ಮೇಲ್ದರ್ಜೆಗೇರಿಸಲಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ : ವೇಳಾ ಪಟ್ಟಿ ಪ್ರಕಟ

 ಗ್ರಾಮ ಪಂಚಾಯತಿಗಳಿಂದ ಪುರಸಭೆ, ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲಾಗಿರುವ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ಚುನಾವಣೆ ನಡೆಸುವ ಪ್ರದೇಶ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ.
  ಕೊಪ್ಪಳ ಜಿಲ್ಲೆಯ ಕಾರಟಗಿ ಪುರಸಭೆ- ವಾರ್ಡ್‌ಗಳ ಸಂಖ್ಯೆ- ೨೩, ತಾವರಗೇರಾ ಪಟ್ಟಣ ಪಂಚಾಯತಿ- ವಾರ್ಡ್‌ಗಳ ಸಂಖ್ಯೆ ೧೮, ಕುಕನೂರು ಪಟ್ಟಣ ಪಂಚಾಯತಿ- ವಾರ್ಡ್‌ಗಳ ಸಂಖ್ಯೆ- ೧೯ ಹಾಗೂ ಕನಕಗಿರಿ ಪಟ್ಟಣ ಪಂಚಾಯತಿಯಲ್ಲಿ ೧೭ ವಾರ್ಡ್‌ಗಳು ಇದ್ದು, ಇದೀಗ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ.  ವೇಳಾಪಟ್ಟಿಯನ್ವಯ ಏ. ೦೫ ರಂದು ಚುನಾವಣಾ ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳು ಹೊರಡಿಸುವರು.  ನಾಮಪತ್ರ ಸಲ್ಲಿಸಲು ಏ. ೧೨ ಕೊನೆಯ ದಿನಾಂಕವಾಗಿರುತ್ತದೆ.  ಏ. ೧೩ ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.  ಉಮೇದುವಾರಿಕೆ ಹಿಂಪಡೆಯಲು ಏ. ೧೫ ಕೊನೆಯ ದಿನಾಂಕವಾಗಿದ್ದು, ಮತದಾನದ ಅವಶ್ಯವಿದ್ದರೆ ಏ. ೨೪ ರಂದು ಬೆಳಿಗ್ಗೆ ೦೭ ಗಂಟೆಯಿಂದ ಸಂಜೆ ೦೫ ಗಂಟೆಯವರೆಗೆ ಮತದಾನ ನಡೆಯಲಿದೆ.  ಮತಗಳ ಎಣಿಕೆ ಏ. ೨೭ ರಂದು ಆಯಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯಲಿದೆ.  ಚುನಾವಣೆ ಪ್ರಕ್ರಿಯೆ ಏ. ೨೭ ರ ಒಳಗಾಗಿ ಪೂರ್ಣಗೊಳ್ಳಲಿದೆ.
  ಚುನಾವಣೆ ನೀತಿ ಸಂಹಿತೆಯು ಮಾ. ೩೧ ರಿಂದಲೇ ಜಾರಿಗೆ ಬರಲಿದ್ದು, ಏ. ೨೭ ರವರೆಗೆ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಕವಿತಾರಾಣಿ ಆರ್. ಅವರು ತಿಳಿಸಿದ್ದಾರೆ.
Please follow and like us:

Related posts

Leave a Comment