ಅಭಿವೃಧ್ಧಿಗೆ ಮತ ನೀಡಿ- ಕರಡಿ ಸಂಗಣ್ಣ

ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಸರಕಾರದ ಅವಧಿಯಲ್ಲಿ ಕೈಗೊಳ್ಳಲಾದ ರೈತರ ಸಂಜೀವಿನಿಯಾದ ಸಿಂಗಟಾಲೂರು ಏತ ನೀರಾವರಿ,ಕಲ್ಮಲಾ-ಶಿಗ್ಗಾಂವ ರಸ್ತೆ ನಿರ್ಮಾಣ,ಮೆಡಿಕಲ್ ಕಾಲೇಜು,ಇಂಜಿನೀಯರಿಗ್ ಕಾಲೇಜು ಇನ್ನೂ ಮುಂತಾದ ಅಭಿವೃಧ್ಧಿ ಕಾಮಗಾರಿಗಳನ್ನು ಮೆಚ್ಚಿ ನನಗೆ ಮತ ನೀಡಬೇಕೆಂದು ಬಿಜೆಪಿ ಅಭ್ಯರ್ಥಿಯಾದ ಕರಡಿ ಸಂಗಣ್ಣವರು ಮತಯಾಚಿಸಿದರು.
ಅವರು ಗುಡಿಗೇರಿ,ಕವಲೂರು,ಮುರ್ಲಾಪುರ,ಘಟ್ಟಿರೆಡ್ಡಿಹಾಳ ಮತ್ತು ಹಟ್ಟಿ ಮುಂತಾದ ಗ್ರಾಮಗಳಲ್ಲಿ ಚುನವಣಾ ಪ್ರಚಾರ ನಡೆಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಗಳ ಅಭಿವೃಧ್ಧಿಗೆ ೨೧ಕೋಟಿ ರೂಗಳ ಅನುದಾನ ಬಿಡುಗಡೆಯಾಗಿದೆ ಅಲ್ಲದೇ ಕವಲೂರು ಗ್ರಾಮದಲ್ಲಿ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ

ನಿರ್ಮಾಣ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಕವಲೂರು ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಸುವರ್ಣ ಗ್ರಾಮ ಯೋಜನೆ ಮುಂತಾದ ಅಭಿವೃಧ್ಧಿ ಕಾರ್ಯಗಳನ್ನು ಬೆಂಬಲಿಸಿ ಮತಯಾಚಿಸಿದರು.

ಈ ಒಂದು ಪ್ರಚಾರ ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ ಮಾಜಿ ಅಧ್ಯಕ್ಷ ಸಂಗಮೇಶ ಡಂಬಳ,ಮಾಜಿ ತಾ.ಪಂ ಸದಸ್ಯರಾದ ಮಹಾಂತೇಶ ಪಾಟೀಲ್,ಮಾಜಿ ಎಪಿಎಂಸಿ ಉಪಾಧ್ಯಕ್ಷರಾದ ಜಯಪ್ಪ ತಿಗರಿ,ತಾ.ಪಂ ಸದಸ್ಯರಾದ ವೀರೇಶ ಸಜ್ಜನ,ಹಾಲೇಶ ಕಂದಾರಿ,ಮಲ್ಲಣ್ಣ ಚಳ್ಳಿನ್,ಸಿದ್ದು ಮ್ಯಾಗೇರಿ,ಪ್ರಕಾಶ ಯಾರಶಿ,ರಘುನಾಥ,ಪ್ರಭು,,ವೀರಯ್ಯ ಸೋಮಯ್ಯ ಸ್ವಾಮಿ,ಬಸವರಾಜ ಕವಿತಾಳ,ಎಮ್.ಎಸ್.ದೇಸಾಯಿ ಮತ್ತು ಗ್ರಾಮದ್ ಯುವಕರು ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ಬಿಜೆಪಿ ಮುಖಂಡರಾದ ಹಾಲೇಶ ಕಾಂದರಿವವರು ತಿಳಿಸಿದ್ದಾರೆ.

Related posts

Leave a Comment