ಮತದಾರರ ಪಟ್ಟಿ ಪರಿಶೀಲಿಸಲು ಸೂಚನೆ

ಸ್ಥಳೀಯ ಸಂಸ್ಥೆ ಚುನಾವಣೆ : 
  ವಿಧಾನಸಭಾ ಕ್ಷೇತ್ರವಾರು ಮತ್ತು ನಗರ ಸಭೆಯ ವಾರ್ಡುವಾರು ಮತದಾರರ ಪಟ್ಟಿಗಳು ಬೇರೆ ಬೇರೆ ಇರುತ್ತವೆ. ನಗರ ಪ್ರದೇಶದ ಮತದಾರರು ತಮ್ಮ ಹೆಸರಿರುವ ಭಾಗ ಸಂಖ್ಯೆ, ಮತದಾನ ಕೇಂದ್ರ ಮತ್ತು ಕ್ರಮ ಸಂಖ್ಯೆಗಳನ್ನು ಚುನಾವಣಾ ಪೂರ್ವದಲ್ಲಿಯೇ ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.
ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆಗಾಗಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಪ್ರಕಟಿಸಿದ ಮತದಾರರ ಪಟ್ಟಿಗಳನ್ನು ಮಾತ್ರ ಬಳಸಲಾಗುವುದು. ಕಾರಣ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ನಗರ ಸ್ಥಳೀಯ ಸಂಸ್ಥೆಗಳ ಮತದಾರರ ಪಟ್ಟಿಗಳನ್ನು ಮಾತ್ರ ಬಳಸಬೇಕು. ಹೆಚ್ಚಿನ ಮಾಹಿತಿ ಅವಶ್ಯಕತೆಯಿದ್ದಲ್ಲಿ ಸಂಬಂಧಪಟ್ಟ ತಹಶೀಲ್ದಾರರ ಕಛೇರಿಯ ಚುನಾವಣಾ ಶಾಖೆಯನ್ನು ಸಂಪರ್ಕಿಸಬಹುದು.

Related posts

Leave a Comment