‘ಅನ್ಮೊಲ್ ರತ್ನ’ ಪ್ರಶಸ್ತಿಗೆ ಹನುಮಂತಪ್ಪ ಅಂಡಗಿ ಆಯ್ಕೆ.

ಕೊಪ್ಪಳ-16- ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರು ಹಾಗೂ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿಯವರನ್ನು ‘ಅನ್ಮೊಲ್ ರತ್ನ’ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು  ಅನ್ಮೋಲ್ ಟೈಮ್ಸ್ ಪತ್ರಿಕೆಯ ಸಂಪಾದಕರಾದ ಎಂ.ಎ.ವಲಿಸಾಹೇಬ್ (ಹಕೀಂಸಾಹೇಬ್) ತಿಳಿಸಿದ್ದಾರೆ.
    ಅನೆಲ್ ಟೈಮ್ಸ್ ಕನ್ನಡ ಹಾಗೂ ಇಂಗ್ಲೀಷ ದಿನ ಪತ್ರಿಕೆಯ ವಾರ್ಷಿಕೋತ್ಸವದ ಅಂಗವಾಗಿ ಅನೆಲ್ ಜೀಯಾ ಟ್ರಸ್ಟ್ ವತಿಯಿಂದ ಅನೆಲ್ ಉತ್ಸವ -೨೦೧೫ ರ ಅಂಗವಾಗಿ ಅಕ್ಟೋಬರ್ ೨೧ ರಂದು ಬೆಳಗ್ಗೆ ೧೦:೦೦ ಗಂಟೆಗೆ ಹೊಸಪೇಟೆಯ ಸೆಕ್ರೇಡ್ ಹಾರ್ಟ ಚರ್ಚನ ಫಂಕ್ಷನ್ ಹಾಲ್‌ನಲ್ಲಿ ಪ್ರಶಸ್ತಿ ಪ್ರದಾನ ಸ
    ಹನಮಂತಪ್ಪ ಅಂಡಗಿ ಚಿಲವಾಡಗಿಯವರು ಚುಟುಕು ಸಿರಿ, ಚುಟುಕು ತರಂಗ, ಕಾಯಕ ಸಿರಿ, ಗವಿಬೆಳಕು, ಗವಿಸಿರಿ, ಶರಣ ಪಥಿಕ, ಗಾನಯೋಗಿ, ಮೂಗುತಿ ಮಹಿಮೆ, ದಕ್ಷ ಆಡಳಿತಗಾರ, ಸಹೃದಯಿ, ಹಾಡು ಪಾಡು, ಜ್ಞಾನ ದೀಪ್ತಿ, ಜಾನಪದ ಸಿರಿ, ರಂಗಭೂಮಿಯ ಜಂಗಮ, ಸ್ವಾತಂತ್ರ್ಯ ಸೇನಾನಿ ಶಂಕ್ರಪ್ಪ ಯರಾಶಿ, ಅಪರಿಮಿತದ ಬೆಳಗು, ಕಂಬಾರರಿಗೆ ಜ್ಞಾನ ಪೀಠ ಅಭಿನಂದನೆ, ಸಾರ್ಥಕ ಬದುಕು, ಕರ್ನಾಟಕದ ಹುಲಿ, ಚೈತನ್ಯಶೀಲ ಸಂಶೋಧಕ, ಮರೆಯಲಾಗದ ನೆನಪುಗಳು ಗ್ರಂಥಗಳನ್ನು ಸಂಪಾದಿಸಿ ಹೊರತಂದಿದ್ದಾರೆ. ಒಡಲಿಲ್ಲದಂಬಿಗ ಇವರ ಪ್ರಥಮ ಸ್ವತಂತ್ರಕೃತಿಯಾಗಿದೆ. ಒಟ್ಟಾರೆ ಇವರ ಸಾಹಿತ್ಯಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಎಂ.ಎ.ವಲಿಸಾಹೇಬ್ (ಹಕೀಂಸಾಹೇಬ್) ತಿಳಿಸಿದ್ದಾರೆ.

ಮಾರಂಭ ಜರುಗಲಿದೆ.

Leave a Reply