ದೀಪಾವಳಿ ವಿಶೇಷಾಂಕ – ಚುಟುಕುಗಳು- ಅಕ್ಬರ್ ಕಾಲಿಮಿರ್ಚಿ

ಅಳು
ಸತ್ತವರಿಗೆ ಅಳುವದರಲ್ಲಿ
ಅರ್ಥವಿಲ್ಲ;
ಇದ್ದವರ ಬದುಕು
ಸತ್ತಂತ್ತಿದ್ದರೆ ಅಳು
ಅರ್ಥಪಡೆಯುತ್ತದೆ
ಲಾಭ
ಈಗ ಎಲ್ಲದರಲ್ಲೂ
ಹುಡುಕುತ್ತಾರೆ ಲಾಭ
ಕನಿಷ್ಟ ಸಿಕ್ಕರೂ ನಡೆದೀತು
ಢಾಬಾ
ಅಂತರ
ಆಗ ಸತ್ಯವೇ
ದೇವರು,
ಈಗ ಸತ್ಯ ಹೇಳುವದೇ
ಕಷ್ಟದ ಬೆವರು
ಹಡೆದಾಕಿ
ಯಾವುದಕ್ಕೂ
ಹೋಲಿಸದ ಶಬ್ದ,
ಅಗಾಧ ಪ್ರೀತಿಯ
ಕಡಲು,
ಹೋಲಿಕೆ
ಸತ್ಯ ಸಾಯದು
ಎಂಬುದಕ್ಕೆ
ಆತ್ಮ ಅಮರ
ಎಂಬುದೇ ಸಾಕ್ಷಿ

Related posts

Leave a Comment