ಬಾಲಕಿಯರ ಪ.ಪೂ ಕಾಲೇಜಿಗೆ ಕೊಠಡಿ ಒದಗಿಸಲು ಶಾಸಕ ಆನಂದಸಿಂಗ್ ಸೂಚನೆ

ಹೊಸಪೇಟೆ: ನಗರದ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ನಗರಸಭೆಯ ಹಿಂದಿನ ಕಚೇರಿಯನ್ನು ಹೆಚ್ಚುವರಿಯಾಗಿ ಒದಗಿಸಬೇಕೆಂದು ಶಾಸಕ ಆನಂದ್ ಸಿಂಗ್ ಹೇಳಿದರು.
ನಗರದಲ್ಲಿ ಬುಧವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸಭೆಯಲ್ಲಿ ಈ ತೀರ್ಮಾನವನ್ನು ಕೈ ಬಿಡಬೇಕೆಂದು ತೀರ್ಮಾನಿಸಿದ್ದು ಸರಿಯಲ್ಲ. ಈ ವಿಷಯವನ್ನು ಪುನಃ ವಿಷಯಕ್ಕೆ ತಂದು ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ತೀರ್ಮಾನ ಕೈಗೊಳ್ಳಬೇಕೆಂದರು. 
ನಗರದ ಹೊರವಲಯದಲ್ಲಿರುವ ೫೧ ಏಕರೆ ಭೂಮಿಯನ್ನು ನಿವೇಶನವನ್ನಾಗಿ ಪರಿವರ್ತಿಸಿ, ಬಡಜನರಿಗೆ ನಿವೇಶನ ಹಂಚಲು ಅನುಕೂಲವಾಗುವಂತೆ ವಿಶೇಷ ಸಭೆ ಕರೆದು ತೀರ್ಮಾನಿಸಬೇಕೆಂದರು. ನಗರದ ತರಕಾರಿ ಮಾರುಕಟ್ಟೆ ಪ್ರದೇಶದಲ್ಲಿರುವ ೧೪೦ ಮಳಿಗೆಗಳನ್ನು ಧ್ವಂಸಗೊಳಿಸಿ ಹೊಸ ವಾಣಿಜ್ಯ ಸಂಕೀರ್ಣ ನಿರ್ಮಿಸಲು ತೀರ್ಮಾನ ಕೈಗೊಳ್ಳಬೇಕು. ರಾಜೀವ್ ನಗರದಲ್ಲಿರುವ ಉದ್ಯಾನವನದ ಆಕ್ರಮ ತಡೆಗಟ್ಟಲು ವಕೀಲರ ಸಲಹೆ ಪಡೆದು ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕು. ಈ ಎಲ್ಲಾ ವಿಷಯಗಳ ಬಗ್ಗೆ ತೀರ್ಮಾನ ಕೈಗೊಳ್ಳಲು ಇದೇ ದಿ.೨೬ಂದು ವಿಶೇಷ ಸಭೆ ನಡೆಸಬೇಕೆಂದರು. ಇದಕ್ಕೆ ಎಲ್ಲಾ ಸದಸ್ಯರು ಸಹಮತ ವ್ಯಕ್ತ ಪಡಿಸಿದರು. ಸಭೆಯ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಕಣ್ಣಿ ಉಮಾದೇವಿ ವಹಿಸಿದ್ದರು. ಉಪಾಧ್ಯಕ್ಷೆ ಗೌಸಿಯಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ಕುಲ್ಲಾಯಪ್ಪ, ಎಲ್ಲಾ ಸದಸ್ಯರು ಹಾಜರಿದ್ದರು.
ಪೌರಾಯುಕ್ತ ಮಹಮದ್ ಮುನೀರ್ ಆರಂಭದಲ್ಲಿ ಸಭೆಯ ಹಿಂದಿನ ನಡುವಳಿಕೆಗಳನ್ನು ಪ್ರಸ್ತಾಪಿಸಿದರು. ಚರ್ಚೆಯಲ್ಲಿ ನಗರಸಭೆ ಸದಸ್ಯರಾದ ತ.ಚಿದಾನಂದ, ಎಂ.ಎಸ್. ರಘು, ಕೆ.ಮಲ್ಲಪ್ಪ, ಗುಡುಗುಂಟೆ ಮಲ್ಲಿಕಾರ್ಜುನ, ಚಂದ್ರಕಾಂತ ಕಾಮತ್, ಗಿಂಜಿ ಮಂಜುನಾಥ, ಕೆ.ಗೌಸ್ ಮತ್ತಿತರರು ಭಾಗವಹಿಸಿದ್ದರು. ಹಿಂದಿನ ಸಭೆಯಲ್ಲಿ ನಡುವಳಿಗಳನ್ನು ಧೃಡೀಕರಿಸಲು ಮಾತ್ರ ಈ ಸಭೆಯಲ್ಲಿ ಸಾಧ್ಯವಾಯಿತು.
Please follow and like us:
error

Related posts

Leave a Comment