ಕವನ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟ.

ಕೊಪ್ಪಳ-29- ೬೦ ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನೇಹ ಸಾಂಸ್ಕೃತಿ ವೇದಿಕೆ ವತಿಯಿಂದ ಹಮ್ಮಿಕೊಂಡ ಕವನ ರಚನಾ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ಗಂಗಾವತಿಯ ಜಿ. ಶರಶಂದ್ರ ರಾನಡೆಯವರು ರಚಿಸಿದ ‘ಯುವಕರೆ ದೇಶ ಕಟ್ಟುವ ಬನ್ನಿ’ ಕವನ ಪ್ರಥಮ, ಕೆ. ಸುಭಾಶ್ಚಂದ್ರ ಮೇಟಿ ಅವರ ‘ಹಸಿದಾಳ ನೆಲದವ್ವ’ ಕವನ ದ್ವಿತೀಯ, ಅಲ್ಲಾವುದ್ದೀನ್ ಯಮ್ಮೀ ರಚಿಸಿದ ‘ನನ್ನಮ್ಮ’ ಕವನ ತೃತೀಯ ಸ್ಥಾನ ಪಡೆದಿವೆ. ಶ್ರೀನಿವಾಸ ಚಿತ್ರಗಾರರ ‘ಮನದ ಮನೆ’, ಮಂಜುನಾಥ ಚಿತ್ರಗಾರರ ‘ಕನ್ನಡಾಂಬೆ’ ಕವನಗಳು ಸಮಾಧಾನಕರ ಬಹುಮಾನ ಪಡೆದಿವೆ. ಬಹುಮಾನ ವಿಜೇತರಿಗೆ ನವಂಬರ್ ೧ ರಂದು ಸಂಜೆ ನಡೆಯುವ ಕರ್ನಾಟಕ ರಾಜ್ಯೋತ್ಸವದಂದು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಗುವದೆಂದು ನೇಹ ಸಾಂಸ್ಕೃತಿ ವೇದಿಕೆಯ ಅಧ್ಯಕ್ಷರಾದ ಡಾ. ಮಹಾಂತೇಶ ಮಲ್ಲನಗೌಡರ ತಿಳಿಸಿದ್ದಾರೆ.
Please follow and like us:
error