You are here
Home > Koppal News > ರೈತರ ಸಮಸ್ಯೆಗಳ ಕುರಿತು ವಿಚಾರ ಸಂಕಿರ್ಣ

ರೈತರ ಸಮಸ್ಯೆಗಳ ಕುರಿತು ವಿಚಾರ ಸಂಕಿರ್ಣ

            ಶಾಸಕರಿಗೆ ಸನ್ಮಾನ ಸಮಾರಂಭ 
ಕೊಪ್ಪಳ : ಕೊಪ್ಪಳ ಜಿಲ್ಲೆ ಸೇರಿಂದತೆ ಕರ್ನಾಟಕ ರಾಜ್ಯದಲ್ಲೆ ಆವರಿಸಿದ  ಬರಗಾಲದ ಛಾಯೆ ವಿದ್ಯುತ ಸಮಸ್ಯೆ ಧ್ಯಾನಗಳ ಬೆಂಬಲ ಬೆಲೆ, ಕಬ್ಬುದರ ನಿಗದಿ, ಮುಂಗಾರು ಬೆಳೆಗಳ ಮತ್ತು ಹಿಂಗಾರು ಬೆಳೆಗನ್ನು ರೈತರು ಸಂಪೂರ್ಣ ಕಳೆದುಕೊಂಡಿದ್ದು   ರೈತರ ಅನೇಕ ಜ್ವಲಂತ ಸಮಸ್ಯೆಗಳ ಕುರಿತು  ಇದೆ ದಿನಾಂಕ ೦೬-೧೧-೨೦೧೧ ರಂದು ಬೆಳಿಗ್ಗೆ ೧೧ ಗಂಟೆಗೆ ಕೊಪ್ಪಳ ನಗರದ  ಕೃಷಿ ಉತ್ಪನ ಮಾರುಕಟ್ಟೆಯ ರೈತರ ಸಬಾಂಗಣದಲ್ಲಿ ರೈತರ ಸಮಸ್ಯೆಗಳ ಕುರಿತು ವಿಚಾರ ಸಂಕಿರ್ಣ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ.ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸುವರು
ಬ್ರಹ್ಮಶ್ರೀ   ವೀರಭದ್ರಮಹಾಸ್ವಾಮಿಗಳು  ಜೋತಿಬೆಳಗಿಸುವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು   ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ಸಂಸ್ಥಾಪಕರಾದ ಅಧ್ಯಕ್ಷ ಎಸ್.ಆರ್.ಸ್ವಾಮಿ ವಹಿಸುವರು 
ಇದೇ ಸಂದರ್ಭದಲ್ಲಿ  ಉಪಚುನಾವಣೆಯಲ್ಲಿ ಮರುಆಯ್ಕೆಯಾದ ಕರಡಿ ಸಂಗಣ್ಣನವರನ್ನು ಹಾಗೂ ಉ.ಕಾ.ಸಂಘದ ಗೌರವ ಅಧ್ಯಕ್ಷರಾದ ಜಿ.ಖಾಜಾಹುಸೇನ. ಅವರು ತೊಟಗಾರಿಕಾ ತರಬೇತಿಗಾಗಿ ವಿದೇಶ ಪ್ರವಾಸ ಮಾಡಿದ ಪ್ರಯುಕ್ತ ಮತ್ತು  ನಿರಂತರ ರೈತರ ಸೇವೆಯಲ್ಲಿ ದುಡಿದ ರೈತ ಮುಖಂಡರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಕಾರ್ಯಕ್ರಮದಲ್ಲಿ ರೈತರ ಮುಖಂಡರಾದ  ಹೆ.ಜಿ.ಅಮರೇಶ, ಲಕ್ಷ್ಮಣಗೌಡ ಬಿರಾದರ ಬಿಜಾಪುರ, ಬಸವರಾಜ ಪೈಲವಾನ್ ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದು  ಜಗದೀಶ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ 

Leave a Reply

Top