You are here
Home > Koppal News > ನಾನು ಅನುಸರಿಸಿದ್ದನ್ನು ನೀವು ಅನುಸರಿಸಿ – ಲಾಲ್ ಹುಸೇನ್ ಕಂದಗಲ್

ನಾನು ಅನುಸರಿಸಿದ್ದನ್ನು ನೀವು ಅನುಸರಿಸಿ – ಲಾಲ್ ಹುಸೇನ್ ಕಂದಗಲ್

ಪ್ರವಾದಿ ಮಹ್ಮದರು ಜೀವನದಲ್ಲಿ ನಾನು ಅನುಸರಿಸಿದ್ದನ್ನು ನೀವು ಅನುಸರಿಸಿ ಎಂದು ಜನರಿಗೆ ತಿಳಿಸಿದ್ದಾರೆ ಎಂಬ ಮಾತನ್ನು ಲಾಲ್ ಹುಸೇನ್ ಸಾಬ್ ಕಂದಗಲ್ ಕುರ್ ಆನ್ ಅಧ್ಯಾಯನ ಕಾರ್ಯಕ್ರಮದಲ್ಲಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ದಿನಾಂಕ ೨೪-೦೧-೨೦೧೫ ರಂದು ಸಂಜೆ ಕರ್‌ಆನ್ ನ ಸಂದೇಶ ಮಾನವನಿಗಾಗಿ ಎಂಬ ವಿಷಯದಡಿ ನಡೆದ ಕರ್‌ಆನ್ ಅಧ್ಯನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು ಅವರ ಪ್ರವಚನವನ್ನು ನೀಡಿದರು. ಇಂದು ನಾವೆಲ್ಲರು ನಮ್ಮ ಜೀವನದ ಉದ್ದೇಶವನ್ನು ಅರಿಯದೇ ಬದುಕುತ್ತಿದ್ದೇವೆ, ನಾವು ಏಕೆ ಜನ್ಮವನ್ನು ತಾಳಿದ್ದೇವೆ, ನಮ್ಮ ಧರ್ಮಗ್ರಂಥಗಳು ಏನನ್ನು ಹೇಳುತ್ತವೆ, ಎಂಬ ಪ್ರಶ್ನೇಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವೇದಗಳು ಮತ್ತು ಕರ್‌ಆನ್ ಏಕದೇವೂಪಾಸನೆಯ ಸಂಂದೇಶವನ್ನು ಸಾರುತ್ತವೆ ನಮ್ಮನ್ನು ಸೃಷ್ಟಿಸಿದ ಆ ದೇವರು ಒಬ್ಬನೇ ಅವರಿಗೆ ಯಾವ ಜಾತಿ, ಲಿಂಗ, ಮತ್ತು ಮಕ್ಕಳಿಲ್ಲ ಅವನು ಸಕಲ ಸೃಷ್ಟಿಗಳ ಒಡೆಯ. ನಾವೆಲ್ಲರೂ ಅವನನ್ನು ಆರಾಧಿಸಬೇಕು ಹೊರೆತು ಅವನ ಸೃಷ್ಟಿಗಳನ್ನಲ್ಲ.
ಬಸವಣ್ಣನವರು ಮತ್ತು ಪ್ರವಾದಿಗಳು ಹೇಳಿದ್ದು ಇದನ್ನೆ ಈ ಮಹಾನ್ ವ್ಯಕ್ತಿಗಳು ಹೇಳಿದ್ದು ಅವರನ್ನು ಅನುಸರಿಸಿ, ಆದರೆ ಇಂದು ನಾವು ಅವರು ಹೇಳಿದನ್ನು ಮರೆತು ಅವರನ್ನು ಆರಾಧಿಸುತ್ತಿದ್ದೇವೆ ಅವರ ಜಯಂತಿಗಳ ಹೆಸರಲ್ಲಿ ದುಂದು ವೆಚ್ಚ ಮತ್ತು ಇತರರಿಗೆ ತೊಂದರೆಯನ್ನು ಕೊಡುತ್ತಿದ್ದೇವೆ ಇದೆಷ್ಟು ಸರಿ? ಬಸವಣ್ಣನವರು ಪ್ರವಾದಿಗಳು ಮತ್ತು ಇನ್ನೂ ಅನೇಕ ಮಹಾನ್ ವ್ಯಕ್ತಿಗಳು ತಮ್ಮ ಜಯಂತಿಯನ್ನು  ಅವರ ಬದುಕಿನಲ್ಲಿ ಅನುಸರಿಸಿಲ್ಲ ಕೊನೆಯದಾಗಿ ಅವರು ನಾವು ಆ ದೇವರ ದೈವ ಮಾರ್ಗವನ್ನು ಅನುಸರಿಸಿ ನಮ್ಮ ಜೀವನವನ್ನು ನಡೆಸಬೇಕೆಂದು ಹೇಳಿ ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.
ಕಾರ್ಯಕ್ರಮವನ್ನು ಜನಾಬ್ ಆಫ್ರಾಬ್ ಕುಷ್ಟಗಿ ನೀರೂಪಿಸಿದರು, ಜೆ.ಹೆಚ್. ನ ಸ್ಥಳಿಯ ಅಧ್ಯಕ್ಷರಾದ ಜನಾಬ್ ಅಬ್ಬುಲ್ ಶುಕರ್ ಮಂಗಳಾಪೂರ, ಜೆ.ಹೆಚ್. ಕೊಪ್ಪಳ ಜಿಲ್ಲಾ ಸಂಚಾಲಕರಾದ ಮಹಮಾದ್ ಆಲಮ ಬಡಗನ್ ಮತ್ತಿತರರು ಉಪಸ್ಥಿತರಿದ್ದರು. ಓಪ್ಪು ಸುಲ್ತಾನ ಕಾರ್ಯಕ್ರಮವನ್ನು ವಂದನಾರ್ಪಣೆಯನ್ನು ಅರ್ಪಿಸಿದರು.

Leave a Reply

Top