ಸಾಂಸ್ಕೃತಿಕ ಜಿಲ್ಲೆಯು ಹೆಚ್ಚು ಅಭಿವೃದ್ದಿಯಾಗಬೇಕು ಸಂಸದ ಶಿವರಾಮೇಗೌಡ

ಕೊಪ್ಪಳ ಆ ೨೬: ಕೊಪ್ಪಳ ಜಿಲ್ಲೆಯು ಭವ್ಯ ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದೆ. ಆದರೆ ಅದು ಸೂಕ್ತ ಬಳಕೆಯಾಗದೆ ಜಿಲ್ಲೆಯು ಹಿಂದೂಳಿದಿದೆ. ಈ ಹಿನ್ನಲೆ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಚರ್ಚೆಯಾಗಿ ಜಿಲ್ಲೆಯ ಅಭಿವೃದ್ದಿಗೆ ಸಲಹೆ ಸೂಚನೆಗಳು ಬರಲಿ ಎಂದು ಕೊಪ್ಪಳ ಸಂಸದ ಶಿವರಾಮೇಗೌಡ ಹೇಳಿದರು.
    ಕೊಪ್ಪಳ ಜಿಲ್ಲೆಯಾಗಿ ೧೬ ವರ್ಷಗಳಾದ ಸಂದರ್ಭದಲ್ಲಿ ಕಳೆದ ೭ ವರ್ಷಗಳಿಂದ ಸತತವಾಗಿ ಆಚರಿಸಿಕೊಂಡು ಬಂದಿರುವ ಜಿಲ್ಲಾ ಉತ್ಸವದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮಾಡಿ ಮಾತನಾಡಿದರು.
     ಹಿಂದೂಳಿದಿರುವ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಸರ್ಕಾರ ೩೭೧ ಜೆ ವಿಧಿ ಜಾರಿಗೊಳಿಸುತ್ತಿದೆ. ಈ ವಿಧಿಯನ್ನು ಬೇಗನೆ ಜಾರಿಗೊಳಿಸಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿ ಕೊಪ್ಪಳ ಜಿಲ್ಲೆ ಸೇರಿದಂತೆ ಈ ಭಾಗದ ಯುವಜನರಿಗೆ ಅವಕಾಶ ಸಿಗುವಂತೆ ಆಗಲಿ ಎಂದು ಹೇಳಿದರು.
    ಇದೇ ಸಂದರ್ಭದಲ್ಲಿ ಮಾತನಾಡಿದ ಕಸಾಪ ಪ್ರದಾನ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಸಾಂಸ್ಕೃತಿ ಹಿರಿಮೆ ಹೊಂದಿರುವ ಕೊಪ್ಪಳ ಜಿಲ್ಲೆಯ ಪ್ರತಿಭೆಗಳಿಗೆ ಸರ್ಕಾರದಿಂದ ಸೂಕ್ತ ಸ್ಥಾನಮಾನ ನೀಡುತ್ತಿಲ್ಲ. ನಿಗಮ ಮಂಡಳಿಗಳಲ್ಲಿ ಮತ್ತು ಪ್ರಶಸ್ತಿಗಳಲ್ಲಿ ಈ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
      ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು. ಕೊಪ್ಪಳ ಐಸಿರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವೇದಿಕೆಯಲ್ಲಿ ಕರವೇ ರಾಜ್ಯಾಧ್ಯಕ್ಷ ಶಿವರಾಮಗೌಡ, ಲಕ್ಷ್ಮಿ ಪ್ರಿಯ, ಅಂದಪ್ಪ ಮರೇಬಾಳ, ಪ್ರಭು ಹೆಬ್ಬಾಳ. ಡಾ ಆರ್.ಎ. ನರೇಗಲ್ ವಿರುಪಾಕ್ಷಯ್ಯ ಗದಗಿನಮಠ, ಜೆಡಿಎಸ್ ನಗರ ಯುವ ಘಟಕದ ಅಧ್ಯಕ್ಷ ಸ್ಯಯದ್ ಮಹಮೊದ್ ಹುಸೇನಿ, ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಶಕುಂತಲಾ ಹುಡೇಜಾಲಿ, ಮಾರುತಿ ರಾವ್ ಸುರ್ವೆ, ಸಂಗಮೇಶ್ ಬಾದವಾಡಗಿ ಸಿದ್ದಪ್ಪ ಹಂಚಿನಾಳ, ಎನ್.ಎಂ.ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಾರ್ಯಕ್ರಮ ಅಧ್ಯಕ್ಷಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ  ಜಿ.ಎಸ್.ಗೋನಾಳ ವಹಿಸಿದ್ದರು, ವೇದಿಕೆ ಜಿಲ್ಲಾಧ್ಯಕ್ಷ ಎಂ.ಸಾದಿಕ್ ಅಲಿ ಸ್ವಾಗತಿಸಿದರು. ರಾಜ್ಯಾಧ್ಯಕ್ಷ ಮಹೇಶ ಬಾಬು ಸುರ್ವೆ ಪ್ರಾಸ್ತಾವಿಕವಾಗಿ ಮಾತನಾಡಿದರು, ವೇದಿಕೆ ಪ್ರದಾನ ಕಾರ್ಯದರ್ಶಿ ಹನುಮಂತ ಹಳ್ಳಿಕೇರಿ ವಂದಿಸಿದರು.

ಹೈದ್ರಾಬಾದ್ ಕರ್ನಾಟಕ ಪ್ರದೇಶದ ಜನತೆಗೆ ಜಾಗೃತಿ ಮೂಡಿಸಬೇಕು 
ಕೊಪ್ಪಳ ಆ ೨೬: ಹೈದ್ರಾಬಾದ್ ಕರ್ನಾಟಕ ಜನತೆಯ ಸುದೀರ್ಘ ಹೋರಾಟದ ಫಲವಾಗಿ ಈಗ ಸಂವಿದಾನದ ೩೭೧ ಜೆ ವಿಧಿ ಜಾರಿಯಾಗುತ್ತಿದೆ. ಇದರ ಲಾಭ ಇದೇ ಭಾಗಕ್ಕೆ ಸಿಗಬೇಕೆಂದರೆ ಈ ಭಾಗದ ಜನತೆ ಪಕ್ಕದ ಜಿಲ್ಲೆಯಿಂದ ನುಸುಳುವುದನ್ನು ತಡೆಯಬೇಕೆಂದು ಮತ್ತು ಈ ಎಲ್ಲಾ ಸೌಲಭ್ಯಗಳ ಕುರಿತು ಈ ಭಾಗದ ಜನತೆಗೆ ಜಾಗೃತಿ ಮೋಡಿಸುವ ಕೆಲಸ ಇಂತಹ ವೇದಿಕೆಗಳಿಂದ ಆಗಬೇಕಿದೆ ಎಂದು ಪತ್ರಕರ್ತ ಸೋಮರಡ್ಡಿ ಅಳವಂಡಿ ಅವರು ಪ್ರತಿಪಾದಿಸಿದರು.
     ಅವರು ಕೊಪ್ಪಳ ಜಿಲ್ಲಾ ಉತ್ಸವದ ಹಿನ್ನಲೆಯಲ್ಲಿ ನಡೆದ ಉಪನ್ಯಾಸಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ವೇಳೆ ೩೭೧ ಜೆ ಮುಂದೇನು ಎಂಬ ವಿಷಯದ ಮೇಲೆ ಉಪನ್ಯಾಸ ಮಾಡಿದ ಅವರು ೩೭೧  ಅನುಷ್ಠಾನದ ಸಂದರ್ಭದಲ್ಲಿ ಹೈದ್ರಾಬಾದ ಕರ್ನಾಟಕದ ಪ್ರದೇಶಕ್ಕೆ ಮೀಸಲಾತಿಗಾಗಿ ಪಕ್ಕದ ಜಿಲ್ಲೆಯವರು ಬಂದು ಇಲ್ಲಿ ವಾಸಸ್ಥಳ ಪ್ರಮಾಣ ಪತ್ರ ಪಡೆಯುವ ಸಾದ್ಯತೆ ಇದೆ ಅದಕ್ಕೆ ಈ ಭಾಗದ ಜನತೆ ಜವಾಬ್ದಾರಿಯಿಂದ ಇಲ್ಲಿಯ ವಾಸಸ್ಥಳ ದಾಖಲೆಯಾಗದಂತೆ ನೋಡಿಕೊಳ್ಳಬೇಕೆಂದು ಹೇಳಿದರು.
    ೩೭೧ ಪರಿಣಾಮಕಾರಿ ಅನುಷ್ಠಾನಗೊಳ್ಳಲು ಜನತೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
  ಇದೇ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಎಂಬ ವಿಷಯದ ಮೇಲೆ ಮಂಡನೆ ಮಾಡಿದ ಇನ್ನೊಬ್ಬ ಪತ್ರಕರ್ತ ಶರಣಪ್ಪ ಬಾಚಲಾಪೂರ ಕೊಪ್ಪಳ ಜಿಲ್ಲೆ ಕೇವಲ ಬರಪೀಡಿತ ಜಿಲ್ಲೆಯಾಗಿರದೆ ಇದು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿರುವ ಜಿಲ್ಲೆಯಾಗಿದೆ. ಆದರೆ ಇಲ್ಲಿ ಸಾಂಸ್ಕೃತಿಕ ಪರಂಪರೆಯ ಮೇಲೆ ಅರಿವು ಇಲ್ಲದೆ ದಾಳಿ ನಡೆಯುತ್ತಿದೆ ಅದನ್ನು ತಡೆಗಟ್ಟಬೇಕೆಂದು ಹೇಳಿದರು.
     ಜಿಲ್ಲೆಯಲ್ಲಿಯ ಕಿಷ್ಕಿಂಧಾ ಪ್ರದೇಶ ಮತ್ತು ಹನುಮನ ನಾಡು ಎಂಬುವದರ ಬಗ್ಗೆ ನಮ್ಮ ಜನತೆಗೆ ಅರಿವು ಇಲ್ಲದೆ ಈ ಪ್ರದೇಶವು ಅಷ್ಟಾಗಿ ಬೆಳಕಿಗೆ ಬಂದಿಲ್ಲ. ಅಲ್ಲದೆ ನಾಡಿನ ಹಿರಿಮೆ ಹೆಚ್ಚುಸುವ ಜನಪದ ಕಲೆಗಳ ರಕ್ಷಣೆ ಇಲ್ಲದೆ ಹಾಳಾಗುತ್ತಿದೆ. ಈ ಬಗ್ಗೆ ಚಿಂತಿಸಬೇಕಾಗಿದೆ ಎಂದು ಹೇಳಿದರು.
   ಈ ಸಂದರ್ಭದಲ್ಲಿ ಕಸಾಪ ಪ್ರಧಾನ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ. ಹಿರಿಯ ಸಾಹಿತಿ ಮಹಾಂತೇಶ ಮಲ್ಲನಗೌಡರ, ಜಿ ಎಸ್ ಗೋನಾಳ, ಮಹೇಶ ಬಾಬು ಸುರ್ವೇ, ಸಾದಿಕ್ ಅಲಿ, ಸಿದ್ದಪ್ಪ ಹಂಚಿನಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Please follow and like us:
error

Related posts

Leave a Comment