ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಗೆ ನೇಮಕಕೊಪ್ಪಳ :. ದಲಿತ ಸಾಹಿತ್ಯ ಪರಿಷತ್ ನಿಂದ ನಡೆಯುವ ೩ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜೂನ್ ೧೮ ಮತ್ತು ೧೯ ರಂದು ಕೊಪ್ಪಳದಲ್ಲಿ ನಡೆಯಲಿದ್ದು ಕೊಪ್ಪಳ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಡಾ. ಅರ್ಜುನ ಗೊಳಸಂಗಿಯವರ ಸಲಹೆಯಂತೆ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಪತ್ರಕರ್ತ ನಾಗರಾಜ ಸುಣಗಾರ, ಖಜಾಂಚಿಯಾಗಿ ಯುವ ಮುಖಂಡ ಗೂಳಪ್ಪ ಹಲಗೇರಿ ಮತ್ತು ಸಹ ಕಾರ್ಯದರ್ಶಿಯಾಗಿ ಈರಪ್ಪ ಚಿರ್ಚನಗುಡ್ಡರನ್ನು ಆಯ್ಕೆ ಮಾಡಲಾಗಿದ್ದು ಮುಂಬರುವ ಸಮ್ಮೇಳನ ಮತ್ತು ಸಂಘಟನೆಯನ್ನು ಬಲಪಡಿಸಿ ಸಾಹಿತ್ಯಕ ವಾತಾವರಣವನ್ನು ಹಾಗೂ ಬರಹಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಸೂಚಿಸಿ ಜಿಲ್ಲಾಧ್ಯಕ್ಷ ಮಂಜುನಾಥ ಗೊಂಡಬಾಳ ಪ್ರಕಟಣೆ ನೀಡಿದ್ದಾರೆ
Please follow and like us:
error