ಸ್ತಬ್ದಚಿತ್ರ ಹಾಗೂ ಅಧ್ಯಕ್ಷರ ಮೆರವಣಿಗೆಗೆ ಅದ್ದೂರಿ ಚಾಲನೆ

http://gangavathisammelana.blogspot.com/2011/12/blog-post_3728.html

ಅಖಿಲ ಭಾರತ ೭೮ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ತಬ್ದಚಿತ್ರ ಹಾಗೂ ಅಧ್ಯಕ್ಷರ ಮೇರವಣಿಗೆಗೆ ಅದ್ದೂರಿ ಚಾಲನೆ ನೀಡಲಾಯಿತು. ಸಮ್ಮೇಳನದ ಸ್ವಾಗತ ಸಮೀತಿಯ ಅಧ್ಯಕ್ಷರು ಹಾಗೂ ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಮೇರವಣಿಗೆಗೆ ಚಾಲನೆ ನೀಡಿದರು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರಿ ಸಚಿವರಾದ ಲಕ್ಷ್ಮಣ ಸವದಿ ರಾಷ್ಟ್ರಧ್ವಜಾರೋಹಣ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ ಕನ್ನಡ ಬಾವುಟ ಹಾರಿಸಿದರು.


ಮೇರವಣಿಗೆಯಲ್ಲಿ ಹಂಪಿಯ ಕಲ್ಲಿನ ತೇರು, ಕನಕಗಿರಿಯ ಕನಕರಾಯನ ದೇವಾಲಯದ  ಯ ಸ್ತಬ್ದ ಚಿತ್ರಗಳು ಮೆರವಣಿಗೆಗೆ ಮೆರಗುತಂದಿದ್ದವು.  ಒಣಕೆ ಓಬವ್ವ . ಚನ್ನಬಸವಸ್ವಾಮಿ, ಅಕ್ಕಮಹಾದೇವಿ ವೇಷದಾರಿಗಳು ಕನ್ನಡಿಗರನ್ನು ತಮ್ಮತ್ತ sಸೆಳೆದಿದ್ದರು.
Please follow and like us:
error