ಚಂಪಾಲಾಲ್ ಮೆಹತಾ ಸಂಸ್ಮರಣ ಗ್ರಂಥಕ್ಕೆ ಲೇಖನ ಆಹ್ವಾನ

ಕೊಪ್ಪಳ : ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಪ್ಪಳದ ಹಿರಿಯ ಉದ್ಯಮಿ, ಜಿಲ್ಲಾ ಲಯನ್ಸ್ ಕ್ಲಬ್ ಮಾಜಿ ಗವರ್ನರ್, ಲಯನ್ಸ್ ಸಂಸ್ಥೆಯ ಕಣ್ಣಿನ ಆಸ್ಪತ್ರೆ, ಲಯನ್ಸ್ ವಿವೇಕಾನಂದ ಶಾಲೆಯ ಸ್ಥಾಪನೆ, ಜೈನ ಸಮಾಜದ ಜಿಲ್ಲಾ ಕಾರ್ಯದರ್ಶಿ, ಗವಿಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಜೈನ ಮೂರ್ತಿ ಪೂಜಕ ಸಂಘದ ಅಧ್ಯಕ್ಷ ಹಾಗೂ ಲಯನ್ಸ್ ಕಣ್ಣಿನ ಆಸ್ಪತ್ರೆಯ ಅಧ್ಯಕ್ಷರಾಗಿ ಸೇವೆಸಲ್ಲಿಸಿ ಇತ್ತೀಚಿಗೆ ನಿಧನರಾದ ಚಂಪಾಲಾಲ್ ಮೆಹತಾ ಅವರನ್ನು ಕುರಿತು ಸಂಸ್ಮರಣ ಗ್ರಂಥವನ್ನು ಹೊರತರಲು ನಿರ್ಧರಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
ಚಂಪಾಲಾಲ್ ಮೆಹತಾ ಅವರ ಒಡನಾಡಿಗಳು, ಸಾಹಿತಿಗಳು ಅವರನ್ನು ಕುರಿತು ಲೇಖನ, ಕವನ, ಅವರ ಅಪರೂಪದ ಭಾವಚಿತ್ರಗಳನ್ನು ಮಾರ್ಚ ೧೦ ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. 
ವಿಳಾಸ : ಹನುಮಂತಪ್ಪ ಅಂಡಗಿ ಚಿಲವಾಡಗಿ, ಅಧ್ಯಕ್ಷರು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಅಂಚೆ ಪೆಟ್ಟಿಗೆ ಸಂಖ್ಯೆ -೩೦ ಕೊಪ್ಪಳ – ೫೮೩೨೩೧ ಸನಿಹವಾಣಿ : ೯೦೦೮೯೪೪೨೯೦ 
Please follow and like us:
error