿಗಳು ಉಪಸ್ಥಿತರಿದ್ದರು.

Leave a Reply