You are here
Home > Koppal News > ಸಚಿವರಿಂದ ಸಮುದಾಯ ಭವನಕ್ಕೆ ಶಂಕುಸ್ಥಾಪನೆ

ಸಚಿವರಿಂದ ಸಮುದಾಯ ಭವನಕ್ಕೆ ಶಂಕುಸ್ಥಾಪನೆ

ಕೊಪ್ಪಳ,ಜು.೧೦: ನಗರದ ವಾರಕಾರ ಓಣಿಯ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಬುಧವಾರದಂದು ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು  ಸಿರಸಪ್ಪಯ್ಯ ಮಠದ ಪೂಜ್ಯರಾದ ಸಿರಸಪ್ಪಯ್ಯ ಮಹಾಸ್ವಾಮಿಗಳು ಹಾಗೂ ಮುದ್ದಾಬಳ್ಳಿಯ ಗುರುನಾಥ ಮಹಾಸ್ವಾಮಿಗಳು ವಹಿಸಿದ್ದರು. ಈ ಸಂದರ್ಭದಲ್ಲಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಟಿ.ಜನಾರ್ಧನ ಹುಲಗಿ, ಜಿ.ಪಂ.ಸದಸ್ಯರಾದ ನಾಗನಗೌಡ ಮಾಲಿಪಾಟೀಲ್, ಈರಪ್ಪ ಕುಡಗುಂಟಿ, ಗಂಗಣ್ಣ ಸಮಗಂಡಿ, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಬಾಳಪ್ಪ ಬಾರಕೇರ, ಮುತ್ತುರಾಜ ಕುಷ್ಟಗಿ, ಜಿ.ಪಂ.ಮಾಜಿ ಸದಸ್ಯ ಪ್ರಸನ್ನ ಗಡಾದ್, ನಗರಸಭೆ ಮಾಜಿ ಸದಸ್ಯ ಎಂ.ಪಾಷಾ ಕಾಟನ್, ವಿಶ್ವಕರ್ಮ ಸಮಾಜದ ನಗರ ಘಟಕದ ಅಧ್ಯಕ್ಷ ಮಂಜುನಾಥ ವಾಸಪ್ಪ ಬನ್ನಿಕೊಪ್ಪ ಸೇರಿದಂತೆ ನಗರದ ಘಟಕದ ಸರ್ವ ಸದಸ್ಯರು, ವಿಶ್ವಕರ್ಮ ಸಮಾಜದ ಮುಖಂಡರು ಭಾಗವಹಿಸಿದ್ದರು.
ಸನ್ಮಾನ : ಈ ಕಾರ್ಯಕ್ರಮದಲ್ಲಿ ರಾಜ್ಯ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ನೂತನ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರಿಗೆ ಸಮಾಜದ ಪರವಾಗಿ ವಿಶ್ವಕರ್ಮ ಸಮಾಜದ ನಗರ ಘಟಕದ ಅಧ್ಯಕ್ಷ ಮಂಜುನಾಥ ವಾಸಪ್ಪ ಬನ್ನಿಕೊಪ್ಪ ಸನ್ಮಾನಿಸಿದರು.

Leave a Reply

Top