ಕರ್ಕಿಹಳ್ಳಿ ಗ್ರಾಮದಲ್ಲಿ ವಾಲಿಬಾಲ್.

ಶ್ರೀ ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘ (ರಿ) ಇವರ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಯುವ ಸಪ್ತಾಹ ಕಾರ್ಯಕ್ರಮ ಅಂಗವಾಗಿ ವಾಲಿಬಾಲ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ಪ್ರಥಮ ಬಹುಮಾನ ಹೊಸಬಂಡಿ ಹರಲಾಪೂರದ ಪ್ರಾಗನ್ ತಂಡ ಪಡೆಯಿತು, ದ್ವಿತೀಯ ಬಹುಮಾನ ಕರ್ಕಿಹಳ್ಳಿಯ ಸ್ವಾಮಿ ವಿವೇಕಾನಂದ ತಂಡ ಪಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕ್ರೀಡಾ ಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು.  ಕಾರ್ಯಕ್ರಮದಲ್ಲಿ ಹಿರೇಬಗನಾಳ ಗ್ರಾ.ಪಂ. ಅಧ್ಯಕ್ಷ ಹೇಮಣ್ಣ ದೇವರಮನಿ, ಸದಸ್ಯರಾದ ಜಗದೀಶ ಕೆರಳ್ಳಿ, ರಾಜಾಸಾಬ ಗೊಂದಿಹೊಸಳ್ಳಿ, ಶ್ರೀಮತಿ ಕಮಲಾಕ್ಷಿ ಪೊಲೀಸ್ ಪಾಟೀಲ, ಇಮಾಂಬಿ ಚಿಕ್ಕಮಸೂತಿ, ಮಾಜಿ ಸದಸ್ಯರಾದ ಗವಿಸಿದ್ದಪ್ಪ ಕುಂಬಾರ, ಎಸ್.ಡಿ.ಎಮ್.ಸಿ ಅಧ್ಯಕ್ಷ ದೇವಪ್ಪ ಆಗೋಲಿ, ಮಂಜುನಾಥ ಕುಂಬಾರ, ಪರುಶುರಾಮ್ ಕುಂಬಾರ, ಕಲ್ಲಯ್ಯ  ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರು, ಊರಿನ ಯುವ ಮಿತ್ರರು ಉಪಸ್ಥಿತರಿದ್ದರು.

Please follow and like us:
error