ಕನ್ನಡ ಕಥಾ ಸಂಕಲನ ಕೃತಿಗೆ ದತ್ತಿನಿಧಿ ಬಹುಮಾನ

  ಕೊಡಗಿನ ಎಸ್.ಎನ್. ವಿಜಯಶಂಕರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ /ಭಾರತೀಸುತ ಸ್ಮಾರಕ ದತ್ತಿ ಸ್ಥಾಪಿಸಿದ್ದು, ಕನ್ನಡ ಕಥಾ ಸಂಕಲನ ಕೃತಿಗೆ ರೂ. ೫೦೦೦ ಗಳ ನಗದು ಮತ್ತು ಪ್ರಶಸ್ತಿ ಪತ್ರ ನೀಡುವ ಸಲುವಾಗಿ ಕೃತಿಗಳನ್ನು ಆಹ್ವಾನಿಸಲಾಗಿದೆ.
  ೨೦೦೯, ೨೦೧೦ ಮತ್ತು ೨೦೧೧ ರಲ್ಲಿ ಪ್ರಕಟವಾದ ಕಾದಂಬರಿಯನ್ನು ಈ ಸ್ಪರ್ಧೆಗೆ ಕಳುಹಿಸಬಹುದು.  ಪ್ರತಿ ಪ್ರವೇಶಕ್ಕೆ ಮೂರು ಪುಸ್ತಕಗಳನ್ನು ಕಳುಹಿಸಬೇಕು.  ಈ ರೀತಿ ಕಳುಹಿಸಲಾದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ.  ಸ್ಪರ್ಧೆಗೆ ಪುಸ್ತಕಗಳನ್ನು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-೧೮ ಇವರಿಗೆ ಜುಲೈ ೦೫ ರ ಒಳಗಾಗಿ ಕಳುಹಿಸಿಕೊಡಬೇಕು.  ಹೆಚ್ಚಿನ ವಿವರಗಳಿಗೆ ದೂರವಾಣಿ ಸಂ: ೦೮೦-೨೬೬೨೩೫೮೪ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಕಸಾಪ  ತಿಳಿಸಿದೆ.
Please follow and like us:
error