ಸಂಗಣ್ಣ ಕರಡಿ ಪರ ಪುತ್ರಿ ವಿನಿತಾ ವಿಜಯಕುಮಾರ ಬಿರುಸಿನ ಪ್ರಚಾರ

ಕೊಪ್ಪಳ, ಏ.೨೮: ಕೊಪ್ಪಳ ವಿಧಾನಸಭೆ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕ ಸಂಗಣ್ಣ ಕರಡಿಯವರ ಪರ ಅವರ ಪುತ್ರಿ ವಿನಿತಾ ವಿಜಯಕುಮಾರ ಪಟ್ಟಣ ಶೆಟ್ಟಿ, ಸೊಸೆಯಂದಿರಾದ ಮಂಜುಳಾ ಅಮರೇಶ ಕರಡಿ, ಶೀಲ್ಪಾ ಗವಿಸಿದ್ದಪ್ಪ ಕರಡಿ  ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಅವರು ಸಮೀಪದ ಭಾಗ್ಯನಗರದ ಧನ್ವಂತರಿ ಕಾಲೋನಿಯಲ್ಲಿ ಪ್ರತಿ ಮನೆ ಮನೆಗಳಿಗೆ ತೆರಳಿ ತಂದೆಯವರ ಪುನರಾಯ್ಕೆಗೆ ಕೈಜೋಡಿಸುವಂತೆ ಮನವಿ ಮಾಡಿದರು. ಕ್ಷೇತ್ರದ ಸರ್ವಾಂಗೀಣ ಅಭಿವ್ರೃದ್ಧಿ ಮೂಲಕ ಮಾದರಿ ಕ್ಷೇತ್ರವನ್ನಾಗಿಸುವುದೇ ತಂದೆಯವರ ಗುರಿಯಾಗಿದ್ದು ತಾವೆಲ್ಲಾ ಬೆಂಬಲಿಸವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಮಹಿಳೆಯರು ಹಾಗೂ ಯುವಕಾರ್ಯಕರ್ತರು ಹಾಜರಿದ್ದರು.

Related posts

Leave a Comment